Advertisement
ಅ. 22ರಂದು ಚೆಂಬೂರ್‌ನ ಐವಿವೈ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಆಹಾರ್‌ನ 10ನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಹಾರ್‌ನ ನಿಯೋಗವು ಅಗ್ನಿ ಸುರಕ್ಷೆಯಲ್ಲಿ ನೀಡಬೇಕಾದ ದೃಢೀಕರಣ ಪತ್ರದ ವಿರುದ್ಧ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತೆ ಐ.ಎ. ಕುಂದನ್ ಹಾಗೂ ಅಗ್ನಿಸುರಕ್ಷತೆಯ ಅಧಿಕಾರಿಗಳೊಂದಿಗೆ ಸುದೀರ್ಘ ಮಾತುಕತೆ ನಡೆಸಿ ಫೈಯರ್ ಕಂಪ್ಲೀಯನ್ಸ್ ಇಲ್ಲದೆ ಮಹಾನಗರ ಪಾಲಿಕೆಯ ಲೈಸೆನ್ಸ್ ನವೀಕರಿಸಲು ಯಶಸ್ವಿಯಾಗಿದೆ. ಈ ವಿಷಯದಲ್ಲಿ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದು ಅದನ್ನು ತಮ್ಮ ನಿವೇದನೆಯಲ್ಲಿ ಅಳವಡಿಸಲಾಗಿದೆ. ಫಾಯರ್ ಕಂಪ್ಲೀಯನ್ಸ್‌ಗಾಗಿ ನೀಡಬೇಕಾದ ಅಫಿದಾವಿತ್‌ನ ಬದಲಿಗೆ ಸ್ವಯಂ ದೃಢೀಕರಣ ಪತ್ರ ನೀಡಲು ಆಹಾರ್ ಪ್ರಯತ್ನಿಸುತ್ತಿದೆ. ಅಗ್ನಿ ಸುರಕ್ಷತೆಯ ನಿಯಮಗಳನ್ನು ಇನ್ನಷ್ಟು ಸರಳೀಕರಣಗೊಳಿಸಲು ಆಹಾರ್ ಪ್ರಯತ್ನಿಸುತ್ತಿದ್ದು, ಆದಷ್ಟು ಬೇಗ ಅದು ಫಲಕಾರಿಯಾಗಬಹುದು ಎಂದು ಅವರು ತಿಳಿಸಿದರು.
Related Articles
Advertisement
ಹೊಟೇಲ್ ಉದ್ಯಮದ ಸಮಸ್ಯೆಗಳ ನಿವಾರಣೆಗಾಗಿ ಸದಾ ಶ್ರಮಿಸುತ್ತಿರುವ ಲೋಕಸಭಾ ಸದಸ್ಯ ರಾಹುಲ್ ಶೇವಾಲೆ ಅವರನ್ನು ಸಮ್ಮಾನಿಸಲಾಯಿತು.
ಆಹಾರ್‌ನ ಸಲಹೆಗಾರರಾದ ಆದರ್ಶ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ, ನಾರಾಯಣ ಆಳ್ವ ಸಲಹೆ ನೀಡಿದರು. ವಲಯ ಒಂದರ ಉಪಾಧ್ಯಕ್ಷ ಮಹೇಂದ್ರ ಎಸ್. ಕರ್ಕೇರ, ವಲಯ ಎರಡರ ಉಪಾಧ್ಯಕ್ಷ ಕೆ.ವಿ. ಶೆಟ್ಟಿ, ವಲಯ ಮೂರರ ಉಪಾಧ್ಯಕ್ಷ ವಿಜಯ್ ಕೆ. ಶೆಟ್ಟಿ, ವಲಯ ನಾಲ್ಕರ ಉಪಾಧ್ಯಕ್ಷ ಸುರೇಶ್ ಶೆಟ್ಟಿ, ವಲಯ ಐದರ ಉಪಾಧ್ಯಕ್ಷ ವಿಜಯ ಎಸ್. ಶೆಟ್ಟಿ, ವಲಯ ಆರರ ಉಪಾಧ್ಯಕ್ಷ ಅಮರ್ ಶೆಟ್ಟಿ, ವಲಯ ಏಳರ ಉಪಾಧ್ಯಕ್ಷ ರಾಜನ್ ಶೆಟ್ಟಿ, ವಲಯ ಎಂಟರ ಉಪಾಧ್ಯಕ್ಷ ಭುಜಂಗ ಶೆಟ್ಟಿ, ವಲಯ ಹತ್ತರ ಉಪಾಧ್ಯಕ್ಷ ಪ್ರಭಾಕರ ಬಿ. ಶೆಟ್ಟಿ ತಮ್ಮ ವಲಯಗಳ ಕಾರ್ಯಚಟುವಟಿಕೆ ವಿವರಿಸಿದರು.
ಸಭೆಯಲ್ಲಿ ಭಾಗವಹಿಸಿದ 15 ಪ್ರದರ್ಶನ ಮಳಿಗೆಯವರನ್ನು ಗೌರವ ಜತೆ ಕಾರ್ಯದರ್ಶಿ ಪರಿಚಯಿಸಿದರು. ಅಧ್ಯಕ್ಷರು ಸಂತೋಷ್ ಶೆಟ್ಟಿ ಗೌರವಿಸಿದರು. ಸಭೆಯು ವಲಯ ಐದರ ಉಪಾಧ್ಯಕ್ಷ ವಿಜಯ ಎಸ್. ಶೆಟ್ಟಿ ಅವರು ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ವಂದಿಸಿದರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಹೊಟೇಲಿಗರ ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿಯಿದ್ದು, ಅದರ ನಿವಾರಣೆಗಾಗಿ ತಾನು ಮಹಾನಗರ ಪಾಲಿಕೆ, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದೊಂದಿಗೆ ಸಂಪರ್ಕದಲ್ಲಿದ್ದೇನೆ. ಹೊಟೇಲ್ ಉದ್ಯಮದ ಜಿಎಸ್‌ಟಿ ಕಡಿಮೆಗೊಳಿಸುವಲ್ಲಿ ಪ್ರಯತ್ನ ನಡೆಯುತ್ತಿದೆ. ಇತರ ಸಮಸ್ಯೆಗಳ ಬಗ್ಗೆ ಶೀಘ್ರ ಮುಖ್ಯಮಂತ್ರಿಯನ್ನು ಭೇಟಿಯಾಗಿ ಚರ್ಚಿಸುತ್ತೇನೆ.-ರಾಹುಲ್ ಶೇವಾಲೆ, ಸಂಸದ