Advertisement

ಫೆಬ್ರವರಿ 1ರಿಂದ ಸಂಪೂರ್ಣವಾಗಿ ತೆರೆಯಲಿವೆ ಚಿತ್ರಮಂದಿರಗಳು

08:35 PM Jan 31, 2021 | Team Udayavani |

ನವದೆಹಲಿ: ದೇಶದಲ್ಲಿನ ಚಿತ್ರಮಂದಿರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ  ಮಾರ್ಗಸೂಚಿಯನ್ನು ಜಾರಿಗೊಳಿಸಿದ್ದು, ಈ ಮಾರ್ಗಸೂಚಿ ಅನ್ವಯ ಮುಂಬರುವ ಫೆಬ್ರವರಿ 1 ರಿಂದ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರು ಸಿನಿಮಾ ನೊಡಲು ಅವಕಾಶ ಕಲ್ಪಿಸಿದೆ.

Advertisement

ಕೇಂದ್ರ ಗೃಹ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು,   ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಿನಿಮಾ ಪ್ರದರ್ಶನ ಮಾಡುವಂತೆ ತಿಳಿಸಿದ್ದು, ಕಂಟೈನ್ ಮೆಂಟ್ ವಲಯಗಳಲ್ಲಿ ಮಾತ್ರ ಹಿಂದೆ ಇದ್ದ ನಿಯಮಗಳೇ ಮುಂದುವರೆಯಲಿದೆ ಎಂದಿದೆ.

ಇದನ್ನೂ ಓದಿ: “ಹಾರ್ಮ್ ಫುಲ್ ಕಂಟೆಂಟ್ ಗಳನ್ನು ನಿಯಂತ್ರಿಸಲು ಹೊಸ ತಂತ್ರ” : ಫೇಸ್ ಬುಕ್

ಚಿತ್ರಮಂದಿರಗಳಲ್ಲಿ ಮಾಸ್ಕ್ ಬಳಕೆ, ತಾಪಮಾನ ಪರೀಕ್ಷೆ, ಸಾಮಾಜಿಕ ಅಂತರಗಳನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ಇದರ ಜೊತೆಗೆ ಸ್ಯಾನಿಟೈಸರ್ ಬಳಕೆ ಹಾಗೂ ಡಿಜಿಟಲ್ ಪೇಮೆಂಟ್,  ವ್ಯವಸ್ಥೆಗಳನ್ನೂ ಕೂಡಾ ಕಡ್ಡಾಯವಾಗಿ ಪಾಲಿಸುವಂತೆ  ಮತ್ತು ಆನ್ ಲೈನ್ ಮೂಲಕವೇ ಸೀಟು ಕಾಯ್ದಿರಿಸುವಂತೆ  ಸೂಚನೆ ಹೊರಡಿಸಲಾಗಿದೆ.

ಇದನ್ನೂ ಓದಿ:ಸಮಾಜಘಾತುಕ ಕೃತ್ಯದಲ್ಲಿ ತೊಡಗಿದರೆ ನಿರ್ದಾಕ್ಷಿಣ್ಯ ಕ್ರಮ: ಎನ್. ಶಶಿಕುಮಾರ್ ಖಡಕ್ ಎಚ್ಚರಿಕೆ

Advertisement

ಕೋವಿಡ್ ಆರಂಭಗೊಂಡ ಬಳಿಕ ಸಂಪೂರ್ಣ ಬಂದ್ ಆಗಿದ್ದ ಚಿತ್ರಮಂದಿರಗಳಿಗೆ ಕಳೆದ ಅಕ್ಟೋಬರ್ ನಲ್ಲಿ ಶೇ. 50ರಷ್ಟು ಜನರನ್ನು ಒಳಗೊಂಡಂತೆ ಸಿನಿಮಾ ಪ್ರದರ್ಶನ ಮಾಡಲು ಅವಕಾಶ ಒದಗಿಸಲಾಗಿತ್ತು. ಕೆಲ ದಿನಗಳ ಹಿಂದೆ ಚಿತ್ರಮಂದಿರಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next