Advertisement

ಶ್ರೀಶೈಲಮಠದಿಂದ 100 ಮನೆ

10:57 PM Sep 10, 2019 | Lakshmi GovindaRaju |

ದಾವಣಗೆರೆ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಸರ್ವಸ್ವವನ್ನೂ ಕಳೆದುಕೊಂಡು ಸಂತ್ರಸ್ತರಾಗಿರುವ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಶ್ರೀಶೈಲ ಪೀಠ 100 ಮನೆಗಳನ್ನು ನಿರ್ಮಿಸಿಕೊಡಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶ್ರೀಶೈಲ ಜಗದ್ಗುರು ಶ್ರೀಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಈ ವಿಷಯ ತಿಳಿಸಿದರು.

Advertisement

ಉತ್ತರ ಕರ್ನಾಟಕದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹದಿಂದ ಜನ  ಬೀದಿಗೆ ಬಂದಿದ್ದಾರೆ. ಅವರಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶ್ರೀ ಶೈಲ ಪೀಠದಿಂದ 100 ಮನೆ ನಿರ್ಮಿಸಿಕೊಡಲಾಗುವುದು. ಈ ಮಹಾತ್ಕಾರ್ಯಕ್ಕೆ ತಾವು ಪೀಠಾಧಿಪತಿಗಳಾದ ನಂತರ ಭಕ್ತಾದಿಗಳು ಕಾಣಿಕೆಯಾಗಿ ಇದುವರೆಗೂ ಅರ್ಪಿಸಿರುವ ಬಂಗಾರವನ್ನು ಮಾರಿ ಬಂದ ಹಣದ ಜತೆಗೆ ಸಾರ್ವಜನಿಕರ ನೆರವು ಬಳಸಿಕೊಳ್ಳಲಾಗುವುದು ಎಂದರು.

ಆಗಸ್ಟ್‌ನಲ್ಲಿ ಉ.ಕ.ದಲ್ಲಿ ನೆರೆ ಹಾವಳಿ, ಅತಿವೃಷ್ಟಿಯಿಂದಾಗಿ ಲಕ್ಷಾಂತರ ಮಂದಿ ಬೀದಿಗೆ ಬಂದಿದ್ದಾರೆ. ಶ್ರಾವಣ ಮಾಸದ ಅನುಷ್ಠಾನ ಪೂಜೆಯಲ್ಲಿ ತಾವು ತೊಡಗಿದ್ದರಿಂದ ಆ ಸಂದರ್ಭ ಸಂತ್ರಸ್ತರ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆದರೂ ಶ್ರೀಮಠದಿಂದ 6-7 ಹಳ್ಳಿಗಳಲ್ಲಿ ನಿತ್ಯ ದಾಸೋಹ ವ್ಯವಸ್ಥೆ ಹಾಗೂ 3000 ಕಿಟ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿತ್ತು ಎಂದರು.

2010ರಲ್ಲಿ ತಾವು ಶ್ರೀಶೈಲ ಪೀಠಾರೋಹಣ ಮಾಡಿದ್ದು, ಈ 9 ವರ್ಷಗಳಲ್ಲಿ ಭಕ್ತರು ಪೀಠಕ್ಕೆ ಕಾಣಿಕೆಯಾಗಿ ಅರ್ಪಿಸಿದ್ದ ಬಂಗಾರವನ್ನು ಒಟ್ಟುಗೂಡಿಸಿ ಶ್ರೀಶೈಲ ಪೀಠದಲ್ಲಿ ಜಗದ್ಗುರು ಪಂಡಿತಾರಾಧ್ಯರ ಲಿಂಗೋದ್ಭವ ಮೂರ್ತಿಗೆ ಸುವರ್ಣ ಕವಚ ನಿರ್ಮಿಸುವ ಆಲೋಚನೆ ಹೊಂದಿದ್ದೆವು. ಆ ಕಾರ್ಯಕ್ಕಿಂತ ಸಂಕಷ್ಟದಲ್ಲಿರುವ ಜನರಿಗೆ ನೆರ ವಾಗುವುದು ಸೂಕ್ತ ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next