Advertisement

ED Raids: ಯಾವುದೇ ಕ್ಷಣದಲ್ಲೂ ನನ್ನ ಬಂಧನವಾಗಬಹುದು… ಆಪ್ ನಾಯಕ ಅಮಾನತುಲ್ಲಾ ಖಾನ್

09:39 AM Sep 02, 2024 | Team Udayavani |

ನವದೆಹಲಿ: ಬೆಳ್ಳಂಬೆಳಗ್ಗೆ ನನ್ನನ್ನು ಬಂಧಿಸಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನ್ನ ಮನೆಗೆ ಬಂದಿರುವುದಾಗಿ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರು ಹೇಳಿಕೊಂಡಿದ್ದಾರೆ.

Advertisement

ಈ ಕುರಿತು ಸ್ವತಃ ಅವರೇ X ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದು, ಸೋಮವಾರ (ಸಪ್ಟೆಂಬರ್ 2) ಬೆಳಿಗ್ಗೆ ತನ್ನ ಮನೆಗೆ ಇಡಿ ಅಧಿಕಾರಿಗಳು ಬಂದಿದ್ದು ಮನೆಯಲ್ಲಿದ್ದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಯಾವುದೇ ಕ್ಷಣದಲ್ಲೂ ನನ್ನನ್ನು ಬಂಧಿಸಬಹುದು ಎಂದು ಬರೆದುಕೊಂಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ತಂಡ ಓಖ್ಲಾದಲ್ಲಿರುವ ತನ್ನ ಮನೆಗೆ ಬಂದಿದ್ದು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಅಮಾನತುಲ್ಲಾ ಖಾನ್ ಅವರು ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಕ್ರಮ ನೇಮಕಾತಿ ಮತ್ತು ಹಣಕಾಸಿನ ಅವ್ಯವಹಾರದ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ ಎನ್ನಲಾಗಿದೆ.

ಇಡಿ ಅಧಿಕಾರಿಗಳು ದಾಳಿ ನಡೆಸುವ ಹಿನ್ನೆಲೆಯಲ್ಲಿ ಅಮಾನತುಲ್ಲಾ ಖಾನ್ ಮನೆಯ ಸುತ್ತ ದೆಹಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳ ದೊಡ್ಡ ತುಕಡಿಯನ್ನು ನಿಯೋಜಿಸಲಾಗಿದೆ. ಈ ಕುರಿತು ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

Advertisement

ಇನ್ನೊಂದು ಪೋಸ್ಟ್ ನಲ್ಲಿ, ಸೋಮವಾರ ಮುಂಜಾನೆಯೇ, ಸರ್ವಾಧಿಕಾರಿಯ ಆಜ್ಞೆಯ ಮೇರೆಗೆ, ಆತನ ಕೈಗೊಂಬೆಯಾಗಿರುವ ಇಡಿ ಅಧಿಕಾರಿಗಳು ನನ್ನ ಮನೆಗೆ ತಲುಪಿದ್ದಾರೆ, ನನ್ನ ಹಾಗೂ ಆಪ್ ನಾಯಕರಿಗೆ ಕಿರುಕುಳ ನೀಡಲು ಸರ್ವಾಧಿಕಾರಿ ಯಾವುದೇ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ, ಇಲ್ಲಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದು ಅಪರಾಧವೇ? ಅಷ್ಟಕ್ಕೂ ಈ ಸರ್ವಾಧಿಕಾರ ಎಷ್ಟು ಕಾಲ ಉಳಿಯುತ್ತದೆ? ಎಂದು ಖಾನ್ ಪೋಸ್ಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next