Advertisement

Yoga Day: ಗಾಂಧಿ ಸ್ಮಾರಕ ಶಿಕ್ಷಣ ಸಂಸ್ಥೆಯಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

12:12 PM Jun 21, 2024 | Team Udayavani |

ಮಾನ್ವಿ: ನಮ್ಮ ಶಾರೀರ ಒಂದು ದೇವಲಾಯವಿದ್ದಂತೆ. ಆದ್ದರಿಂದ ನಮ್ಮ ದೇಹ, ಮನಸ್ಸನ್ನು ಪವಿತ್ರವಾಗಿ, ಶುದ್ದವಾಗಿ ಇಟ್ಟುಕೊಳ್ಳಬೇಕಾದಲ್ಲಿ ಪ್ರತಿನಿತ್ಯ ತಪ್ಪದೆ ಯೋಗ ಅಭ್ಯಾಸ ಮಾಡಬೇಕು ಎಂದು ತಲೈ ಸೇಲ್ವಿ ಸಿಸ್ಟರ್ ಹೇಳಿದರು.

Advertisement

ಪಟ್ಟಣದ ಶ್ರೀ ಶ್ರೀಮತಿ ಆರ್.ಸುಭದ್ರಮ್ಮ ವಿಠೋಬಶೆಟ್ಟಿ ಅನುದಾನಿತ ಶಾಲೆಯ ಅವರಣದಲ್ಲಿ ಅಯುಷ್ ಇಲಾಖೆ, ಗಾಂಧಿ ಸ್ಮಾರಕ ಶಿಕ್ಷಣ ಸಂಸ್ಥೆ, ಯೋಗ ಸನ್ನಿಧಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ 10ನೇ ಅಂತರಾಷ್ಟ್ರೀಯ ಯೋಗ ದೀನಾಚರಣೆ ಕಾರ್ಯಕ್ರಮವನ್ನು ತಲೈ ಸೇಲ್ವಿ ಸಿಸ್ಟರ್ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಮ್ಮ ಪೂರ್ವಜರು ಋಗ್ವೇದ ಗ್ರಂಥದಿಂದ ಪತಂಜಲಿ ಮಹರ್ಷಿಗಳು ನೀಡಿದ ಪತಂಜಲಿ ಯೋಗ ಇಂದು ವಿಶ್ವದಾದ್ಯಂತ ಮನ್ನಣೆ ಪಡೆಯುತ್ತಿದ್ದು, ಇಂದು ವಿಶ್ವದ ಎಲ್ಲಾ ದೇಶಗಳಲ್ಲಿನ ಜನರು ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವ ಮೂಲಕ ಉತ್ತಮವಾದ ಅರೋಗ್ಯ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಶಾಲೆಗಳಲ್ಲಿ ಮಕ್ಕಳಿಗೆ ಬಾಲ್ಯದಲ್ಲಿಯೇ ಯೋಗಭ್ಯಾಸವನ್ನು ಕಲಿಸಿದಲ್ಲಿ ಅವರು ಕೂಡ ಉತ್ತಮ ಅರೋಗ್ಯವಂತ ಪ್ರಜೆಗಳಾಗುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಯೋಗ ಸನ್ನಿಧಿ ಟ್ರಸ್ಟ್ ನ ಯೋಗಗುರು ಅನ್ನದಾನಯ್ಯ ಸ್ವಾಮಿ ಯೋಗದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

Advertisement

ಶಾಲೆಯ ವಿದ್ಯಾರ್ಥಿಗಳು ಯೋಗ ದಿನಾಚರಣೆಯ ಅಂಗವಾಗಿ ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಿದರು.

ಅಯುಷ್ ಇಲಾಖೆಯ ವೈದ್ಯರಾದ ಡಾ.ಅಂಬಿಕಾ ಮಧುಸೂದನ್, ಡಾ.ರಾಜೇಂದ್ರ ಯೋಗದಿಂದ ಅರೋಗ್ಯ ಪಡೆಯುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಡಳಿತಾಧಿಕಾರಿ ರಾಮಲಿಮಗಪ್ಪ, ಶಾಲೆಯ ಮುಖ್ಯಗುರು ಜಾತಪ್ಪ ತಳಕಲ್ಲು, ಹಿರಿಯ ನ್ಯಾಯವಾದಿ ಸ್ಟೇಲ್ಲಾ, ಗಾಂಧಿ ಸ್ಮಾರಕ ಶಿಕ್ಷಣ ಸಂಸ್ಥೆಯ ಕಾಲೇಜಿನ ಪ್ರಾಚಾರ್ಯ ಈರಣ್ಣ ಮರ್ಲಟ್ಟಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next