Advertisement

‌ಕಸ ವಿಂಗಡಿಸದಿದ್ದರೆ ಸಾವಿರ ರೂ.ದಂಡ

12:17 PM Sep 24, 2020 | Suhan S |

ಬೆಂಗಳೂರು: ನಗರದಲ್ಲಿ ಪ್ರತ್ಯೇಕ ಕಸ ಸಂಗ್ರಹ ಯೋಜನೆ ಜಾರಿಯಾಗುತ್ತಿರುವ ವಾರ್ಡ್‌ಗಳಲ್ಲಿ ಹಸಿ, ಒಣ ಹಾಗೂ ವೈದ್ಯಕೀಯಕಸವನ್ನು ಪ್ರತ್ಯೇಕಿಸಿ ನೀಡದೆ ಇದ್ದರೆ ದಿನಕ್ಕೆ ಸಾವಿರ ರೂ. ದಂಡ ವಿಧಿಸುವಂತೆ ಘನತ್ಯಾಜ್ಯ ನಿರ್ವಹಣೆಯ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಅವರು ಸೂಚನೆ ನೀಡಿದರು.

Advertisement

ನಗರದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ವಾರ್ಡ್‌ ಹಾಗೂ ದೀಪಾಂಜಲಿ ನಗರ ವಾರ್ಡ್‌ಗಳಲ್ಲಿ ಪ್ರತ್ಯೇಕ ಹಸಿಕಸ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಆಯುಕ್ತರು, ನಗರದಲ್ಲಿ ಕಸ ವಿಂಗಡಣೆ ಮಾಡದೆ ನೀಡುವವರಿಗೆ ಒಂದು ಸಾವಿರ ರೂ. ದಂಡ ವಿಧಿಸುವ ಹಾಗೂ ಬಂಧಿಸುವುದಕ್ಕೂ ಅವಕಾಶ ಇದೆ. ಕಸ ವಿಂಗಡಣೆ ಮಾಡದೆ ಇರುವ ಮನೆಗಳನ್ನು ಗುರುತಿಸಿ, ತ್ಯಾಜ್ಯ ಸಂಪರ್ಕ ಕಾರ್ಯಕರ್ತೆಯರ ಮೂಲಕ ಈ ನಿರ್ದಿಷ್ಟ ಮನೆಗಳಿಲ್ಲಿನ ಸಾರ್ವಜನಿಕರಿಗೆ ಕಸ ವಿಂಗಡಣೆ ಸಂಬಂಧ ಜಾಗೃತಿ ಮೂಡಿಸಬೇಕು. ಈ ವೇಳೆಯೂ ಕಸ ವಿಂಗಡಣೆ ಮಾಡದೆ ಇದ್ದರೆ, ಮಾರ್ಷಲ್‌ಗ‌ಳ ಮೂಲಕ ಒಂದು ಸಾವಿರ ರೂ. ದಂಡ ವಿಧಿಸಬೇಕು ಎಂದು ನಿರ್ದೇಶನ ನೀಡಿದರು.

ಹೊಸ ಯೋಜನೆಯ ಪ್ರಕಾರ ನಿರ್ದಿಷ್ಟ ಸಮಯದಲ್ಲಿ ಕಸ ಸಂಗ್ರಹ ಮಾಡಬೇಕು. ಬ್ಲಾಕ್‌ ಸ್ಪಾಟ್‌ಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡ ಬಾರದು. ಮನೆ – ಮನೆಯಿಂದ ಸಂಗ್ರಹ ವಾಗುವಕಸ ಆಟೋದಿಂದ ನೇರವಾಗಿ ಕಾಂಪ್ಯಾ ಕ್ಟರ್‌ಗೆ ಲೋಡ್‌ ಆಗಬೇಕು ಎಂದು ಪಾಲಿಕೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ತಿಳಿಸಿದರು. ಈ ವೇಳೆ ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಡಿ. ರಂದೀಪ್‌, ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌, ದಕ್ಷಿಣ ವಲಯ ಜಂಟಿ ಆಯುಕ್ತ ವೀರಭದ್ರ ಸ್ವಾಮಿ, ಅಧೀಕ್ಷಕ ಎಂಜಿನಿಯರ್‌ ಬಸವರಾಜ್‌ ಕಬಾಡೆ ಹಾಗೂ ಘನತ್ಯಾಜ್ಯ ನಿರ್ವಹಣೆ ಮುಖ್ಯ ಎಂಜಿನಿಯರ್‌ ವಿಶ್ವನಾಥ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಸಚ್ಛತಾ ಸಿಬ್ಬಂದಿಗೆ ನೇರ ‌ವೇತನ ‌ಪದತಿ? : ಬೆಂಗಳೂರು: ನಗರದಲ್ಲಿ ಕಸ ಸಂಗ್ರಹ ಹಾಗೂ ಕಸ ವಿಲೇವಾರಿ ಮಾಡುವ ಕೆಲಸದಲ್ಲಿ ತೊಡಗಿಸಿ ಕೊಂಡಿರುವ ಆಟೋ ಚಾಲಕರು ಹಾಗೂ ಸ್ವಚ್ಛತಾ ಸಿಬ್ಬಂದಿಯನ್ನು ಪಾಲಿಕೆಯ ಪೌರಕಾರ್ಮಿಕರು ಎಂದು ಪರಿಗಣಿಸಿ, ಅವರಿಗೆ ನೇರ ವೇತನ ಪಾವತಿ ಮಾಡುವ ಸಂಬಂಧ ಪರಿಶೀಲನೆ ಮಾಡಿ, ನಿಯಮಾನುಸಾರ ಕ್ರಮ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹ ಹಾಗೂ ಕಸ ವಿಲೇವಾರಿ ಮಾಡುವ ಕೆಲಸದಲ್ಲಿ ಕಳೆದ 15ರಿಂದ 20 ವರ್ಷಗಳಿಂದ ತೊಡಗಿಸಿಕೊಂಡಿರುವ ಆಟೋ ಚಾಲಕರು ಹಾಗೂ ಸ್ವತ್ಛತಾ ಸಿಬ್ಬಂದಿ ಗುತ್ತಿಗೆದಾರರ ಅಡಿಯಲ್ಲೇಕೆಲಸಮಾಡುತ್ತಿದ್ದಾರೆ.ಇವರಿಗೆಕನಿಷ್ಠ ಸೌಲಭ್ಯ ಇಲ್ಲ. ಅಲ್ಲದೆ, ವೇತನ ತಾರತಮ್ಯವೂ ಆಗುತ್ತಿದ್ದು, ಇವರನ್ನು ಪಾಲಿಕೆಯ ಪೌರಕಾರ್ಮಿಕರು ಎಂದು ಪರಿಗಣಿಸಿ ನೇರ ವೇತನ ಪಾವತಿ ಮಾಡಬೇಕು ಎಂದು ಪೌರಕಾರ್ಮಿಕ ಸಂಘಟನೆಗಳು ಮನವಿ ಮಾಡಿದ್ದವು.

Advertisement

ಪಾಲಿಕೆಯ ಪೌರಕಾರ್ಮಿಕರನ್ನು 2018ರಿಂದ ಬಯೋಮೆಟ್ರಿಕ್‌ ಪದ್ಧತಿಯ ಹಾಜರಾತಿ ಮತ್ತು ನೇರ ವೇತನಕ್ಕೆ ಒಳಪಡಿಸಲಾಗಿದೆ. ಆದರೆ, ಇವರೊಂದಿಗೆ ಕೆಲಸ ಮಾಡುತ್ತಿರುವ ಆಟೋ ಟಿಪ್ಪರ್‌, ಕಾಂಪ್ಯಾಕ್ಟರ್‌ ಹಾಗೂ ಸ್ವಚ್ಛತಾ ಸಿಬ್ಬಂದಿ ಇನ್ನೂ ಗುತ್ತಿಗೆದಾರರ ಕೆಳಗೆ ಕೆಲಸ ಮಾಡುತ್ತಿದ್ದು, ಇವರನ್ನೂ ನೇರವೇತನಪದ್ಧತಿಗೆಒಳಪಡಿಸುವಂತೆ

ಬಿಬಿಎಂಪಿ ಪೌರಕಾರ್ಮಿಕರು ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘ, ಬಿಬಿಎಂಪಿ ಪೌರಕಾರ್ಮಿಕರ ಸಂಘ ಹಾಗೂ ಪೌರಕಾರ್ಮಿಕರ ಅವಲಂಬಿತರ ಸಂಘಟನೆಗಳನ್ನು ಒಳಗೊಂಡ ಜಂಟಿ ಕ್ರಿಯಾ ಸಮಿತಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತಾ ಅವರಿಗೆ ಮನವಿ ಮಾಡಿತ್ತು. ಈ ಮನವಿಯ ಆಧಾರದ ಮೇಲೆ ಈ ಸಂಬಂಧ ಪರಿಶೀಲನೆ ನಡೆಸುವಂತೆ ಆಡಳಿತಾಧಿಕಾರಿ ಸೂಚಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ವಿಶೇಷ ಆಯುಕ್ತ ಡಿ. ರಂದೀಪ್‌, ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕರಿಂದ ಐದು ಸಾವಿರ ಕಸ ವಿಲೇವಾರಿ ಮಾಡುವ ಆಟೋ ಚಾಲಕರು, ಸ್ವಚ್ಛತಾ ಸಿಬ್ಬಂದಿ ಇದ್ದಾರೆ. ಇವರನ್ನು ನೇರ ವೇತನಕ್ಕೆ ಒಳಪಡಿಸಬೇಕಾದರೆ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗ ಬೇಕಿದೆ. ಬಯೋಮೆಟ್ರಿಕ್‌ ಹಾಜರಾತಿ ಈಗಾಗಲೇ ತೆಗೆದುಕೊಳ್ಳಲಾಗುತ್ತಿದೆ. ಆದರೆ, ಗುತ್ತಿಗೆದಾರರಿಂದಲೇ ವೇತನ ಪಾವತಿ ನಡೆಯುತ್ತಿದೆ. ಈ ಸಂಬಂಧ ಚರ್ಚೆ ಮಾಡಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next