ಬೆಂಗಳೂರು: ರಾಜ್ಯಾ ದ್ಯಂತ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ಇ-ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ ಎಂದು ಇಂಧನ ಸಚಿವ ವಿ. ಸುನಿಲ್‌ಕುಮಾರ್ ಹೇಳಿದ್ದಾರೆ.
ಬೆಸ್ಕಾಂ ವತಿಯಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ಇ- ಮೊಬಿಲಿಟಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾ ಗಲೇ ರಾಜ್ಯದಲ್ಲಿ 136 ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
2ನೇ ಹಂತದಲ್ಲಿ ರಾಜ್ಯದಲ್ಲಿ 172, ಬೆಂಗಳೂರು ನಗರದಲ್ಲಿ ಪ್ರತ್ಯೇಕವಾಗಿ 152 ಕೇಂದ್ರಗಳನ್ನು ಕೇಂದ್ರ ಸರಕಾರದ ಫೇಮ್ -2 ಯೋಜನೆಯಡಿ ಮತ್ತು ಇತರ ಕೇಂದ್ರಗಳನ್ನು ವಿವಿಧ ಕಂಪೆನಿ ಗಳೊಂದಿಗಿನ ಒಪ್ಪಂದ ಮೂಲಕ ಸ್ಥಾಪಿಸಲಾಗುವುದು ಎಂದರು.
ವಿದ್ಯುತ್ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರಕಾರವು 2017ರಲ್ಲಿಯೇ ವಿದ್ಯುತ್ ವಾಹನ ಮತ್ತು ಶಕ್ತಿ ಸಂಗ್ರಹ ನೀತಿಯನ್ನು ರೂಪಿಸಿದೆ. ದೇಶದಲ್ಲೇ ಈ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ಕರ್ನಾಟಕವಾಗಿದೆ. ಬೆಸ್ಕಾಂ ರಾಜ್ಯದಲ್ಲೇ ಅತಿ ದೊಡ್ಡ ವಿದ್ಯುತ್ ಸರಬರಾಜು ಕಂಪೆನಿಯಾಗಿದೆ. ಹೀಗಾಗಿ, ಬೆಸ್ಕಾಂ ರಾಜ್ಯ ನೋಡಲ್ ಏಜೆನ್ಸಿಯಾಗಿದ್ದು, ಚಾರ್ಜಿಂಗ್ ಕೇಂದ್ರಗಳ ಕಿಯಾ ಯೋಜನೆ ಸಿದ್ಧಪಡಿಸುತ್ತಿದೆ ಎಂದು ತಿಳಿಸಿದರು.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಮಾತನಾಡಿ, ಸದ್ಯ ರಾಜ್ಯದಲ್ಲಿ ಅಂದಾಜು 30 ಸಾವಿರ, ಬೆಂಗಳೂರಿನಲ್ಲಿ 18 ಸಾವಿರ ವಿದ್ಯುತ್ ವಾಹನಗಳು ಓಡಾಡುತ್ತಿವೆ. ವಿದ್ಯುತ್ ವಾಹನ ಖರೀದಿಗೆ ಸಹಾಯಧನ ಮುಂತಾದ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.