Advertisement

ಪುಣೆ ಕನ್ನಡ ಕಲಿಕಾ ವರ್ಗಕ್ಕೆ ಶೇಕಡಾ 100 ಫಲಿತಾಂಶ

03:10 PM Jul 11, 2018 | |

ಪುಣೆ: ಪುಣೆಯ ಮರಾಠಿ-ಕನ್ನಡ ಸ್ನೇಹ ವರ್ಧನ ಕೇಂದ್ರವು ಕನ್ನಡೇತರರಿಗಾಗಿ ವಿಶೇಷವಾ ಗಿ ಮರಾಠಿಗರ ಸಲುವಾಗಿ ನಡೆಯುತ್ತಿರುವ ಕಲಿಕಾ ವರ್ಗದ 2017-2018 ನೇ ಶೈಕ್ಷಣಿಕ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಶೇ. 100 ಫಲಿತಾಂಶ ಲಭಿಸಿದೆ.

Advertisement

ತರಗತಿಯ ವೃಂದಾ ಮಾಧವ ಘಾಟೆ ಅವರು ಶೇ. 96 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ಗಳಿಸಿದರೆ, ಶುಭದಾ ಅರವಿಂದ ಮುಳಗುಂದ, ಅಚ್ಯುತ ಗೋಪಾಲ್‌ ಕುಲಕರ್ಣಿ ಮತ್ತು ಪ್ರಾಧ್ಯಾಪಕ ವಿಜಯ ದಿನಕರ ಸಾಠೆ ಇವರು ಶೇ. 93 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಅನಘಾ ಆನಂದ ಕುಲಕರ್ಣಿ ಇವರು ಶೇ. 92.05 ಅಂಕಗಳೊಂದಿಗೆ ತೃತೀಯ ಸ್ಥಾನಿಯಾಗಿದ್ದಾರೆ.

ಪುಣೆಯ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರವು ಕನ್ನಡೇತರರಿಗಾಗಿ ವಿಶೇಷವಾಗಿ ಮರಾಠಿಗರ ಸಲುವಾಗಿ 1992-1993 ನೇ ಸಾಲಿನಲ್ಲಿ ಆರಂಭಿಸಿರುವ ಕನ್ನಡ ಕಲಿಕಾ ವರ್ಗವು ಈ ವರ್ಷದ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು, ಇದೊಂದು ಕನ್ನಡಿಗರು ಮರಾಠಿಗರ ಅನುಬಂಧದ ಐತಿಹಾಸಿಕ ದಾಖಲೆಯಾಗಿದೆ ಎಂದು ಕನ್ನಡ ಕಲಿಕಾ ವರ್ಗದ ಸಂಚಾಲಕ, ಶಿಕ್ಷಕ ಕೃ. ಶಿ. ಹೆಗಡೆ ಇವರು ತಿಳಿಸಿದ್ದಾರೆ.

ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಕನ್ನಡ ಬರೆಯಲು, ಓದಲು, ಮಾತನಾಡಲು ಬಾರದ, ತುಳು, ಕೊಂಕಣಿ ಭಾಷಿಗರು ಅಥವಾ ಇತರ ಮಾಧ್ಯಮ ಗಳಲ್ಲಿ ಶಿಕ್ಷಣ ಪಡೆದವರು ಪ್ರವೇಶನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 9890391552, 9922780677 ನಂ.ಗೆ ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next