Advertisement

108 ಆಂಬ್ಯುಲೆನ್ಸ್‌ಗೆ ಜಿಪಿಎಸ್‌ ಅಳವಡಿಕೆ: ಸಚಿವ ಶಿವಾನಂದ

06:15 AM Sep 24, 2018 | |

ವಿಜಯಪುರ: ರಾಜ್ಯದಲ್ಲಿ 108 ಆಂಬ್ಯುಲೆನ್ಸ್‌ ಸೇವೆ ಸಬಲೀಕರಣಕ್ಕೆ ಪಾರದರ್ಶಕ ನಿರ್ವಹಣೆಗಾಗಿ ಜಿಪಿಎಸ್‌ ಮಾದರಿ ತಂತ್ರಜ್ಞಾನ ಅಳವಡಿಸುವ ಯೋಜನೆ ಶೀಘ್ರವೇ ಜಾರಿಗೆ ಬರಲಿದೆ. ಇದರಿಂದ ಆಂಬ್ಯುಲೆನ್ಸ್‌ ಎಲ್ಲಿಂದ ಎಲ್ಲಿಗೆ ಹೋಗಿದೆ ಎಂಬ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಂಬ್ಯುಲೆನ್ಸ್‌ ಪೂರೈಕೆ ಏಜೆನ್ಸಿಗಳು ಕೇವಲ 3 ಗುತ್ತಿಗೆದಾರರಿದ್ದು, ಟೆಂಡರ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆ ಹೊಂದಿದ್ದಾರೆ. ಅರ್ಹ ಹೆಚ್ಚಿನ ಸಂಖ್ಯೆಯ ಏಜೆನ್ಸಿಗಳು ಇಲ್ಲದಿರುವುದೇ ಇದಕ್ಕೆ ಕಾರಣ. ಇನ್ನು ರಾಜ್ಯದಲ್ಲಿ 350 ಆಂಬ್ಯುಲೆನ್ಸ್‌ ಸೇವೆ ದೊರೆಯಲಿದೆ. ಈ ಆಂಬ್ಯುಲೆನ್ಸ್‌ಗಳು ಎಲ್ಲಿಂದ ಎಲ್ಲಿಗೆ ಹೋಗಲಿವೆ ಎಂಬ ಸ್ಪಷ್ಟ ಮಾಹಿತಿ ದೊರಕಲಿದೆ. ಇದರಿಂದ ಅಂಬ್ಯುಲೆನ್ಸ್‌ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಬಲವಂತವಾಗಿ ಕರೆದೊಯಲಿವೆ ಎಂಬ ದೂರುಗಳಿಗೆ ಕಡಿವಾಣ ಬೀಳಲಿದೆ ಎಂದರು.

ಆರೋಗ್ಯ ಇಲಾಖೆ ಸಬಲೀಕರಣಕ್ಕಾಗಿ ತಜ್ಞ ವೈದ್ಯರು ಸೇರಿದಂತೆ ಖಾಲಿಯಿರುವ ಎಲ್ಲ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. 200 ತಜ್ಞ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಎಂಬಿಬಿಎಸ್‌ ಪದವಿ ಪಡೆದ 300 ವೈದ್ಯರನ್ನು ಗ್ರಾಮೀಣ ಸೇವೆಗೆ ನೇಮಿಸಲಾಗಿದೆ. 1650 ಎಎನ್‌ಎಂ ನೇಮಕ ಮಾಡಿದ್ದು, ಕೆಲವೇ ದಿನಗಳಲ್ಲಿ ಕೌನ್ಸೆಲಿಂಗ್‌ ನಡೆಯಲಿದೆ ಎಂದರು.

ವಿಜಯಪುರ ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್‌ ಆರಂಭಿಸಬೇಕು ಎಂಬುದು ನನ್ನ ಬಹುದಿನಗಳ ಕನಸು. ಕಳೆದ ಬಾರಿಯೂ ಈ ಕುರಿತು ಒತ್ತಾಯಿಸುವೆ. ಈ ಆಗ್ರಹದ ಹಿನ್ನೆಲೆಯಲ್ಲೇ ಸರ್ಕಾರ ವಿಜಯಪುರ ಜಿಲ್ಲಾಸ್ಪತ್ರೆಯ ಸೇವೆ ಮೇಲ್ದರ್ಜೆಗೆ ಏರಿಸಲು ಕೋರಿದ್ದೆ. ಟ್ರಾಮಾ ಸೆಂಟರ್‌ ಆರಂಭಕ್ಕೂ ಒತ್ತಾಯಿಸಿದ್ದೆ. ಸರ್ಕಾರ ಹಸಿರು ನಿಶಾನೆಯೂ ತೋರಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next