Advertisement

ಆ. 18: ದಶಮಾನೋತ್ಸವ ಸಂಭ್ರಮ

10:11 AM Aug 16, 2019 | Suhan S |

ಮುಂಬಯಿ, ಆ. 15: ಮಲಾಡ್‌ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ದಶಮಾನೋತ್ಸವ ಸಮಾರಂಭ, 10ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಯಕ್ಷಗಾನ ಪ್ರದರ್ಶನ, ಯುವ ಪ್ರತಿಭೆಗಳಿಗೆ ಸಮ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮವು ಆ. 18ರಂದು ಮಲಾಡ್‌ ಪೂರ್ವದ ಬಚ್ಚಾನಿ ನಗರದ, ಚಿಲ್ಡ್ರನ್ಸ್‌ ಅಕಾಡೆಮಿ ಶಾಲೆಯ ಆವರಣದಲ್ಲಿ ನಡೆಯಲಿದೆ.

Advertisement

ಕಾರ್ಯಕ್ರಮದ ವಿವರ:

ಅಂದು ಬೆಳಗ್ಗೆ 9ರಿಂದ 10ರ ತನಕ ಸದಾನಂದ ಕೋಟ್ಯಾನ್‌ ಮತ್ತು ತಂಡದವರಿಂದ ಭಜನ ಸಂಕೀರ್ತನೆ ನೆಡೆಯಲಿದೆ. ಆನಂತರ ಮಲಾಡ್‌ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ 10ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಉದ್ಘಾಟನೆ, ಮಲಾಡ್‌ ಕುರಾರ್‌ ವಿಲೇಜ್‌ ಶ್ರೀ ಶನೀಶ್ವರ ದೇವಸ್ಥಾನದ ವೇದಮೂರ್ತಿ ರಾಘವೇಂದ್ರ ತುಂಗ ಭಟ್, ಮಲಾಡ್‌ ಪೂರ್ವ ತಾನಾಜಿ ನಗರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಾಘವೇಂದ್ರ ಭಟ್ ಸೂಡ, ಮಲಾಡ್‌ ಪೂರ್ವ ತತಾಸ್ತು ಫೌಂಡೇಶನ್‌ನ ಅಧ್ಯಕ್ಷರಾದ ವೇದಮೂರ್ತಿ ಸತೀಶ್‌ ಭಟ್, ಮಲಾಡ್‌ ಪೂರ್ವ ಶಿವ ಭವಾನಿ ಶಂಕರ ದೇವಸ್ಥಾನದ ಸದಾಶಿವ ಆಚಾರ್ಯ, ಮಲಾಡ್‌ ಪೂರ್ವ ಕುರಾರ್‌ ಶ್ರೀ ಮೂಕಾಬಿಕಾ ದೇವ ಸ್ಥಾನದ ವೇದಾನಂದ ಸ್ವಾಮೀಜಿ, ಕುರಾರ್‌ ಶ್ರೀ ಮಹಾಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ರವಿ ಸ್ವಾಮೀಜಿ, ಇರಾನಿ ಚಾಲ್ನ ಶ್ರೀ ಶನೀಶ್ವರ ದೇವಸ್ಥಾನದ ಭುವಾಜಿ ಎಸ್‌. ಯು. ಬಂಗೇರ, ಮಲಾಡ್‌ ಪೂರ್ವ ಗೋವಿಂದ ನಗರ ಶ್ರೀ ಅಂಬಿಕಾ ದೇವಸ್ಥಾನದ ಸಂತೋಷ್‌ ದೇವಾಡಿಗ ಉಪಸ್ಥಿತರಿರುವರು.

ಪೂರ್ವಾಹ್ನ 11ರಿಂದ ಯಕ್ಷಗುರು ನಾಗೇಶ್‌ ಪೊಳಲಿ ಇವರ ನಿರ್ದೇಶನದಲ್ಲಿ ಸಮಿತಿಯ ಸದಸ್ಯರಿಂದ ಮಹಿಷ ಮರ್ದಿನಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಪರಾಹ್ನ 2ರಿಂದ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸ್ಥಳೀಯ ನಗರ ಸೇವಕಿ ದಕ್ಷಾ ಪಾ ಟೀಲ್ ಅವರು ಉದ್ಘಾಟಿಸಲಿದ್ದಾರೆ. ಗೌರವ ಅತಿಥಿಗಳಾಗಿ ಮುಂಬಯಿ ಬಿಲ್ಲವರ ಅಸೋಸಿಯೇಶನಿನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಉಳ್ಳಾಲ್, ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ, ಹೋಬಳಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಪುತ್ರನ್‌, ರಾಜಪುರ ಸಾರಸ್ವತ್‌ ಮಹಿಳಾ ಮಂಡಳಿಯ ಕಾರ್ಯಾಧ್ಯಕ್ಷೆ ಸುಮಾ ನಾಯಕ್‌, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಭಾ ಎಸ್‌. ಆಚಾರ್ಯ, ಮಲಾಡ್‌ ಕನ್ನಡ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತಿ ಬಾಲಚಂದ್ರ ರಾವ್‌ ಉಪಸ್ಥಿತರಿದ್ದರು.

ಅಪರಾಹ್ನ 2.45ರಿಂದ ಯುವ ಪ್ರತಿಭೆಗಳಾದ ಪ್ರಿಯಾ ಡಾನ್ಸ್‌ ಸ್ಟುಡಿಯೋ, ಕುರಾರ್‌ನ ಕುಮಾರಿ ಪ್ರಿಯಾ ಪೂಜಾರಿ, ರಾಷ್ಟ್ರಮಟ್ಟದ ಸಿಬಿಸಿಐ ಅವಾರ್ಡ್‌ ವಿಜೇತ ವಿಕ್ರಮ್‌ ಪಾಟ್ಕರ್‌ ಮತ್ತು ರಾಜ್ಯ ಮಟ್ಟದ ಜೂಡೋ ಕುರಶ್‌ ವಿಜೇತ ಸೂರಜ್‌ ಮೊಗವೀರ ಇವರನ್ನು ಸಮ್ಮಾನಿಸಲಾಗುವುದು. ಸಮಾರಂಭವು ಕೇವಲ ಯುವ ಜನಾಂಗಕ್ಕೆ ಮೀಸಲಾಗಿದ್ದು ಗೌರವ ಅತಿಥಿಗಳಾಗಿ ದಂತ ತಜ್ಞ ಡಾ| ಶಶಿನ್‌ ಕೆ. ಆಚಾರ್ಯ, ನಟ, ನಿರ್ದೇಶಕ ಲತೇಶ್‌ ಪೂಜಾರಿ, ಪೇಸ್‌ ಆಫ್‌ ತುಳುನಾಡು 2019 ವಿಜೇತೆ ಮೇಘಾ ಶೆಟ್ಟಿ ನಲಸೋಪರ, ಕು| ಸೃಷ್ಟಿ ಎಸ್‌. ಶೆಟ್ಟಿ, ಕುಮಾರಿ ತೃತಿ ಆರ್‌. ಶೆಟ್ಟಿ, ರಾಜ್ಯ ಮಟ್ಟದ ನೃತ್ಯ ಕಲಾವಿದೆ ಸಾಕ್ಷಿ ಪಿ. ಶೆಟ್ಟಿ, ಟೈಟ್ಸ್‌ ಎನ್‌ಐಇ ಸ್ಟಾರ್‌ ಕರೆಸ್ಪಾಂಡೆಂಟ್ ವಿಜೇತೆ ದಿವ್ಯಾ ಎಸ್‌. ಸಾಫಲ್ಯ ಪಾಲ್ಗೊಳ್ಳಲಿದ್ದಾರೆ. ಸಂಜೆ 5.30ರ ತನಕ ಸ್ಥಳೀಯ ಮಕ್ಕಳಿಂದ ಮತ್ತು ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ನೃತ್ಯ ವೈಭವ ನಡೆಯಲಿದೆ.

Advertisement

ಸಂಜೆ 5.30ರಿಂದ ಮಲಾಡ್‌ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಜಗನ್ನಾಥ್‌ ಎಸ್‌. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕ್ಷೇತ್ರ ಕಟೀಲಿನ ಹರಿನಾರಾಯಣ ಆಸ್ರಣ್ಣ ಅವರು ಆಶೀರ್ವಚನ ನೀಡಲಿದ್ದಾರೆ. ಗೌರವ ಅತಿಥಿಗಳಾಗಿ ಸಂಸದರಾದ ಗೋಪಾಲ ಶೆಟ್ಟಿ, ಮಕ್ಕಳ ಮತ್ತು ಮಹಿಳೆಯರ ಸಚಿವರಾದ ವಿದ್ಯಾ ಠಾಕೂರ್‌, ಶಾಸಕ ಅತುಲ್ ಭಟ್ಕಲ್ಕರ್‌, ನಗರ ಸೇವಕ ಡಾ| ರಾಮ್‌ ಬರೋಟ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್‌ ಶೆಟ್ಟಿ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪದ್ಮನಾಭ ಪಯ್ಯಡೆ, ಕಾಂದಿವಲಿ ಅವೆನ್ಯೂ ಹೋಟೇಲಿನ ರಘುರಾಮ ಶೆಟ್ಟಿ, ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗಿರೀಶ್‌ ಶೆಟ್ಟಿ ತೆಲ್ಲಾರ್‌, ಕ್ಲಾಸಿಕ್‌ ಗ್ರೂಪ್‌ ಆಪ್‌ ಹೊಟೇಲ್ಸ್ ನ ಸಿಎಂಡಿ ಸುರೇಶ್‌ ಕಾಂಚನ್‌, ಶಿವ ಸಾಗರ್‌ ಗ್ರೂಪ್‌ ಆಪ್‌ ಹೊಟೇಲ್ಸ್ನ ಸಿಎಂಡಿ ಎನ್‌. ಟಿ. ಪೂಜಾರಿ, ಮಲಾಡ್‌ ತುಂಗಾ ಹಾಸ್ಪಿಟಲ್ನ ನಿರ್ದೇಶಕರಾದ ರಾಜೇಶ್‌ ಶೆಟ್ಟಿ, ಒಬೆರಾಯ್‌ ಗ್ರೂಪ್ಸ್‌ನ ಸಿಇಒ ಅರುಣ್‌ ಕೋಟ್ಯಾನ್‌, ಠಾಕೂರ್‌ ಎಜ್ಯುಕೇಶನ್‌ ಟ್ರಸ್ಟ್‌ನ ಟ್ರಷ್ಟಿ ರಾಕೇಶ್‌ ವಿ. ಸಿಂಗ್‌ ಠಾಕೂರ್‌, ಚಿಲ್ಡ್ರನ್ಸ್‌ ಅಕಾಡೆಮಿ ಶಾಲೆಯ ಕಾರ್ಯಾಧ್ಯಕ್ಷರಾದ ರೋಹನ್‌ ಭಟ್, ಮಲಾಡ್‌ ಚಾಮುಂಡೇಶ್ವರೀ ಸೇವಾ ಸಮಿತಿಯ ಅಧ್ಯಕ್ಷರಾದ ಕುಮಾರ್‌ ಗೌಡ ಮೊದಲಾದವರು ಆಗಮಿಸಲಿದ್ದಾರೆ.

ಸಂಜೆ 6.30ರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾರ್ಧನ ಭಟ್ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯು ನಡೆಯಲಿದೆ. ನಲಸೋಪರ ಗ್ರ್ಯಾಂಡ್‌ ರೀಜೆನ್ಸಿ ಹೊಟೇಲಿನ ಶಶಿಧರ ಕೆ. ಶೆಟ್ಟಿ, ನಿತ್ಯಾನಂದ ಪೂಜಾರಿ, ಡಾ| ಎಂ. ಜೆ. ಪ್ರವೀಣ್‌ ಭಟ್, ಸತೀಶ್‌ ಭಟ್, ಪ್ರಣೀತಾ ವರುಣ್‌ ಶೆಟ್ಟಿ, ಹರೀಶ್‌ ಶೆಟ್ಟಿ, ಸಂತೋಷ್‌ ಕೆ ಪೂಜಾರಿ, ಉಮೇಶ್‌ ಅಂಚನ್‌ ಮಾರ್ನಾಡ್‌, ಐತು ಆರ್‌. ಮೂಲ್ಯ ಮುಂಡ್ಕೂರು, ದಿನೇಶ್‌ ಕಾಮತ್‌ ಮೊದಲಾದವರು ವಿವಿಧ ರೀತಿಯಲ್ಲಿ ಸಹಕರಿಸಲಿದ್ದಾರೆ.

ಸಮಾರಂಭದಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕಾಗಿ ಸಮಿತಿಯ ಪರವಾಗಿ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್‌ ಎನ್‌. ಶೆಟ್ಟಿ, ಸಂಚಾಲಕರಾದ ಬಿ. ದಿನೇಶ್‌ ಕುಲಾಲ್, ಜಗನ್ನಾಥ್‌ ಎಚ್. ಮೆಂಡನ್‌, ಸಮಿತಿಯ ಸರ್ವ ಪದಾಧಿಕಾ ರಿಗಳು, ಸದಸ್ಯರು, ದಶಮಾನೋ ತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್‌ ಕೆ. ಪೂಜಾರಿ, ಉಪ ಕಾರ್ಯಾಧ್ಯಕ್ಷರುಗಳಾದ ಕುಮರೇಶ್‌ ಆಚಾರ್ಯ, ಸಿದ್ದರಾಮ ಗೌಡ, ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ನಿತ್ಯಾನಂದ ಕೋಟ್ಯಾನ್‌, ಸಲಹೆಗಾರ ಅಭ್ಯುದಯ ಬ್ಯಾಂಕಿನ ಆಡಳಿತ ನಿರ್ದೇಶಕ ಪ್ರೇಮನಾಥ ಸಾಲ್ಯಾನ್‌, ಭವಾನಿ ಶಂಕರ ದೇವಸ್ಥಾನದ ಪರಮಾನಂದ ಜೆ. ಭಟ್, ಕಾರ್ಯ ಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್‌ ಪೂಜಾರಿ ಬ್ರಹ್ಮಾವರ, ಉಪ ಕಾರ್ಯಾಧ್ಯಕ್ಷರುಗಳಾದ ಶೈಲೇಶ್‌ ಪೂಜಾರಿ, ದಿನೇಶ್‌ ಪೂಜಾರಿ, ಮಹಾಬಲ ಪೂಜಾರಿ, ಕಾರ್ಯದರ್ಶಿ ದಿನೇಶ್‌ ಕುಂಬ್ಳೆ, ಜೊತೆ ಕಾರ್ಯದರ್ಶಿಗಳಾದ ಸುಂದರ ಪೂಜಾರಿ, ಸನತ್‌ ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್‌. ವಾಗ್ಲೆ, ಸಂಚಾಲಕಿ ಮೋಹಿನಿ ಜೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷರುಗಳಾದ ರತ್ನ ಡಿ. ಕುಲಾಲ್, ಲಲಿತಾ ಎಸ್‌. ಗೌಡ, ಶೀಲಾ ಎಂ. ಪೂಜಾರಿ, ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ, ಜೊತೆ ಕಾರ್ಯದರ್ಶಿಗಳಾದ ಗೀತಾ ಜೆ. ಮೆಂಡನ್‌, ಕೃಪಾ ಜೆ. ಮೂಲ್ಯ, ಯುವ ವಿಭಾಗದ ಕಾರ್ಯಾಧ್ಯಕ್ಷೆ ರಶ್ಮಿ ಪೂಜಾರಿ, ಸಂಚಾಲಕಿ ಪ್ರಣಿತಾ ವಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷರುಗಳಾದ ದಿವ್ಯಾ ಪೂಜಾರಿ, ಸುದೀಪ್‌ ಪೂಜಾರಿ, ನವೀನ್‌ ಸಾಲ್ಯಾನ್‌, ಕಾರ್ಯದರ್ಶಿ ಸೌಮ್ಯಾ ಮೆಂಡನ್‌, ಜೊತೆ ಕಾರ್ಯದರ್ಶಿಗಳಾದ ದಿಶಾ ಕರ್ಕೇರ, ಯೋಗೇಶ್ವರಿ ಗೌಡ ಮತ್ತು ಉಪಸಮಿತಿಗಳ ಇತರ ಎಲ್ಲಾ ಸದಸ್ಯರುಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next