Advertisement

ಅಕ್ವೇರಿಯಂನಲ್ಲಿ 100 ಗ್ಯಾಲನ್‌ ಹಳೇ ನಾಣ್ಯ ಪತ್ತೆ

12:51 AM Aug 13, 2020 | mahesh |

ಉತ್ತರ ಕರೊಲಿನಾ: ಕೋವಿಡ್ ಬಿಕ್ಕಟ್ಟು ಉದ್ಭವಿಸಿದ ಮೇಲೆ ಸಾಕಷ್ಟು ವ್ಯವಹಾರಗಳಿಗೆ ಚಿಲ್ಲರೆ ಸಮಸ್ಯೆ ಎದುರಾಗಿದೆ. ಆದರೆ, ಇಲ್ಲಿನ ಒಂದು ಅಕ್ವೇರಿಯಂನಲ್ಲಿ 100 ಗ್ಯಾಲನ್‌ ಹಳೇ ನಾಣ್ಯಗಳು ಪತ್ತೆಯಾಗಿವೆ.

Advertisement

ಪೈನ್‌ನಾಲ್‌ ಶೋರ್ನ ಅಕ್ವೇರಿಯಂ 5 ತಿಂಗಳಿಂದ ಬಂದ್‌ ಆಗಿತ್ತು. ಆದರೆ, ಅಕ್ವೇರಿಯಂ ಸಂಬಂಧಿತ ಹಲವು ಬಿಲ್‌ ಪಾವತಿ ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಸಂದರ್ಶಕರು ಅಕ್ವೇ ರಿಯಂ ಒಳಗೆ ಹಾಕಿದ “ಹಾರೈಕೆ’ ನಾಣ್ಯಗಳನ್ನು ಸಿಬ್ಬಂದಿ ಸಂಗ್ರಹಿಸಿದ್ದಾರೆ.

“30 ಅಡಿ ಎತ್ತರದ ಸ್ಮೋಕಿ ಮೌಂಟೇನ್‌ ಜಲಪಾತವನ್ನು ಬಂದ್‌ ಮಾಡಿ ನಾಣ್ಯ ಎಣಿಕೆ ಮಾಡಲಾಯಿತು. ಅಂದಾಜು 8.12 ಲಕ್ಷ ರೂ.ಸಂಗ್ರಹವಾಗಿದೆ. ಜನರ ಆಶಯಗಳಿಗೆ, ಕನಸುಗಳಿಗೆ ಎಷ್ಟೊಂದು ಬೆಲೆಯಿದೆ? ಈ ಹಣದಿಂದ ಕೆಲವು ತಿಂಗಳವರೆಗೆ ಅಕ್ವೇರಿಯಂ ನಿರ್ವಹಿಸಲು ಸಾಧ್ಯವಿದೆ’ ಎಂದು ಪೈನ್‌ನಾಲ್‌ ಶೋರ್ನ ಅಕ್ವೇರಿಯಂ ಫೇಸ್‌ಬುಕ್‌ ಖಾತೆ ಹೇಳಿದೆ. ನಾಣ್ಯಗಳ ಬೃಹತ್‌ ರಾಶಿಯ ಚಿತ್ರಗಳು ವೈರಲ್‌ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next