Advertisement

ಬ್ರಿಟನ್‌ನಲ್ಲಿ 10 ಸಾವಿರ ವೈದ್ಯರ ಮುಷ್ಕರ

11:51 PM Jul 13, 2023 | Team Udayavani |

ಲಂಡನ್‌: ಬ್ರಿಟನ್‌ನಲ್ಲಿ ಸರಕಾರಿ ಕಿರಿಯ ವೈದ್ಯರ ವೇತನವನ್ನು ಶೇ.35ರಷ್ಟು ಹೆಚ್ಚಿಸಬೇಕೆಂಬ ಕೂಗು ಕೇಳಿಬಂದಿದ್ದು, ಈ ಸಂಬಂಧಿಸಿದಂತೆ ಗುರುವಾರ ದೇಶದ ಸಾವಿರಾರು ವೈದ್ಯರು ರಾಜಧಾನಿ ಲಂಡನ್‌ನಲ್ಲಿ 5 ದಿನಗಳ ಮುಷ್ಕರ ಆರಂಭಿಸಿದ್ದಾರೆ.

Advertisement

ಬ್ರಿಟನ್‌ ಇತಿಹಾಸದಲ್ಲೇ ಇದು ದೀರ್ಘ‌ಕಾಲದ ವೈದ್ಯರ ಮುಷ್ಕರವಾಗುವ ಸಾಧ್ಯತೆಗಳಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವೈದ್ಯಕೀಯ ವೃತ್ತಿ ಜೀವನದಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವವರ ವೇತನ ಹೆಚ್ಚಳದ ಕೂಗು ಇದಾಗಿದೆ. ಕೊರೊನಾ ಬಳಿಕ ಕಿರಿಯ ಡಾಕ್ಟರ್‌ಗಳ ಮೇಲಿನ ಕೆಲಸದ ಹೊರೆ ಬಹಳಷ್ಟಾಗಿದೆ. 75 ಸಾವಿರ ಮಂದಿ ಕಿರಿಯ ಡಾಕ್ಟರ್‌ಗಳಿದ್ದು, ಹಣದುಬ್ಬರದಿಂದ ಪ್ರಸಕ್ತ ವೇತನ ಸಾಕಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶೇ.35ರಷ್ಟು ವೇತನ ಹೆಚ್ಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next