Advertisement

2024ಕ್ಕೆ ಆರ್‌ಎಸ್‌ಎಸ್‌ ಸ್ಥಾಪನೆಯಾಗಿ 100 ವರ್ಷ: 1ಲಕ್ಷ ಆರ್‌ಎಸ್‌ಎಸ್‌ ಶಾಖೆ ಹೊಂದುವ ಗುರಿ

12:50 AM Feb 22, 2023 | Team Udayavani |

ಹೊಸದಿಲ್ಲಿ: 2024ರ ಅಂತ್ಯಕ್ಕೆ ಆರ್‌ಎಸ್‌ಎಸ್‌ ಸ್ಥಾಪನೆಯಾಗಿ 100 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಒಂದು ಲಕ್ಷ ಶಾಖೆಗಳನ್ನು ಹೊಂದುವ ಗುರಿಯನ್ನು ಸಂಘ ಹೊಂದಿದೆ.

Advertisement

“ಪ್ರಸ್ತುತ 60,000 ಸ್ಥಳಗಳಲ್ಲಿ 85,000ಕ್ಕೂ ಹೆಚ್ಚು ಆರ್‌ಎಸ್‌ಎಸ್‌ ಶಾಖೆಗಳಿವೆ. 2024ರಲ್ಲಿ ಸಂಘವು ಶತಮಾನೋತ್ಸವ ಆಚರಿಸಲಿದೆ. 2025ರ ವೇಳೆಗೆ ಶಾಖೆಗಳ ಸಂಖ್ಯೆಯನ್ನು 1 ಲಕ್ಷಕ್ಕೆ ಏರಿಸುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ಈಗಾಗಲೇ 3 ವರ್ಷಗಳ ರೂಪುರೇಷೆ ಸಿದ್ಧವಾಗಿದ್ದು, ಅದರಂತೆ ಯೋಜನೆಗಳು ಜಾರಿಯಲ್ಲಿವೆ’ ಎಂದು ಆರ್‌ಎಸ್‌ಎಸ್‌ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

“ಸದ್ಯ ದೇಶದ ಶೇ.50ರಷ್ಟು ಮಂಡಲಗಳಲ್ಲಿ ಆರ್‌ಎಸ್‌ಎಸ್‌ ಶಾಖೆಗಳಿವೆ. ಇದನ್ನು ಎಲ್ಲ ಮಂಡಲಗಳಿಗೂ ವಿಸ್ತರಿಸುವ ಯೋಜನೆಯಿದೆ. ಶತಮಾನೋತ್ಸವ ಸಮಾರಂಭವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಆದರೆ ಈ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ‘ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next