Advertisement

ನಾಪತ್ತೆಯಾಗಿದ್ದ 10ರ ಬಾಲಕಿಯ ಅತ್ಯಾಚಾರಗೈದು ಹತ್ಯೆ

09:49 AM Nov 12, 2019 | Team Udayavani |

ಮುಂಬೈ: ಕಳೆದ ನವೆಂಬರ್ 5ರಂದು ನಾಪತ್ತೆಯಾಗಿದ್ದ 10 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಘಟನೆ ಮುಂಬೈನಲ್ಲಿ ನಡೆದಿದೆ.

Advertisement

ನಗರದ ವಿದ್ಯಾ ವಿಹಾರ್ ರೈಲ್ವೇ ನಿಲ್ದಾಣದ ಬಳಿ ನವೆಂಬರ್ 9ರಂದು ಮೃತದೇಹ ಪತ್ತೆಯಾಗಿತ್ತು. ಪೋಸ್ಟ್ ಮಾರ್ಟಮ್ ವರದಿಯಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ಖಚಿತವಾಗಿದ್ದು, ನರಳಾಟದಿಂದ ಬಾಲಕಿಯು ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.

ಮುಂಬೈ ಪೊಲೀಸರು ಓರ್ವ ಆರೋಪಿಯನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next