Advertisement

100% ಕ್ಯಾಷ್‌ಬ್ಯಾಕ್‌ ಮಾರಾಟ

06:55 AM Jun 10, 2018 | |

ಬೆಂಗಳೂರು: ಮೊಬೈಲ್‌ ಫೋನ್‌ ಮಾರಾಟ ಕ್ಷೇತ್ರದ ಖ್ಯಾತ ಸಂಗೀತಾ ಮೊಬೈಲ್ಸ್‌ ಪ್ರೈ. ಲಿ., ತನ್ನ 44ನೇ
ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಜೂ.1 ರಿಂದ ಜು. 1ರವರೆಗೆ ದೇಶಾದ್ಯಂತ ಸಂಗೀತಾ ಮಳಿಗೆಗಳಲ್ಲಿ ಸ್ಮಾರ್ಟ್‌
ಫೋನ್‌ಗಳನ್ನು ಕೊಳ್ಳುವ ಗ್ರಾಹಕರಿಗೆ ಭರಪೂರ ಕೊಡುಗೆಗಳೊಂದಿಗೆ “ಫುಲ್‌ 100% ಕ್ಯಾಷ್‌ ಬ್ಯಾಕ್‌’ ಮಾರಾಟ ಹಮ್ಮಿಕೊಂಡಿದೆ.

Advertisement

ಈ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಭಾಷ್‌ ಚಂದ್ರ ಅವರು, ರಿಟೈಲ್‌ ಫೋನ್‌ ಮಾರಾಟ ಕ್ಷೇತ್ರದಲ್ಲಿ 100% ಕ್ಯಾಷ್‌ ಬ್ಯಾಕ್‌ ಮಾರಾಟ ನಂಬಲಸಾಧ್ಯ ಎನಿಸಿದರೂ ಇದು ಸತ್ಯ
ಎಂದಿದ್ದಾರೆ.

ಈ 100% ಕ್ಯಾಷ್‌ ಬ್ಯಾಕನ್ನು 10 ಸಮಾನ ಕಂತುಗಳಲ್ಲಿ ಯಾವುದೇ ಮಿತಿಯಿಲ್ಲದೆ ಭವಿಷ್ಯದ 10 ಖರೀದಿಗಳಿಗೆ ನೀಡಲಾಗುತ್ತಿದೆ.

ಕ್ಯಾಷ್‌ಬ್ಯಾಕ್‌ ಅನ್ನು ವೋಚರ್‌ ಅಥವಾ ಸಂಗೀತಾ ಆ್ಯಪ್‌ ಮೂಲಕ ರೆಡೀಮ್‌ ಮಾಡಿಕೊಳ್ಳಬಹುದು. ಫುಲ್‌ 100% ಕ್ಯಾಷ್‌ ಬ್ಯಾಕ್‌ ಕೊಡುಗೆ ಒಂದು ರೀತಿಯ ಚಾಲೆಂಜ್‌ ಆಗಿದ್ದು, ಇದನ್ನು ಪ್ರಥಮ ಬಾರಿಗೆ ಪರಿಚಯಿಸಿದ್ದೇವೆ. ಇದೊಂದು ಬಿಗ್‌ ಬ್ಯಾಂಗ್‌ ಕೊಡುಗೆಯಾಗಿದ್ದು, 70 ಸಾವಿರ ರೂ. ಫೋನ್‌ ಕೊಂಡಲ್ಲಿ 70 ಸಾವಿರ ರೂ. ಕ್ಯಾಷ್‌ ಬ್ಯಾಕ್‌ ಪಡೆಯಲಿದ್ದಾರೆ.

ಅಷ್ಟೇ ಅಲ್ಲದೆ, ಗ್ರಾಹಕರ ಅನುಕೂಲಕ್ಕಾಗಿ ಒಂದು ಹೆಜ್ಜೆ ಮುಂದೆ ಹೋಗಿ ಸ್ಥಳದಲ್ಲೇ 5% ಕ್ಯಾಷ್‌ ಬ್ಯಾಕ್‌ ನೀಡುವ ವ್ಯವಸ್ಥೆಯನ್ನೂ ಕಲ್ಪಿಸಿದ್ದೇವೆ. ಆ್ಯಂಡ್ರಾಯ್ಡ ಫೋನ್‌ ಕೊಳ್ಳುವ ಎಲ್ಲ ಗ್ರಾಹಕರಿಗೆ ಈ ಕೊಡುಗೆ ಅನ್ವಯಿಸಲಿದೆ ಎಂದು ಅವರು ತಿಳಿಸಿದ್ದಾರೆ.

Advertisement

ಮತ್ತಷ್ಟು ಕೊಡುಗೆಗಳು: ಎಸ್‌ಬಿಐ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ಗಳಲ್ಲಿ ಮೊಬೈಲ್‌ ಖರೀದಿಸಿದ್ದಲ್ಲಿ ಶೇ.5 ರಷ್ಟು ಕ್ಯಾಷ್‌ಬ್ಯಾಕ್‌ ಅಥವಾ 1500 ರೂ.ವರೆಗೆ ಕ್ಯಾಷ್‌ಬ್ಯಾಕ್‌ ನೀಡಲಾಗುತ್ತದೆ. ಅದೇ ರೀತಿ ಜೀಯೋ ಸಿಮ್‌ ಬಳಸುತ್ತಿರುವ ಗ್ರಾಹಕರು ನಮ್ಮಲ್ಲಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿದ್ದಲ್ಲಿ ಅಥವಾ ಸ್ಮಾರ್ಟ್‌ಫೋನ್ ಜತೆ ಜಿಯೋ ಸಿಮ್‌ ಕೊಂಡಲ್ಲಿ, ತಕ್ಷಣ ಅವರ ಫೋನ್‌ನ ಐಎಂಇಐ ಸಂಖ್ಯೆಯನ್ನು ಗುರುತಿಸಿ ಆಟೋಮ್ಯಾಟಿಕ್‌ ಆಗಿ ಅವರ ಮೊಬೈಲ್‌ನಲ್ಲಿ 30 ಜಿಬಿ ಡೇಟಾ ಸ್ಟೋರ್‌ ಆಗುತ್ತದೆ. ಪ್ರತಿ ತಿಂಗಳು 5ಜಿಬಿ ಯಂತೆ 6 ತಿಂಗಳು ಉಚಿತವಾಗಿ ಡೇಟಾ ಬಳಸಬಹುದಾಗಿದೆ. ಇದರ ಜತೆ 2,200 ರೂ. ಕ್ಯಾಷ್‌ ಬ್ಯಾಕ್‌ ಕೂಡ ನೀಡಲಾಗುತ್ತದೆ. ಇದನ್ನು ಪ್ರತಿ ತಿಂಗಳು 50 ರೂ.ನಂತೆ 44 ತಿಂಗಳು ರೀಚಾರ್ಜ್‌ ಮಾಡಿಸಿಕೊಳ್ಳಬಹುದು.

ಗೋಐಬಿಬೊ 5300 ರೂ.ಗಳ ಕ್ಯಾಷ್‌ ಬ್ಯಾಕ್‌ ಸಹ ಗ್ರಾಹಕರಿಗೆ ದೊರೆಯುತ್ತದೆ. ಗ್ರಾಹಕರು ವಿಮಾನ ಪ್ರಯಾಣದ ಟಿಕೆಟ್‌ ಮೇಲೆ 300 ರೂ. ರಿಯಾಯಿತಿ ಹಾಗೂ ಹೋಟೆಲ್‌ ರೂಮ್‌ ಬಾಡಿಗೆ ಶೇ.25ರಷ್ಟು ರಿಯಾಯಿತಿ ಪಡೆಯುವ ಅವಕಾಶವಿರುತ್ತದೆ. ಉಳಿದ ಹಣವನ್ನು ಗ್ರಾಹಕರು ಎಷ್ಟು ಸಾರಿ ಬೇಕಾದರೂ ಬಳಸಬಹುದಾಗಿದೆ. ಅದೇ ರೀತಿ ಗ್ರಾಹಕರಿಗೆ ಶೇರ್‌ಇಟ್‌ ಆ್ಯಪ್‌ನಿಂದ 2 ತಿಂಗಳವರೆಗೆ ಅನ್‌ಲಿಮಿಟೆಡ್‌ ಆಗಿ ಎಲ್ಲ ಭಾಷೆಯ ಚಿತ್ರಗಳನ್ನು ನೋಡುವ ಅವಕಾಶವನ್ನೂ ನೀಡುತ್ತಿದ್ದೇವೆ.

ಐಫೋನ್‌ ಮೇಲೆ ರಿಯಾಯ್ತಿ: ಸಂಗೀತಾ ದಲ್ಲಿ ಹಳೇ ಐಫೋನ್‌ ಅನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳುವ ಯೋಜನೆಯೂ ಇದೆ. ಹೊಸ ಫೋನ್‌ಗೆ ಬದಲಾಯಿಸಿಕೊಂಡವರು ಶೇ.50ರಷ್ಟು ಫ್ಲಾಟ್‌ ರಿಯಾಯಿತಿ ಪಡೆಯಲಿ ದ್ದಾರೆ. ಐಸಿಐಸಿಐ ಅಥವಾ ಎಚ್‌ ಡಿಎಫ್‌ಸಿ ಬ್ಯಾಂಕ್‌ ಕ್ರೆಡಿಟ್‌ ಯಾ ಡೆಬಿಟ್‌ ಕಾರ್ಡ್‌ನಲ್ಲಿ ಐಫೋನ್‌ ಖರೀದಿಸಿದವರು 10 ಸಾವಿರ ರೂ.ವರೆಗೆ ರಿಟರ್ನ್ ಗಿಫ್ಟ್‌ ಪಡೆಯಲಿದ್ದಾರೆ. ಒಟ್ಟಾರೆ, ಗ್ರಾಹಕ ಖರೀದಿಸಿದ ಐಫೋನ್‌ ಮೇಲೆ ಸಾಕಷ್ಟು ರಿಯಾಯಿತಿ ಕೊಡುಗೆಗಳು ಸೇರಿ ಪರಿಣಾಮಕಾರಿ ವೆಚ್ಚ ಶೇ.50 ರಷ್ಟು ಮಾತ್ರ ಆಗಲಿದೆ.

ಫೈನಾನ್ಸ್‌ ಸೌಲಭ್ಯದೊಂದಿಗೆ ಡ್ಯಾಮೇಜ್‌ ಪ್ರೊಟೆಕ್ಷನ್‌, ಪ್ರೈಸ್‌ ಪ್ರೊಟೆಕ್ಷನ್‌  ಮುಂದುವರಿಯಲಿವೆ. ಈಗಾಗಲೇ ಪ್ರೈಸ್‌ ಡ್ರಾಪ್‌ ಸ್ಕೀಂನಲ್ಲಿ 1,18,000 ಗ್ರಾಹಕರಿಗೆ 11 ಕೋಟಿ 70 ಲಕ್ಷ ರೂ. ಹಿಂತಿರುಗಿಸಿದ್ದೇವೆ. ಬಂಪರ್‌ ಪ್ರೈಜ್‌ಗಳಲ್ಲಿ 5 ಕಾರುಗಳು, 30 ಬೈಕ್‌ಗಳು, 50 ಸ್ಯಾಮ್‌ಸಂಗ್‌ ಫ್ರಿಜ್‌ಗಳು, 50 ಸ್ಯಾಮ್‌ಸಂಗ್‌ ಟಿವಿಗಳು, 50 ಸ್ಯಾಮ್‌ ಸಂಗ್‌ ಆಟೋಮ್ಯಾಟಿಕ್‌ ವಾಷಿಂಗ್‌ ಮೆಷಿನ್‌ ಹಾಗೂ ಇತರ ಅಶ್ಶೂರ್‌ ಗಿಫ್ಟ್‌ಗಳು ಕೂಡ ಇರುತ್ತವೆ. ಫೋನ್‌ ಖರೀದಿಸಿದ ಪ್ರತಿಯೊಬ್ಬ ಗ್ರಾಹಕರಿಗೆ ಯಾವುದಾದರೂ ಒಂದು ಗಿಫ್ಟ್‌ ಇರುತ್ತದೆ. ನಮ್ಮ ಗ್ರಾಹಕ ಸೇವಾ ಸಂಖ್ಯೆ 080 - 49397000ಯಿಂದ ಗಿಫ್ಟ್‌ ಮೆಸೆಜ್‌ ಬರುತ್ತದೆ ಎಂದು ಸುಭಾಷ್‌ ಚಂದ್ರ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next