Advertisement

ವಿಜಯ ದಿವಸಕ್ಕಾಗಿ 1000 ಕಿ.ಮೀ. ಯಾತ್ರೆ

11:31 PM Apr 07, 2019 | Team Udayavani |

ಶ್ರೀನಗರ: 20ನೇ ಕಾರ್ಗಿಲ್‌ ವಿಜಯ ದಿವಸ್‌ ಆಚರಣೆಯ ಭಾಗವಾಗಿ ಭಾರತೀಯ ಸೇನಾಪಡೆಯ ಯೋಧರನ್ನೊಳಗೊಂಡ ಮೋಟಾರ್‌ ಸೈಕಲ್‌ ರೈಡರ್‌ಗಳ ತಂಡವು ವಿಶಿಷ್ಟ ಸಾಧನೆ ಮಾಡಲು ಹೊರಟಿದೆ. ಕಾರಕೋರಂ ರೇಂಜ್‌ಗೆ 1 ಸಾವಿರ ಕಿ.ಮೀ ಪ್ರಯಾಣ ನಡೆಸಲಿರುವ ಈ ತಂಡ, ಜುಲೈ 26ರಂದು ಕಾರಕೋರಂ ರೇಂಜ್‌ ತಲುಪಲಿದೆ.

Advertisement

ಪಾಕಿಸ್ಥಾನದ ವಿರುದ್ಧ ಆಪರೇಶನ್‌ ವಿಜಯ್‌ನಲ್ಲಿ ಜಯ ಸಾಧಿಸಿದ ದಿನ ಇದಾಗಿದ್ದು, ಒಟ್ಟು 14 ದಿನಗಳ ಕಾಲ ಈ ತಂಡ ಪ್ರಯಾಣ ನಡೆಸಲಿದೆ. ಈ ತಂಡವು ಅತ್ಯಂತ ಕಡಿದಾದ ಪ್ರದೇಶಗಳಾದ ಚಾಂಗ್‌ ಲಾ, ಕರ್ದುಂಗ್‌ಲಾ ಪಾಸ್‌ ಹಾಗೂ ತೀವ್ರ ಹಿಮಾಚ್ಛಾದಿತ ಭಾಗಗಳ ಮೂಲಕ ಸಾಗಲಿದೆ. ಕೆಲವು ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ 18.176 ಅಡಿ ಎತ್ತರದಲ್ಲಿ ತಂಡ ಸಂಚರಿಸಲಿದ್ದು, ಇಲ್ಲಿ ಉಸಿರಾಟವೂ ಕಷ್ಟವಾಗಿರಲಿದೆ. ಕೆಲವೆಡೆ ಮೈನಸ್‌ 40 ಡಿಗ್ರಿ ತಾಪಮಾನ ಇರಲಿದೆ. ಈ ಹಿಂದೆ ಎಂದೂ ಕಾರಕೋರಂ ರೇಂಜ್‌ಗೆ ಬೈಕ್‌ಗಳ ಮೂಲಕ ಯಾರೂ ಪ್ರಯಾಣಿಸುವ ಸಾಹಸ ಮಾಡಿರಲಿಲ್ಲ.

ರಾಯಲ್‌ ಎನ್‌ಫೀಲ್ಡ್‌ ಹಾಗೂ ಹಿಮಾಲಯನ್‌ ಮೋಟಾರ್‌ನ್ಪೋರ್ಟ್ಸ್ ಸಹಭಾಗಿತ್ವದಲ್ಲಿ ಈ ಪ್ರಯಾಣ ಕೈಗೊಳ್ಳಲಾಗಿದ್ದು, 11 ಬೈಕ್‌ಗಳಲ್ಲಿ ಯೋಧರು ಮತ್ತು ಎನ್‌ಫೀಲ್ಡ್‌ ತಂಡದ ಸದಸ್ಯರು ಪ್ರಯಾಣಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next