Advertisement

ಯೋಧರಿಗೆ ವರ್ಷಕ್ಕೆ 100 ರಜೆ!? ಪ್ರಸ್ತಾವನೆಯಾಗಿ ರೂಪು ತಳೆಯಲಿದೆ ಅಮಿತ್‌ ಶಾ ಪರಿಕಲ್ಪನೆ

10:17 PM Mar 27, 2022 | Team Udayavani |

ನವದೆಹಲಿ: ಕೇಂದ್ರೀಯ ಸಶಸ್ತ್ರ ಸೇನಾ ಪಡೆಗಳ (ಸಿಎಪಿಎಫ್) ಯೋಧರು ವರ್ಷದಲ್ಲಿ ತಮ್ಮ ಕುಟುಂಬದೊಂದಿಗೆ ಕನಿಷ್ಠ 100 ದಿನಗಳನ್ನು ಕಳೆಯುವಂತೆ ಮಾಡುವ ಹೊಸ ಚಿಂತನೆಯನ್ನು ಕೇಂದ್ರ ಗೃಹ ಇಲಾಖೆ ನಿರ್ಧರಿಸಿದೆ.

Advertisement

ಗೃಹ ಸಚಿವ ಅಮಿತ್‌ ಶಾ ಅವರ ಈ ಪರಿಕಲ್ಪನೆಯ ಆಧಾರದಲ್ಲಿ ಯೋಧರಿಗೆ ವಾರ್ಷಿಕ 100 ರಜೆಗಳನ್ನು ನೀಡುವ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಅದನ್ನು ಕೇಂದ್ರದ ಒಪ್ಪಿಗೆ ಪಡೆದು ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಈ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸಶಸ್ತ್ರ ಸೇನಾ ಪಡೆಗಳ ಅಧೀನದಲ್ಲಿ ಬರುವ ಎಲ್ಲಾ ಪಡೆಗಳಿಗೂ ಅನ್ವಯಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಈಗಿರುವ ನಿಯಮಗಳಲ್ಲಿ ಬದಲಾವಣೆ ತರಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ:ಎರಡು ವರ್ಷಗಳಿಂದ ರದ್ದಾಗಿದ್ದ ಅಂತಾರಾಷ್ಟ್ರೀಯ ವಿಮಾನಯಾನ ಮತ್ತೆ ಆರಂಭ

ಹೊಸ ಪ್ರಸ್ತಾವನೆ ಸಿದ್ಧಪಡಿಸುವ ಸಲುವಾಗಿ ಈಗಾಗಲೇ ಹಲವಾರು ಸುತ್ತಿನ ಸಭೆಗಳು ನಡೆದಿವೆ. ಈ ಸೌಲಭ್ಯ ಜಾರಿಗೊಳಿಸಲು ಇರುವ ಆಡಳಿತಾತ್ಮಕ ಅಡಚಣೆಗಳನ್ನು ನಿರ್ಮೂಲನೆ ಮಾಡುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಸಿಎಪಿಎಫ್ ನ ನಾನಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 10 ಲಕ್ಷ ಯೋಧರ ಮೇಲಿರುವ ದೈನಂದಿನ ಕರ್ತವ್ಯದ ಒತ್ತಡವನ್ನು ಇಳಿಸಿ, ಅವರ ಸಂತೋಷದ ಸಮಯವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next