Advertisement

ಪಾಕ್ ಕುಮ್ಮಕ್ಕು: 10 ಸಾವಿರ ಜಿಹಾದಿಗಳು ಪಾಕ್ ನಿಂದ ಅಫ್ಘಾನ್ ಗೆ ಆಗಮನ: ಅಶ್ರಫ್ ಘನಿ

03:56 PM Jul 17, 2021 | Team Udayavani |

ಕಾಬೂಲ್: ತಾಲಿಬಾನ್ ಬೆದರಿಕೆ ನಡುವೆಯೂ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ವಾಕ್ಸಮರ ಮುಂದುವರಿದಿದೆ. ಪಾಕಿಸ್ತಾನದ ಸೇನೆ ತಾಲಿಬಾನ್ ಗೆ ಬೆಂಬಲ ನೀಡುತ್ತಿದೆ ಎಂದು ಅಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಘನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಇದನ್ನೂ ಓದಿ:ಖ್ಯಾತ ಪೋರ್ನ್ ಸ್ಟಾರ್ ಡೇಲಿಯಾ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ತಮ್ಮ ತೀಕ್ಷ್ಣವಾದ ಭಾಷಣದಲ್ಲಿ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು, ಕಳೆದ ತಿಂಗಳು 10 ಸಾವಿರಕ್ಕೂ ಅಧಿಕ ಜಿಹಾದಿಗಳು ಪಾಕಿಸ್ತಾನದಿಂದ ಅಫ್ಘಾನಿಸ್ತಾನವನ್ನು ಪ್ರವೇಶಿಸಿದ್ದಾರೆ. ಅಷ್ಟೇ ಅಲ್ಲ ಶಾಂತಿ ಮಾತುಕತೆಯಲ್ಲಿ ಗಂಭೀರವಾಗಿ ಪಾಲ್ಗೊಳ್ಳುವಂತೆ ಇಸ್ಲಾಮಾಬಾದ್ ತಾಲಿಬಾನ್ ಉಗ್ರರಿಗೆ ಮನವರಿಕೆ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ತಾಷ್ಕೆಂಟ್ ನಲ್ಲಿ ನಡೆದಿದ್ದ ಮಧ್ಯ ಮತ್ತು ದಕ್ಷಿಣ ಏಷ್ಯಾ ಸಂಪರ್ಕ ಸಮಾವೇಶದಲ್ಲಿ ಮಾತನಾಡಿದ್ದ ಸಂದರ್ಭದಲ್ಲಿ ಘನಿ ಈ ಹೇಳಿಕೆ ನೀಡಿದ್ದಾರೆ. ಈ ಸಮಾವೇಶದಲ್ಲಿ ಭಾರತದ ಪ್ರಧಾನಿ ಮೋದಿ, ಇಮ್ರಾನ್ ಖಾನ್ ಹಾಜರಿದ್ದರು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next