ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಟಿಎಂ ಲೇ ಔಟ್‌ನಲ್ಲಿ ದಾಖಲೆ ಇಲ್ಲದ ಗೋಡೌನ್‌ನಲ್ಲಿದ್ದ 87.90 ಲಕ್ಷ ರೂ ಮೌಲ್ಯದ ಸಾವಿರ ಎಲ್‌ಇಡಿ ಟಿವಿಯನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ತಂಡಗಳು 7.71 ಕೋಟಿ ರೂ. ಮೌಲ್ಯದ ಅಕ್ರಮಗಳನ್ನು ವಶಕ್ಕೆ ಪಡೆದಿವೆ. ನೀತಿ ಸಂಹಿತೆ ಜಾರಿಯಾದಂದಿನಿಂದ ಈವರೆಗೆ 72.84 ಕೋಟಿ ಮೌಲ್ಯದ ಅಕ್ರಮ ಜಪ್ತಿ ಮಾಡಲಾಗಿದೆ.
ಕಳೆದ 24 ಗಂಟೆಯಲ್ಲಿ 1.33 ಕೋಟಿ ರೂ. ನಗದು, 90.94 ಲಕ್ಷ ರೂ. ಮೌಲ್ಯದ ಉಚಿತ ಉಡುಗೊರೆ, 5.12 ಕೋಟಿ ರೂ. ಮೌಲ್ಯದ ಇತರ, 31.41 ಲಕ್ಷ ರೂ. ಮೌಲ್ಯದ 12,872 ಲೀಟರ್ ಮದ್ಯ, 3.05 ಲಕ್ಷ ರೂ. ಮೌಲ್ಯದ 7.31 ಕೆಜಿ ಮಾದಕ ವಸ್ತು ಗಳನ್ನು ವಶಕ್ಕೆ ಜಪ್ತಿ ಮಾಡಲಾಗಿದೆ.
ಈವರೆಗೆ ಒಟ್ಟು 23.19 ಕೋಟಿ ರೂ. ಮೌಲ್ಯದ ನಗದು, 1.73 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆ, 29.01 ಕೋಟಿ ರೂ. ಮೌಲ್ಯದ 9.06 ಲಕ್ಷ ಲೀಟರ್ ಮದ್ಯ, 1.63 ಕೋಟಿ ರೂ. ಮೌಲ್ಯದ 238 ಕೆಜಿ ಮಾದಕ ವಸ್ತು, 9.18 ಕೋಟಿ ರೂ. ಮೌಲ್ಯದ 15.38 ಕೆಜಿ ಚಿನ್ನ, 27.23 ಲಕ್ಷ ರೂ. ಮೌಲ್ಯದ 59 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಈವರೆಗೆ 1,087 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ಅಬಕಾರಿ ಇಲಾಖೆ ಘೋರ ಅಪರಾಧ ಪ್ರಕರಣದಡಿ 1,072 ಪ್ರಕರಣ ದಾಖಲಿಸಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಯವರು 4.62 ಕೋಟಿ ರೂ ಮೌಲ್ಯದ ದಿನಸಿ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. ಸಾಗರ ಟೌನ್ ಪೊಲೀಸರು 31.50 ಲಕ್ಷ ರೂ.ನ ಬಟ್ಟೆ, ಪ್ಲಾಸ್ಟಿಕ್ ಜಪ್ತಿ ಮಾಡಿದ್ದಾರೆ. ದಾವಣಗೆರೆ ಹೊನ್ನಾಳಿ ಯಲ್ಲಿ 73.98 ಲಕ್ಷ ರೂ ಮೌಲ್ಯದ ನಗದು ಬಹುಮಾನವನ್ನು ವಶಕ್ಕೆ ಪಡೆಯಲಾಗಿದೆ.
88 ಲಕ್ಷ ರೂ. ವಸ್ತುಗಳ ಜಪ್ತಿ
ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಸಂಬಂಧ ಕಟ್ಟೆಚ್ಚರ ವಹಿಸಿರುವ ಬೆಂಗಳೂರು ನಗರ ಜಿಲ್ಲೆ ಮತ್ತು ಪಾಲಿಕೆ ಚುನಾವಣಾಧಿಕಾರಿಗಳು ಭಾನುವಾರ 90 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 88 ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 87 ಲಕ್ಷ ರೂ. ಮೌಲ್ಯದ ಉಡುಗೊರೆ ಸಾಮಗ್ರಿಗಳು ಇರುವುದು ವಿಶೇಷ. 0.41 ಕೆ.ಜಿ. ಡ್ರಗ್ಸ್, 81.275 ಲೀಟರ್ ಮದ್ಯ ಅನ್ನು ವಶಪಡಿಸಿಕೊಳ್ಳಲಾಗಿದೆ.