Advertisement
6ರಂದು ವಿಚಾರಣೆ:ಬಿಹಾರ ಸರ್ಕಾರ ಅ.2ರಂದು ಜಾತಿ ಗಣತಿ ವರದಿ ಪ್ರಕಟಿಸಲು ಪಾಟ್ನಾ ಹೈಕೋರ್ಟ್ ಅ.1ರಂದು ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿದೆ. ನ್ಯಾ.ಸಂಜೀವ್ ಖನ್ನಾ ಮತ್ತು ನ್ಯಾ.ಎಸ್.ವಿ.ಎನ್.ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠ ಸದರಿ ಅರ್ಜಿಯನ್ನು ಅ.6ರಂದು ವಿಚಾರಣೆ ನಡೆಸುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ತಿಳಿಸಿದೆ.
ಬಿಹಾರ ಸರ್ಕಾರ ನಡೆಸಿದ ಜಾತಿ ಗಣತಿ ವರದಿಯನ್ನು ಎಲ್‌ಜೆಪಿ (ರಾಂ ವಿಲಾಸ್) ಬಣದ ನಾಯಕ ಚಿರಾಗ್ ಪಾಸ್ವಾನ್ ತಿರಸ್ಕರಿಸಿದ್ದಾರೆ. ಇದೊಂದು ರಾಜಕೀಯ ಕುತಂತ್ರದಿಂದ ಕೂಡಿದ ವರದಿ ಎಂದು ಅವರು ಟೀಕಿಸಿದ್ದಾರೆ. ಅದರಲ್ಲಿ ಇರುವ ಸಾಂಖೀಕ ಮಾಹಿತಿಗಳು ಕೇವಲ ಒಂದು ಜಾತಿಯ ಅನುಕೂಲಕ್ಕಾಗಿ ಮಾಡಿದಂತೆ ಇದೆ ಎಂದು ಹೇಳಿದ್ದಾರೆ. ಉ.ಪ್ರ.ದಲ್ಲೂ ಒತ್ತಾಯ:
ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಆಗುತ್ತಿದ್ದಂತೆಯೇ ಉತ್ತರ ಪ್ರದೇಶದಲ್ಲಿಯೂ ಜಾತಿ ಗಣತಿ ನಡೆಸಬೇಕು ಎಂಬ ಒತ್ತಾಯ ಜೋರಾಗಿದೆ. ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್, ಬಿಜೆಪಿಯ ಮಿತ್ರ ಪಕ್ಷ ಅಪ್ನಾದಳ (ಸೋನೆಲಾಲ್) ಈ ಒತ್ತಾಯ ಮಾಡಿವೆ. ಒಬಿಸಿಗೆ ನ್ಯಾಯ ಒದಗಿಸಲು ಇದುವೇ ಅತ್ಯುತ್ತಮ ಮಾರ್ಗ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
Related Articles
ಬಿಜೆಪಿ ರಾಜಕೀಯ ಬಿಟ್ಟು ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸಬೇಕು ಎಂದು ಒತ್ತಾಯಿಸಿರುವ ಎಸ್‌ಪಿ ಅಧ್ಯಕ್ಷ ಅಖೀಲೇಶ್ ಯಾದವ್, “ಪಿಡಿಎ’ ಪಿಚಾx (ಹಿಂದುಳಿದ ವರ್ಗ), ದಲಿತ (ತುಳಿತಕ್ಕೆ ಒಳಗಾದ), ಅಲ್ಪಸಂಖ್ಯಾತ ಎಂಬ ಹೊಸ ಪದಪುಂಜವನ್ನೂ ಅವರು ಸೃಷ್ಟಿಸಿದ್ದಾರೆ.
Advertisement
ರಾಹುಲ್ ಸಲಹೆಗೆ ಅಭಿಷೇಕ್ ಅತೃಪ್ತಿಜನರ ಸಂಖ್ಯೆಯ ಆಧಾರದಲ್ಲಿ ಮೀಸಲು ನೀಡಬೇಕು ಎಂಬ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಲಹೆಗೆ ಅವರ ಪಕ್ಷದಿಂದಲೇ ಅತೃಪ್ತಿ ವ್ಯಕ್ತವಾಗಿದೆ. ಹಿರಿಯ ನ್ಯಾಯವಾದಿ, ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿ “ಇಂಥ ಕ್ರಮಗಳಿಂದ ಋಣಾತ್ಮಕ ಸಂದೇಶ ರವಾನೆಯಾದೀತು. ಸಮಾನ ರೀತಿಯಲ್ಲಿ ಅವಕಾಶ ಎನ್ನುವುದು ಸರಿಯಾದರೂ ಕೂಡ ಅದರ ಫಲಿತಾಂಶ ಸಮಾನವಾಗಿ ಇರುವುದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಅವಕಾಶ ನೀಡಬೇಕು ಎಂದು ವಾದಿಸುವವರು ಅಂತಿಮವಾಗಿ ಅದರಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಗಮನಿಸಬೇಕು. ಅಂತಿಮವಾಗಿ ಅದು ಹೆಚ್ಚು ಜನರು ಒಲವು ಹೊಂದಿರುವವರ ಪರ ನಿರ್ಣಯವಾದೀತು’ ಎಂದು ಎಚ್ಚರಿಕೆ ನೀಡಿದ್ದಾರೆ.