Advertisement

ಬಜಗೋಳಿ ಪೇಟೆಗೆ ಬೇಕಿದೆ 108 ಆ್ಯಂಬುಲೆನ್ಸ್‌ ಸೌಲಭ್ಯ

10:51 AM Sep 09, 2019 | sudhir |

ಪಳ್ಳಿ (ಬಜಗೋಳಿ): ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಚೆನ್ನಾಗಿದ್ದರೂ ಸಿಬಂದಿ ಕೊರತೆಯಿಂದ ಬಳಲುತ್ತಿದೆ.

Advertisement

ಬಜಗೋಳಿ, ನಲ್ಲೂರು, ಮುಡಾರು, ನೆಲ್ಲಿಕಾರು, ಮಿಯ್ಯರು, ಮಾಳ ಭಾಗದ ಕಡಾರಿ ಆಸುಪಾಸಿನ ಗ್ರಾಮಸ್ಥರು ಬಹುತೇಕವಾಗಿ ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ.

ಎರಡು ಕೇಂದ್ರಗಳಲ್ಲಿ ಕರ್ತವ್ಯ

ಬಜಗೋಳಿ ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸು ತ್ತಿದ್ದು, ಜತೆಗೆ ಈದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಭಾರವಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಎರಡು ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆಯಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.

ಅತಿ ಮುಖ್ಯವಾದ ಪ್ರಥಮ ದರ್ಜೆ ಸಹಾಯಕ ಹುದ್ದೆಯು 2014ರಿಂದ ತೆರವಾಗಿದ್ದು ಆನ್‌ಲೈನ್‌ ಅಪ್ಡೇಟ್ ಹಾಗೂ ಇನ್ನಿತರ ಕಾರ್ಯ ನಿರ್ವಹಿಸಲು ತೊಂದರೆಯುಂಟಾಗಿದೆ.

Advertisement

ಉಪಕೇಂದ್ರ

ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರವು 3 ಉಪಕೇಂದ್ರಗಳನ್ನು ಹೊಂದಿದ್ದು ಮುಡಾರು, ನಲ್ಲೂರು ಬಿರಾಲುಪೇಟೆ ಹಾಗೂ ಪುಚ್ಚಬೆಟ್ಟುವಿನಲ್ಲಿ ಹೊಂದಿದೆ. ಆದರೆ ಪುಚ್ಚಬೆಟ್ಟುವಿನಲ್ಲಿ ಉಪಕೇಂದ್ರವು ಕಟ್ಟಡವನ್ನು ಹೊಂದಿಲ್ಲ.

ಆ್ಯಂಬುಲೆನ್ಸ್‌ ಸೌಲಭ್ಯ

ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ್ಯಂಬುಲೆನ್ಸ್‌ ವಾಹನವಿದ್ದು ಚಾಲಕ ಮಂಜೂರಾತಿಯಾಗಿಲ್ಲ. ಇದೀಗ ನಿಯೋಜಿತ ಸಿಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರವು ಬಜಗೋಳಿ ಪೇಟೆಯ ಕೇಂದ್ರ ಭಾಗದಲ್ಲಿದ್ದು ತುರ್ತು ಸಂದರ್ಭಗಳಲ್ಲಿ ಮೀಟಿಂಗ್‌ ಹಾಲ್ ಅವಶ್ಯಕತೆ ಇದೆ.

ಆ್ಯಂಬುಲೆನ್ಸ್‌ ಆಗತ್ಯ

ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರವು ಬಜಗೋಳಿ, ನಲ್ಲೂರು, ಮುಡಾರು, ನೆಲ್ಲಿಕಾರು, ಮಾಳ ಭಾಗದ ಕಡಾರಿ ಹಾಗೂ ಇನ್ನಿತರ ಆಸುಪಾಸಿನ ಗ್ರಾಮಸ್ಥರು ತುರ್ತು ಸಂದರ್ಭಗಳಲ್ಲಿ ಕಾರ್ಕಳ ಅಥವಾ ಅಜೆಕಾರಿನ ಆ್ಯಂಬುಲೆನ್ಸ್‌ಗೆ ಕಾಯಬೇಕಾಗಿದೆ. ಹಾಗಾಗಿ ತುರ್ತು ಸಂದರ್ಭಗಳಲ್ಲಿ ವಿಳಂಬವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

– ಸಂದೇಶ್‌ ಕುಮಾರ್‌ ಪಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next