Advertisement

Yoga Day: ಯೋಗ ದಿನ ವಿಶ್ವದಾದ್ಯಂತ ಹೊಸ ದಾಖಲೆಯನ್ನು ಸೃಷ್ಟಿಸಿದೆ: ಪ್ರಧಾನಿ ಮೋದಿ

08:51 AM Jun 21, 2024 | Team Udayavani |

ಶ್ರೀನಗರ: ಇಂದು ಜಗತ್ತಿನಾದ್ಯಂತ ಯೋಗ ಮಾಡುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ, ಯೋಗದತ್ತ ಜನರು ಆಕರ್ಷಿತರಾಗುತ್ತಿದ್ದಾರೆ ಇದರೊಂದಿಗೆ ಯೋಗದಿನ ವಿಶ್ವದಾದ್ಯಂತ ಹೊಸ ದಾಖಲೆಯನ್ನು ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಶ್ರೀನಗರದ ಶೇರ್-ಎ-ಕಾಶ್ಮೀರ್ ಇಂಟರ್‌ನ್ಯಾಶನಲ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನದಲ್ಲಿ ಭಾಗವಹಿಸಿ ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದಾದ್ಯಂತ ಯೋಗ ದಿನದಲ್ಲಿ ಭಾಗಿಯಾಗಿರುವ ಎಲ್ಲಾ ಜನತೆಗೆ ನನ್ನ ಅಭಿನಂದನೆಗೆಳು ಯೋಗದಿಂದ ಮನಸ್ಸಿಗೆ ಏಕಾಗ್ರತೆ ಜೊತೆಗೆ ಶಕ್ತಿಯೂ ಸಿಗುತ್ತದೆ ಎಂಬುದು ಶ್ರೀನಗರಕ್ಕೆ ಬಂದ ನಂತರ ಗೊತ್ತಾಯಿತು ಎಂದು ಪ್ರಧಾನಿ ಹೇಳಿದ್ದಾರೆ. ಶ್ರೀನಗರದ ದಾಲ್ ಸರೋವರದ ದಂಡೆಯಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಸುಮಾರು ಏಳು ಸಾವಿರ ಮಂದಿ ಯೋಗ ಭಾಗವಹಿಸಿದ್ದನ್ನು ಕಂಡು ಸಂತಸ ವ್ಯಕ್ತಪಡಿಸಿದ ಪ್ರಧಾನಿ. ಹತ್ತು ವರ್ಷಗಳ ಹಿಂದೆಯೇ ವಿಶ್ವಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಿಸಲು ಮುಂದಾಗಿದ್ದೆ ಎಂದರು. ಭಾರತದ ಪ್ರಸ್ತಾಪವನ್ನು 177 ದೇಶಗಳು ಬೆಂಬಲಿಸಿದವು, ಇದು ಸ್ವತಃ ದಾಖಲೆಯಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಯೋಗದ ಬಗ್ಗೆ ಆಸಕ್ತಿ ಹೆಚ್ಚಾಗತೊಡಗಿದೆ ಇದು ಒಳ್ಳೆಯ ಬೆಳವಣಿಗೆ, ದೇಶದಾದ್ಯಂತ ಇಂದು ಕೋಟ್ಯಾಂತರ ಮಂದಿ ಯೋಗ ದಿನವನ್ನು ಆಚರಿಸುತ್ತಿದ್ದಾರೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಇದರೊಂದಿಗೆ ಯೋಗ ದಿನ ಹೊಸ ದಾಖಲೆಯನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ.

ಈ ವರ್ಷ ಫ್ರಾನ್ಸ್‌ನ 101 ವರ್ಷದ ಮಹಿಳಾ ಯೋಗ ಶಿಕ್ಷಕಿಗೆ ಭಾರತದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಮಹಿಳೆಗೆ ಭಾರತಕ್ಕೆ ಬರಲು ಆಗಲಿಲ್ಲ, ಆದರೆ ಯೋಗದ ಬಗ್ಗೆ ಜಾಗೃತಿ ಮೂಡಿಸಲು ತನ್ನ ಇಡೀ ಜೀವನವನ್ನು ಆ ಮಹಿಳೆ ಮುಡಿಪಾಗಿಟ್ಟಿದ್ದಳು. ಇಂದು ಪ್ರಪಂಚದಾದ್ಯಂತದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳಲ್ಲಿ ಯೋಗದ ಕುರಿತು ಸಂಶೋಧನೆಗಳನ್ನು ನಡೆಸಲಾಗುತ್ತಿದೆ; ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಲಾಗುತ್ತಿದೆ ಇದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಮನುಷ್ಯನ ಮನಸ್ಸಿಗೆ ಶಾಂತಿ ಸಿಗಬೇಕಾದರೆ ಏಕಾಗ್ರತೆ ಮುಖ್ಯ ಇದು ಸಿಗುವುದು ಯೋಗದಲ್ಲಿ ಮಾತ್ರ ಹಾಗಾಗಿ ಇಂದು ಹೆಚ್ಚಿನ ಜನ ಯೋಗದತ್ತ ಚಿತ್ತ ಹರಿಸಿದ್ದಾರೆ. ಯೋಗದಿಂದ ಧನಾತ್ಮಕ ಬದಲಾವಣೆಗಳು ಬರುತ್ತವೆ. ಯೋಗದ ಮೂಲಕ ನಮಗೆ ಜ್ಞಾನೋದಯವಾಗುತ್ತದೆ. ನಾವು ಇದನ್ನು ಅನುಭವಿಸುತ್ತಿದ್ದೇವೆ. ಯೋಗವು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಜಗತ್ತಿನಾದ್ಯಂತ ಜನರು ಭಾರತಕ್ಕೆ ಬಂದು ಯೋಗ ಕಲಿಯುತ್ತಿದ್ದಾರೆ. ಪ್ರತಿ ವರ್ಷ ಯೋಗ ದಿನ ದಾಖಲೆಗಳನ್ನು ಮಾಡುತ್ತಿದೆ. ಯೋಗದ ಪಯಣ ನಿರಂತರವಾಗಿ ಮುಂದುವರಿಯುತ್ತದೆ. ಅದರ ಕಡೆಗೆ ಹೆಚ್ಚಿನ ಆಕರ್ಷಣೆ ಇದೆ. ನಾನು ಭೇಟಿಯಾಗುವ ಪ್ರತಿಯೊಬ್ಬ ವಿಶ್ವ ನಾಯಕರು ಯೋಗದ ಬಗ್ಗೆ ಮಾತನಾಡುತ್ತಾರೆ. ಜರ್ಮನಿಯಲ್ಲೂ ಜನರು ಯೋಗ ಮಾಡುತ್ತಿದ್ದಾರೆ. ಪ್ರಪಂಚದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಯೋಗವನ್ನು ಅಭ್ಯಾಸ ಮಾಡಲಾಗುತ್ತಿದೆ. ಯೋಗ ಈಗ ತನ್ನ ಸೀಮಿತ ವ್ಯಾಪ್ತಿಯನ್ನು ಮೀರಿದೆ ಎಂದು ಹೇಳಿದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next