ಪ್ರಧಾನಿ ನರೇಂದ್ರ ಮೋದಿ ಅವರ “ಮನ್ ಕೀ ಬಾತ್’ ಬಾನುಲಿ ಕಾರ್ಯಕ್ರಮವು ಶೀಘ್ರದಲ್ಲೇ 100ನೇ ಆವೃತ್ತಿ ಪೂರೈಸುತ್ತಿದೆ. ಇದರ ಸ್ಮರಣಾರ್ಥ ಆರ್‌ಬಿಐ 100 ರೂ. ಮುಖಬೆಲೆಯ ನಾಣ್ಯವನ್ನು ಅನಾವರಣಗೊಳಿಸುತ್ತಿದೆ. ತಮ್ಮ 100ನೇ “ಮನ್ ಕೀ ಬಾತ್” ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಘೋಷಿಸುವ ಸಾಧ್ಯತೆ ಇದೆ.
Advertisement
ಹೇಗಿರಲಿದೆ ನಾಣ್ಯ? ನಾಣ್ಯದ ಒಂದು ಬದಿಯಲ್ಲಿ 100 ರೂ. ಮುಖಬೆಲೆಯ ಗುರುತು ಇರಲಿದೆ. ಇನ್ನೊಂದು ಬದಿಯಲ್ಲಿ “ಮನ್ ಕೀ ಬಾತ್’ 100ನೇ ಆವೃತ್ತಿಯ ಸಂಕೇತವಿದ್ದು, ಇದರಲ್ಲಿ ಧ್ವನಿ ತರಂಗಗಳಿರುವ ಮೈಕ್ರೊಫೋನ್ ಚಿತ್ರವಿರಲಿದೆ. ನಾಣ್ಯದ ಒಟ್ಟು ತೂಕ 35 ಗ್ರಾಂ ಇರಲಿದೆ ಎಂದು ಮೂಲಗಳು ತಿಳಿಸಿವೆ.
“ಮನ್ ಕೀ ಬಾತ್’ 100ನೇ ಆವೃತ್ತಿಯ ಬಾನುಲಿ ಕಾರ್ಯಕ್ರಮವು ಏ.30ರಂದು ಪ್ರಸಾರವಾಗಲಿದೆ. ಇದು ಆಯ್ದ 1 ಲಕ್ಷ ಸ್ಥಳಗಳಲ್ಲಿ ಪ್ರಸಾರ ಆಗಲಿದೆ.