Advertisement

Lokpal: ಕಾಯಿದೆ ರಚನೆಯಾಗಿ 10 ವರ್ಷ ಬಳಿಕ ತನಿಖಾ ವಿಭಾಗ ರಚಿಸಿದ ಲೋಕಪಾಲ್‌

09:32 PM Sep 11, 2024 | Team Udayavani |

ನವದೆಹಲಿ: ಕಾನೂನು ರಚನೆಯಾದ 10 ವರ್ಷದ ಬಳಿಕ ಲೋಕಪಾಲ್‌, ತನಿಖಾ ವಿಭಾಗವನ್ನು ಆರಂಭಿಸಿದೆ. ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳ ಪ್ರಾಥಮಿಕ ತನಿಖೆಗಾಗಿ ಈ ವಿಭಾಗವನ್ನು ಆರಂಭಿಸಲಾಗುತ್ತದೆ.

Advertisement

2013ರ ಲೋಕಪಾಲ್‌ ಮತ್ತು ಲೋಕಾಯುಕ್ತ ಕಾಯ್ದೆಗೆ 2014 ಜ.1ರಂದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. 2019 ಮಾ.27ರಂದು ಕಾಯ್ದೆ ಜಾರಿಯಾಗಿತ್ತು. ಕಾಯ್ದೆಯ ಸೆಕ್ಷನ್‌ 11ರ ಪ್ರಕಾರ ತನಿಖಾ ವಿಭಾಗ ಸ್ಥಾಪಿಸಬಹುದು. ಆ. 30ರಂದು ಲೋಕಪಾಲ್‌ನ ಪೂರ್ಣ ಪೀಠ ಸಭೆ ನಡೆಸಿ, ತನಿಖಾ ವಿಭಾಗವನ್ನು ಆರಂಭಿಸಲು ನಿರ್ಧರಿಸಲಾಯಿತು.

ಲೋಕಪಾಲ್‌ ಅಧ್ಯಕ್ಷ ನ್ಯಾ.ಎ.ಎಂ.ಖಾನ್ವಿಲ್ಕರ್‌ ಅವರಿಗೆ ಸೂಕ್ತ ಅಧಿಕಾರಿಗಳ ನೇಮಕದ ಅಧಿಕಾರವನ್ನು ನೀಡಲಾಗಿದೆ.

ಇದನ್ನೂ ಓದಿ: Kamala Harris: ಪುಟಿನ್‌ ನಿಮ್ಮನ್ನೇ ತಿಂದು ತೇಗುತ್ತಿದ್ದರು: ಟ್ರಂಪ್‌ಗೆ ಕಮಲಾ ತಿರುಗೇಟು!

Advertisement

Udayavani is now on Telegram. Click here to join our channel and stay updated with the latest news.

Next