Advertisement

ರೈತರ ಪಿಂಚಣಿ ಯೋಜನೆಗೆ ಮಾಸಿಕ 100 ರೂ. ಕಂತು

12:41 AM Jun 14, 2019 | sudhir |

ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ “ಪ್ರಧಾನಮಂತ್ರಿ ಕಿಸಾನ್‌ ಪಿಂಚಣಿ’ ಯೋಜನೆಯ ವ್ಯಾಪ್ತಿಗೆ ಬರುವ ರೈತರು, ಮಾಸಿಕ 100 ರೂ. ಪಾವತಿಸಬೇಕು. ಅಂಥ ರೈತರು 60 ವರ್ಷಕ್ಕೆ ಕಾಲಿಟ್ಟ ಅನಂತರ ಅವರಿಗೆ ಮಾಸಿಕ 3,000 ರೂ.ಗಳ ಪಿಂಚಣಿ ಸಿಗಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ರಾಜ್ಯಗಳ ಕೃಷಿ ಸಚಿವರ ಜತೆ ಗುರುವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ಎಲ್ಲ ರಾಜ್ಯಗಳನ್ನೂ ಈ ಯೋಜನೆ ತ್ವರಿತ ಜಾರಿಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. 18ರಿಂದ 40 ವರ್ಷದೊಳಗಿನ ರೈತರನ್ನು ಈ ಯೋಜನೆ ವ್ಯಾಪ್ತಿಗೆ ಸೇರಿಸಿ ಕೊಳ್ಳುವಂತೆ ಮತ್ತು ಈ ಬಗ್ಗೆ ಜಾಗೃತಿ ಮೂಡಿಸುವಂತೆಯೂ ಸಲಹೆ ನೀಡಿದ್ದಾರೆ. ಜತೆಗೆ, ರೈತರು ಪಾವತಿಸುವ ಒಟ್ಟಾರೆ ಪ್ರೀಮಿಯಂ (ಕಂತು) ಮೊತ್ತಕ್ಕೆ ಸರಿಸಮನಾದ ಮೊತ್ತವನ್ನು ಕೇಂದ್ರ ಸರಕಾರ ಪ್ರತಿ ರೈತನ ಖಾತೆಯಲ್ಲಿ ತೊಡಗಿಸಲಿದೆ. ಯೋಜನೆಯ ಉಸ್ತುವಾರಿಯನ್ನು ಎಲ್‌ಐಸಿ ವಹಿಸಿಕೊಂಡಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next