Advertisement
ಮುಖ್ಯಮಂತ್ರಿ ಗಳು ಬಾಗಿನ ಅರ್ಪಿಸಲು ಈಗಾಗಲೇ ಕಾವೇರಿ ನೀರಾವರಿ ಇಲಾಖೆಯಿಂದ ಸಿದ್ಧತೆ ಕಾರ್ಯಗಳು ನಡೆದಿದ್ದು, ಬಾಗಿನ ಕಾರ್ಯಕ್ಕೆ ದಿನಾಂಕ ನಿಗದಿ ಮಾಡುವ ಮುನ್ಸೂಚನೆಗಳಿವೆ.
Related Articles
Advertisement
ದಿನಾಂಕ ನಿಗದಿ ಮಾಡುವ ಕಾರ್ಯದಲ್ಲಿ ಅಧಿಕಾರಿಗಳು ಮುಂದಾಗಿದ್ದು, ತಡವಾಗಿಯಾದರೂ ಮುಖ್ಯಮಂತ್ರಿಗಳಿಂದ ಬಾಗಿನ ಪೂಜೆ ನಡೆಯಲಿದೆ. ಶನಿವಾರದ ಮಟ್ಟ 121.08 ಅಡಿ: ಇದೀಗ ಮತ್ತೇ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗಿ ನೀರಿನ ಮಟ್ಟ ಏರಿಕೆ ಕಂಡು ಬಂದಿದೆ. ಗರಿಷ್ಠ ಮಟ್ಟ ತಲುಪಲು 124.80 ಅಡಿಗಳಿದ್ದು, ಇಂದಿನ ಮಟ್ಟ 121.08 ಅಡಿಗಳು ತುಂಬಿದೆ.
ಜಲಾಶಯ ಒಟ್ಟು 49 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದುವರೆಗೆ ಕೊಡಗಿನಲ್ಲಿ ಹೆಚ್ಚು ಮಳೆ ಯಾಗಿದ್ದರಿಂದ ಜಲಾಶಯಕ್ಕೆ ಶನಿವಾರ ಬೆಳಗ್ಗೆ 10 ಸಾವಿರ ಕ್ಯುಸೆಕ್ ಹೆಚ್ಚು ನೀರು ಹರಿದು ಬರುತ್ತಿದ್ದು, 04 ಸಾವಿರ ಕ್ಯುಸೆಕ್ ನೀರನ್ನು ಕುಡಿಯಲು ಕಾವೇರಿ ನದಿಗೆ ಹಾಗೂ ಬೆಳೆ ಬೆಳೆಯಲು ನಾಲೆಗಳಿಗೆ ಮೂಲಕ ಹರಿಸಲಾಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 121.08 ಅಡಿ ನೀರಿನ ಮಟ್ಟ, 10,541 ಸಾವಿರ ಕ್ಯುಸೆಕ್ ಜಲಾಶಯಕ್ಕೆ ಒಳ ಹರಿವಾಗಿದ್ದು, 3,818 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇಲ್ಲಿವರೆಗೆ ಜಲಾಶಯದಲ್ಲಿ 45.322ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನು ಮೂರುವರೆ ಟಿಎಂಸಿ ನೀರು ಜಲಾಶಯಕ್ಕೆ ಬೇಕಿದ್ದು, ಈ ವಾರದಲ್ಲಿ ತುಂಬುವ ನಿರೀಕ್ಷೆಯಿದೆ.