ವಿಜಯಪುರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಎದುರು ಇರುವ ಮರಗಳಲ್ಲಿರುವ ಹೆಜ್ಜೆನುಗಳು ಅಂಕತಟ್ಟಿ ನಂಜುಂಡಪ್ಪ ಸರ್ಕಲ್‌ನಲ್ಲಿ ಅನೇಕರಿಗೆ ಕಚ್ಚಿದ ಪರಿಣಾಮ 10ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಪಟ್ಟಣದ ದೇವನಹಳ್ಳಿ ಮುಖ್ಯರಸ್ತೆಯ ಉದ್ದಕ್ಕೂ ಹಾಗೂ ಆಟದ ಮೈದಾನ, ಜನಸಂದಣಿಯಿರುವ ಪ್ರಮುಖ ಸರ್ಕಲ್ ಕಡೆ ಹೆಜ್ಜೆàನುಗಳು ಹರಡಿಕೊಂಡು ಕಚ್ಚಲು ಆರಂಭಿಸುತ್ತಿದ್ದಂತೆಯೇ ಜನರು ದಿಕ್ಕಾಪಾಲಗಿ ಓಡಲು ಆರಂಭಿಸಿದರು. ಅಂಗಡಿಗಳ ಬಾಗಿಲುಗಳನ್ನು ತಕ್ಷಣ ಎಳೆದುಕೊಂಡು ಕೆಲವರು ಒಳ ಸೇರಿಕೊಂಡರು.
ವಾಕಿಂಗ್ ಹೋಗಿ ಬರುತ್ತಿದ್ದ ಇಬ್ಬರು ವೃದ್ಧ ದಂಪತಿ ಮೇಲೆ ಜೇನುಗಳು ದಾಳಿ ಮಾಡಿದ ಪರಿಣಾಮ ಅವರು ಗಾಯಗೊಂಡಿದ್ದಾರೆ. ಬೀದಿ ವ್ಯಾಪಾರಿಗಳು ತಳ್ಳವ ಗಾಡಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡುವಂತಾಯಿತು. ಗಾಯಗೊಂಡವರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಜೇನುಹುಳುಗಳ ಕಾಟ ದಿಂದಾಗಿ ಓರ್ವ ಯುವಕ ಸಾವನ್ನಪ್ಪಿದ್ದಲ್ಲದೇ ಏಳೆಂಟು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ:ಮೆಟ್ರೋಲೈಟ್- ಮೆಟ್ರೋನಿಯೋ ಸೇವೆ
ಆ ಘಟನೆ ಮರೆಯುವಷ್ಟರಲ್ಲಿಯೇ ಮತ್ತೂಮ್ಮೆ ಇಂತಹ ಘಟನೆ ನಡೆದಿರುವುದು ಪಟ್ಟಣದ ಜನತೆಯನ್ನು ಭಯಬೀಳಿಸಿದೆ.ಹೆಜ್ಜೆನುಗಳು ಹೆಚ್ಚು ವಿಷಕಾರಿಯಾಗಿರು ವುದರಿಂದ ಜೀವಕ್ಕೆ ಅಪಾಯಕಾರಿಯಾಗಿವೆ. ಕೂಡಲೇ ಈ ಪ್ರದೇಶದಲ್ಲಿನ ಮರಳಗಳಿÉರುವ ಜೇನುಹುಳುಗಳ ಗೂಡುಗಳನ್ನು ತೆರವು ಗೊಳಿಸಬೇಕು ಎಂದು ಪಟ್ಟಣ ನಿವಾಸಿ ಹಾರ್ಡಿಪುರ ಜಯರಾಂ ಆಗ್ರಹಿಸಿದ್ದಾರೆ.