Advertisement

ಕ್ರಿಕೆಟಿಗ ವಸಂತ್‌ ರಾಯ್‌ಜೀಗೆ ನೂರರ ಹುಟ್ಟುಹಬ್ಬದ ಸಂಭ್ರಮ

10:10 AM Jan 28, 2020 | sudhir |

ಮುಂಬಯಿ: ಭಾರತೀಯ ಕ್ರಿಕೆಟಿನ ಅತೀ ಹಿರಿಯ ಆಟಗಾರ ವಸಂತ್‌ ರಾಯ್‌ಜೀ ರವಿವಾರ 100ನೇ ವರ್ಷಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಖ್ಯಾತ ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌ ಮತ್ತು ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್‌ ವೋ ಅವರು ವಸಂತ್‌ ನಿವಾಸಕ್ಕೆ ಭೇಟಿ ನೀಡಿ ಕೇಕ್‌ ಕತ್ತರಿಸಿದರು. ಈ ಮೂಲಕ ರಾಯ್‌ಜೀ ಅವರ ಸಂಭ್ರಮವನ್ನು ಹೆಚ್ಚಿಸಿದರು.

Advertisement

1940ರ ದಶಕದಲ್ಲಿ ವಸಂತ್‌ ರಾಯ್‌ಜೀ ಅವರು ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ್ದರು. ಒಟ್ಟು 9 ಪಂದ್ಯವಾಡಿದ ಅವರು 277 ರನ್‌ ಗಳಿಸಿದ್ದಾರೆ. 68 ರನ್‌ ಗರಿಷ್ಠ ಸಾಧನೆ. ತಮ್ಮ ಆಟದ ದಿನಗಳಲ್ಲಿ ಅವರು ಆಗಿನ ಬಾಂಬೆ ಹಾಗೂ ಬರೋಡವನ್ನು ಪ್ರತಿನಿಧಿಸಿದ್ದರು. ಅನಂತರ ಅವರು ಕ್ರಿಕೆಟ್‌ ಇತಿಹಾಸಕಾರರಾಗಿ ಖ್ಯಾತರಾದರು.

ಅವರಿಗೆ 13ನೇ ವರ್ಷವಾಗಿದ್ದಾಗ ಭಾರತ ತನ್ನ ಟೆಸ್ಟ್‌ ಇತಿಹಾಸದ ಮೊದಲ ಪಂದ್ಯವಾಡಿತು. ಅಂದಿನಿಂದ ಇಲ್ಲಿಯ ತನಕ ರಾಯ್‌ಜೀ ಭಾರತದ ಎಲ್ಲ ಟೆಸ್ಟ್‌ ಪಂದ್ಯಗಳಿಗೆ ಸಾಕ್ಷಿಯಾಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next