Advertisement

Covid: ರಾಜ್ಯದಲ್ಲಿ 104 ಹೊಸ ಕೋವಿಡ್‌ ಪ್ರಕರಣ

11:41 PM Dec 23, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಹೊಸದಾಗಿ 104 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 8 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿತ ಸಕ್ರಿಯ ಪ್ರಕರಣಗಳ ಸಂಖ್ಯೆ 300ರ ಗಡಿ ಸಮೀಪಿಸಿದ್ದು, ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.

Advertisement

ಶನಿವಾರ ಪರೀಕ್ಷೆಗೆ ಒಳಪಡಿಸಲಾದ 1,752 ಮಾದರಿಗಳಲ್ಲಿ ಶೇ.5.93ರಷ್ಟು ಮಾದರಿಗಳಲ್ಲಿ ಸೋಂಕು ದೃಢವಾಗಿದೆ. 258 ಮಂದಿ ಹೋಮ್‌ ಐಸೊಲೇಶನ್‌ ಹಾಗೂ 13 ಮಂದಿ ಆಸ್ಪತ್ರೆಯಲ್ಲಿದ್ದಾರೆ. 6 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ 85 ಪಾಸಿಟಿವ್‌ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣ ಸಂಖ್ಯೆ 234ಕ್ಕೆ ಏರಿಕೆಯಾಗಿದೆ. ಉಳಿದಂತೆ ಚಾಮರಾಜನಗರ, ತುಮಕೂರು ಜಿಲ್ಲೆಯಲ್ಲಿ ತಲಾ 2, ದ.ಕ., ಮಂಡ್ಯದಲ್ಲಿ ತಲಾ 1, ಶಿವಮೊಗ್ಗ 6, ಮೈಸೂರು 7 ಪ್ರಕರಣಗಳು ವರದಿಯಾಗಿದೆ. ಉಳಿದ 24 ಜಿಲ್ಲೆಯಲ್ಲಿ ಶೂನ್ಯ ಪಾಸಿಟಿವಿಟಿ ವರದಿಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next