Advertisement

ನೂರು ಹಾಸಿಗೆ ಆಸ್ಪತ್ರೆ ಮೇಲ್ದರ್ಜೆಗೆ: ನಕುಲ್‌

06:16 PM Jan 04, 2020 | Team Udayavani |

ಹೊಸಪೇಟೆ: ನಗರದ ಸರ್ಕಾರಿ ಸಾರ್ವಜನಿಕ ಉಪವಿಭಾಗೀಯ (ನೂರು ಹಾಸಿಗೆ) ಆಸ್ಪತ್ರೆಯನ್ನು 104 ಕೋಟಿ ರೂ ವೆಚ್ಚದಲ್ಲಿ ಮೇಲ್ದರ್ಜೆ ಗೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಹೇಳಿದರು.

Advertisement

ಇಲ್ಲಿನ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾ ಖನಿಜ ನಿಧಿಯ (ಡಿಎಂಎಫ್) 104 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಅಂತಸ್ತಿನ ಸುಸಜ್ಜಿತ 150 ಬೆಡ್‌ ಆಸ್ಪತ್ರೆಯನ್ನು ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸಚಿವ ಸಂಪುಟದ ಅನುಮೋದನೆ ಒಂದೇ ಬಾಕಿ ಉಳಿದಿದೆ. ಪ್ರಸ್ತುತ ಇರುವ ನೂರು ಹಾಸಿಗೆ ಆಸ್ಪತ್ರೆಯನ್ನು ಹಾಗೆಯೇ ಉಳಿಸಿಕೊಂಡು, ಆಸ್ಪತ್ರೆ ಹಿಂಭಾಗದ ಜಾಗದಲ್ಲಿ ಎಂಆರ್‌ಐ ಸ್ಕ್ಯಾನ್‌, ಅತ್ಯಾಧುನಿಕ ಸೌಲಭ್ಯಯುಳ್ಳ 150 ಬೆಡ್‌ಗಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುವುದು. ಹವಾನಿಯಂತ್ರಿತ ಕೊಠಡಿಗಳು ನಿರ್ಮಾಣ ಮಾಡಲಾಗುವುದು. ವಿಶೇಷ ಕೊಠಡಿಗಳಿಗೆ ಶುಲ್ಕ ಪಾವತಿ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.

ಸೋಲಾರ್‌ ವಿದ್ಯುತ್‌ ಶಕ್ತಿ ಸೌಲಭ್ಯ, ಶುದ್ಧ ಕುಡಿಯುವ ನೀರು ಸೇರಿದಂತೆ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ಸೌಕರ್ಯಗಳು ಇಲ್ಲಿ ದೊರೆಯಲಿವೆ ಎಂದು ವಿವರಿಸಿದರು. ಶಾಸಕ ಆನಂದ ಸಿಂಗ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಜನಾರ್ಧನ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸವರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ, ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸೀಫ್, ತಹಶೀಲ್ದಾರ್‌ ಎಚ್‌.ವಿಶ್ವನಾಥ, ಆಸ್ಪತ್ರೆ ಆಡಳಿತಾಧಿಕಾರಿ ಡಾ| ಸಲೀಮ್‌, ರೇವಣ ಸಿದ್ದಪ್ಪ, ಧಮೇಂದ್ರ ಸಿಂಗ್‌, ಚಂದ್ರಕಾಂತ್‌ ಕಾಮತ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next