Advertisement

10ನೇ ವನಿತಾ ಜೂ. ವಿಶ್ವಕಪ್‌ ಹಾಕಿ: ಭಾರತಕ್ಕೆ ಇಂದು ಕೆನಡಾ ಸವಾಲು

11:31 PM Nov 28, 2023 | Team Udayavani |

ಸ್ಯಾಂಟಿಯಾಗೊ (ಚಿಲಿ): ಎಫ್ಐಎಚ್‌ 10ನೇ ವನಿತಾ ಜೂನಿ ಯರ್‌ ಹಾಕಿ ಪಂದ್ಯಾವಳಿ ಬುಧವಾರ ಆರಂಭಗೊಳ್ಳಲಿದ್ದು, ಬಲಿಷ್ಠ “ಸಿ’ ವಿಭಾಗದಲ್ಲಿರುವ ಭಾರತ ತನ್ನ ಮೊದಲ ಪಂದ್ಯದಲ್ಲಿ ಕೆನಡಾವನ್ನು ಎದುರಿಸಲಿದೆ. ಜರ್ಮನಿ ಮತ್ತು ಬೆಲ್ಜಿಯಂ ಈ ವಿಭಾಗದ ಮತ್ತೆರಡು ತಂಡಗಳು.

Advertisement

2022ರ ಆವೃತ್ತಿಯಲ್ಲಿ 4ನೇ ಸ್ಥಾನಿಯಾಗಿದ್ದ ಭಾರತ, ಈ ಬಾರಿ ಇನ್ನಷ್ಟು ಉನ್ನತ ಸ್ಥಾನಕ್ಕೆ ಏರುವ ಯೋಜನೆಯಲ್ಲಿದೆ. ಆದರೆ ಗ್ರೂಪ್‌ ವಿಭಾಗವೇ ಭಾರೀ ಸವಾಲಿನದ್ದಾಗಿದೆ.

ಕೆನಡಾ ವಿರುದ್ಧ ಕಳೆದ 3 ಪಂದ್ಯಗಳಲ್ಲಿ ಸಾಧಿಸಿದ ಗೆಲುವು ಭಾರತದ ಆತ್ಮ ವಿಶ್ವಾಸವನ್ನು ಖಂಡಿತವಾಗಿಯೂ ಹೆಚ್ಚಿ ಸಲಿದೆ. ಹಾಗೆಯೇ ವರ್ಷಾರಂಭ ದಲ್ಲಿ ಜಪಾನ್‌ನಲ್ಲಿ ನಡೆದ ಏಷ್ಯಾ ಕಪ್‌ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿದ ಸಾಧನೆಯೂ ನಮ್ಮವರಿಗೆ ಸ್ಫೂರ್ತಿ ಆಗಬೇಕಿದೆ.

ಭಾರತ ಇನ್ನೂ ಚಾಂಪಿಯನ್‌ ಆಗಿಲ್ಲ. 2013ರ ಕೂಟದಲ್ಲಿ ತೃತೀಯ ಸ್ಥಾನಿಯಾದದ್ದೇ ಅತ್ಯುತ್ತಮ ಸಾಧನೆ.

ಸವಾಲಿಗೆ ಸಜ್ಜು
“ನಮ್ಮ ತಯಾರಿ, ಅಭ್ಯಾಸ ಉತ್ತಮ ಮಟ್ಟದಲ್ಲಿತ್ತು. ಇದನ್ನು ಪಂದ್ಯದ ವೇಳೆ ಕಾರ್ಯರೂಪಕ್ಕಿಳಿಸುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ಸಾಗಲಿದೆ. ನಾವು ಎಲ್ಲ ರೀತಿಯ ಸವಾಲಿಗೆ ಮಾನಸಿಕವಾಗಿ ಸಿದ್ಧರಾಗಿದ್ದೇವೆ’ ಎಂಬುದಾಗಿ ನಾಯಕಿ ಪ್ರೀತಿ ಹೇಳಿದ್ದಾರೆ.

Advertisement

ಕೆನಡಾ ಬಳಿಕ ನ. 30ರಂದು ಜರ್ಮನಿ ಮತ್ತು ಡಿ. 2ರಂದು ಬೆಲ್ಜಿಯಂ ವಿರುದ್ಧ ಭಾರತ ಸೆಣಸಲಿದೆ. ಪ್ರತಿಯೊಂದು ವಿಭಾಗದಲ್ಲಿ ಅಗ್ರಸ್ಥಾನ ಪಡೆದ ತಂಡಗಳೆರಡು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ.

ಭಾರತ-ಕೆನಡಾ ಪಂದ್ಯ ರಾತ್ರಿ 10.30ಕ್ಕೆ ಆರಂಭವಾಗಲಿದೆ. ಜರ್ಮನಿ ವಿರುದ್ಧದ ಪಂದ್ಯ ಭಾರತೀಯ ಕಾಲಮಾನದಂತೆ ನ. 30ರ ಮಧ್ಯರಾತ್ರಿ ಬಳಿಕ 1.30ಕ್ಕೆ ಹಾಗೂ ಬೆಲ್ಜಿಯಂ ಎದುರಿನ ಪಂದ್ಯ ಡಿ. 2ರ ಸಂಜೆ 6.30ಕ್ಕೆ ಮೊದಲ್ಗೊಳ್ಳಲಿದೆ.

ಡಿ. 6ರಂದು ಕ್ವಾರ್ಟರ್‌ ಫೈನಲ್ಸ್‌, ಡಿ. 8ರಂದು ಸೆಮಿಫೈನಲ್ಸ್‌ ಹಾಗೂ ಡಿ. 10ರಂದು ಫೈನಲ್‌ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next