Advertisement

ಪಾಸ್ ವರ್ಡ್ ಕ್ರಿಯೇಟ್ ಮಾಡುವಾಗ ಈ 10 ಅಂಶಗಳನ್ನು ನೀವು ಗಮನಿಸಲೇಬೇಕು !

06:09 PM Sep 22, 2020 | Mithun PG |

ಪಾಸ್ ವರ್ಡ್ ನೆನಪಿಟ್ಟುಕೊಳ್ಳುವುದು ಇಂದಿನ ಕಾಲಘಟ್ಟದಲ್ಲಿ ಸುಲಭ ಸಾಧ್ಯವಲ್ಲ. ಇತ್ತೀಚಿನ ದಿನಗಳಲ್ಲಿ ಹಲವಾರು ಆ್ಯಪ್ ಗಳು, ಡಿವೈಸ್, ಜಿಮೇಲ್ ಸೇರಿದಂತೆ ಇತರೆ ಫ್ಲ್ಯಾಟ್ ಪಾರ್ಮ್ ಗಳನ್ನು ನಿಯಮಿತವಾಗಿ ಬಳಸುವುದರಿಂದ ಎಲ್ಲದಕ್ಕೂ ಒಂದೊಂದು ಪಾಸ್ ವರ್ಡ್ ಅಳವಡಿಸಿರುತ್ತೇವೆ.

Advertisement

ಪ್ರತಿಯೊಬ್ಬರೂ ಕೂಡ ನೆನಪಿಟ್ಟುಕೊಳ್ಳಲು ಸುಲಭವಾದ ಪಾಸ್ ವರ್ಡ್ ಗಳನ್ನೇ ಸೆಟ್ ಮಾಡಿರುತ್ತಾರೆ. ಕೆಲವೊಮ್ಮೆ ಪಾಸ್ ವರ್ಡ್ Expiry ಸಮಯ ಬಂದಾಗ ಹಿಂದಿನ ಪಾಸ್ ವರ್ಡ್ ನ ಕೊನೆಯ ಅಕ್ಷರವನ್ನು ಮಾತ್ರ ಬದಲಿಸಿರುತ್ತೀರಿ. ಆದರೇ ಇದು ಒಳ್ಳೆಯ ಬೆಳವಣಿಗೆಯಲ್ಲ. ಮಾತ್ರವಲ್ಲದೆ ಅಪಾಯಕಾರಿಯೂ ಹೌದು.

ಅದಾಗ್ಯೂ ಹೊಸ ಪಾಸ್ ವರ್ಡ್ ಸೆಟ್ ಮಾಡುವಾಗ ನೆನಪಿಟ್ಟುಕೊಳ್ಳಬೇಕಾದ ಅಂಶಗಳು ಯಾವುದು ? ಎಂಬುದನ್ನು ತಿಳಿಯೋಣ.

* ವಿವಿಧ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಒಂದೇ ತೆರನಾದ ಪಾಸ್ ವರ್ಡ್ ಬಳಸಬೇಡಿ. ಒಂದೊಮ್ಮೆ ನಿಮ್ಮ ಯಾವುದೇ ಒಂದು ಖಾತೆ ಹ್ಯಾಕ್ ಆದರೂ ಕೂಡ, ಅವರು ನಿಮ್ಮ ಇತರೆ ಅಕೌಂಟ್ ಗಳಿಗೆ ಲಗ್ಗೆ ಇಡುತ್ತಾರೆ.

* ಪಾಸ್ ವರ್ಡ್ ನಲ್ಲಿ ಯಾವುದೇ ಕಾರಣಕ್ಕೂ ಹೆಸರನ್ನು ಬಳಸಲೇಬೇಡಿ. ಪ್ರಮುಖವಾಗಿ ನಿಮ್ಮ ಪೋಷಕರ ಹೆಸರು, ಒಡಹುಟ್ಟಿದವರು, ಸಾಕುಪ್ರಾಣಿಗಳ ಹೆಸರು, ಕಾರು ಗಳ ಬ್ರಾಂಡ್ ಹೆಸರು, ಇವೆಲ್ಲಾ ಬಹಳ ಸುಲಭವಾದ ಮತ್ತು ಪತ್ತೆಹಚ್ಚಲು ಸಾಧ್ಯವಾಗುವ ಪಾಸ್ ವರ್ಡ್ ಗಳು.

Advertisement

*  ಯಾವುದೇ ಕಾರಣಕ್ಕೂ ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನ ನಂಬರ್ ಹಾಗೂ ಮೊಬೈಲ್ ನಂಬರ್ ಕೂಡ ಪಾಸ್ ವರ್ಡ್ ಆಗಿ ಬಳಸಬೇಡಿ. ಮುಖ್ಯವಾಗಿ ಜನ್ಮದಿನಾಂಕಗಳು ಹಾಗೂ ವಾರ್ಷಿಕೋತ್ಸವದ ದಿನಾಂಕಗಳಿಂದ ಆದಷ್ಟೂ ದೂರ ಇರುವುದು ಒಳಿತು.

*  ಪಾಸ್ ಪೋರ್ಟ್ ನಂಬರ್, ಪಾನ್ ಕಾರ್ಡ್ ನಂಬರ್ ಮುಂತಾದವುಗಳ ಸೀರಿಯಲ್ ನಂಬರ್ ಗಳನ್ನು ಕೂಡ ಪಾಸ್ ವರ್ಡ್ ಆಗಿ ಬಳಸುವುದು ಅಪಾಯಕಾರಿ.

*  ಒಮ್ಮೆ ಬಳಸಿದ ಪಾಸ್ ವರ್ಡ್ ಗಳನ್ನು ಮತ್ತೊಮ್ಮೆ ಉಪಯೋಗಿಸಬೇಡಿ. ಹಲವು ಜಾಲತಾಣಗಳು ಒಮ್ಮೆ ಬಳಸಿದ ಪಾಸ್ ವರ್ಡ್ ಗಳನ್ನು ತೆಗೆದುಕೊಳ್ಳುವುದಿಲ್ಲವಾದರೂ, ಇವುಗಳ ಬಳಕೆಯನ್ನು ನಿಲ್ಲಿಸಿ. ಯಾಕೆಂದರೇ ಹ್ಯಾಕರ್ ಗಳು ಡೇಟಾ ಬೇಸ್ ಲೀಕ್ ಮಾಡುವ ಸಂದರ್ಭದಲ್ಲಿ ಡಾರ್ಕ ವೆಬ್ ನಲ್ಲಿ ಹಳೆಯ ಪಾಸ್ ವರ್ಡ್ ಗಳನ್ನು ಕೂಡ ಹಂಚಿರುತ್ತಾರೆ.

 

*  ಆನ್ ಲೈನ್ ಗಳಲ್ಲಿ ನಿಮ್ಮ ಪಾಸ್ ವರ್ಡ್ ಅನ್ನು ಸೇವ್ ಮಾಡಬೇಡಿ. ಮುಖ್ಯವಾಗಿ ಇಮೇಲ್ ಡ್ರಾಫ್ಟ್ ನಲ್ಲಿ ಕೂಡ. ಪಾಸ್ ವರ್ಡ್ ಗಳನ್ನು ಎಲ್ಲಾದರೂ ಬರೆದಿಟ್ಟುಕೊಳ್ಳುವುದು ಸೂಕ್ತ. ಇಂಟರ್ ನೆಟ್ ಕನೆಕ್ಟ್ ಆಗಿರುವ ಯಾವುದೇ ಆ್ಯಪ್ ನಲ್ಲಿ ಪಾಸ್ ವರ್ಡ್ ಬರೆದಿಡುವುದು ಸೂಕ್ತವಲ್ಲ.

*  ಗೂಗಲ್ ನಂತಹ ಬ್ರೌಸರ್ ನಲ್ಲಿ ಪಾಸ್ ವರ್ಡ್ ಸೇವ್ ಆಯ್ಕೆ ಇರುವುದನ್ನು ಗಮನಿಸಿರಬಹುದು. ಈ ಫೀಚರ್ ಬಹಳ ಉಪಯೋಗಕಾರಿ. ಅದಾಗ್ಯೂ ಇದನ್ನು ಬಳಸದಿರುವುದು ಉತ್ತಮ. ಯಾಕೆಂದರೇ ನಿಮಗೆ ತಿಳಿಯದೇ ಯಾವುದೇ ಥರ್ಡ್ ಪಾರ್ಟಿ ವೆಬ್ ಸೈಟ್ ಗಳೀಗೆ ಪ್ರವೇಶಿಸಿದರೇ ಅವು ನಿಮ್ಮೆಲ್ಲಾ ಪಾಸ್ ವರ್ಡ್ ಗಳನ್ನು ಕಸಿದುಕೊಳ್ಳುವುದು ಖಂಡಿತಾ.

*  two-factor authentication ಆಯ್ಕೆಯಿದ್ದಲ್ಲಿ ಹೆಚ್ಚಾಗಿ ಬಳಸುವುದು ಉತ್ತಮ.

*  ಪ್ರತಿ 5 ತಿಂಗಳಿಗೊಮ್ಮೆ ಪಾಸ್ ವರ್ಡ್ ಬದಲಾಯಿಸುವುದು ಒಳ್ಳೆಯ ಹವ್ಯಾಸ. ಇದು ತುಂಬಾ ಕಷ್ಟಕರವಾದರೂ, ಎಲ್ಲಾ ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳುವುವುದು ಸೂಕ್ತವಲ್ಲವೇ?

*   ಮುಖ್ಯವಾಗಿ ಪಾಸ್ ವರ್ಡ್ ಸೆಟ್ ಮಾಡುವಾಗ ವರ್ಡ್, ಸಿಂಬಲ್ಸ್ ಮುಂತಾದವನ್ನು ಬಳಸಿಕೊಂಡು ಕನಿಷ್ಟ 10-15 ಪದಗಳಿರುವಂತೆ ನೋಡಿಕೊಳ್ಳಿ. ಉದಾ: “E7r9t8@Q#h%Hy+M”.

Advertisement

Udayavani is now on Telegram. Click here to join our channel and stay updated with the latest news.

Next