Advertisement
ದಂಡದ ಮೊತ್ತ ಒಂದು ಸಾವಿರ ರೂ. ಆಗಿರಲಿದೆ.ಮೋಟಾರ್ ವಾಹನ ಕಾಯ್ದೆ 1988 ನಿಯಮದ ಪ್ರಕಾರ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಹೊರತು ಪಡಿಸಿ ಎಂಟು ಸೀಟಿಗಿಂತ ಕಡಿಮೆ ಸೀಟುಗಳನ್ನು ಹೊಂದಿರುವ ವಾಹನದಲ್ಲಿ ಪ್ರಯಾಣಿಸುವ ಚಾಲಕ, ಇತರ ಪ್ರಯಾಣಿಕರು ಸುರಕ್ಷೆಯ ದೃಷ್ಟಿಯಿಂದ ಸೀಟ್ ಬೆಲ್ಟ್ ಧರಿಸಬೇಕು. ಜತೆಗೆ ಕಾರುಗಳಲ್ಲಿಯೂ ಎಲ್ಲ ಸೀಟುಗಳಿಗೆ ಬೆಲ್ಟ್ ಅಳವಡಿಸಬೇಕು ಎಂದು ಕಾರು ತಯಾರಿಕೆ ಕಂಪೆನಿಗಳಿಗೆ ಸೂಚಿಸಲಾಗಿದೆ ಎಂದು ಕಾಯ್ದೆ ತಿಳಿಸಿದೆ.
ಸೀಟ್ ಬೆಲ್ಟ್ ಧರಿಸದೇ ವಾಹನ ಓಡಿಸುವ ಚಾಲಕನಿಗೆ ಈ ಮೊದಲು 500 ರೂ. ದಂಡ(ಮೊದಲ ಬಾರಿಗೆ)ವಿಧಿಸಲಾಗಿತ್ತು. ಅದೇ ಚಾಲಕ ಎರಡನೇ ಬಾರಿಯೂ ತಪ್ಪು ಪುನರಾವರ್ತಿಸಿದರೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು. ಆದರೆ, ಇದೀಗ ಮೊದಲ ಬಾರಿಗೇ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಪ್ರಾಯೋಗಿಕವಾಗಿ ಒಂದೆರಡು ದಿನಗಳ ಕಾಲ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ನಂತರ ಆದೇಶದಂತೆ ತಪಾಸಣೆ ನಡೆಸಿ ದಂಡ ವಿಧಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.