Advertisement

ದಾವಣಗೆರೆ: ಕೋವಿಡ್ 19 ಸೋಂಕಿಗೆ ಒಂದೇ ದಿನ 10 ಬಲಿ

07:53 PM Sep 04, 2020 | Hari Prasad |

ದಾವಣಗೆರೆ: ಕೋವಿಡ್ 19 ಸೊಂಕಿಗೆ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ‌ ಹತ್ತು ಜನರು ಬಲಿಯಾಗಿದ್ದಾರೆ.

Advertisement

ಮಹಾಮಾರಿ ಕೋವಿಡ್ 19ನಿಂದ ಇದೇ ಮೊದಲ ಬಾರಿಗೆ ಹತ್ತು ಜನರು ಮೃತಪಟ್ಟಿರುವುದು ಜಿಲ್ಲೆಯಲ್ಲಿ ಈವರೆಗಿನ ದಾಖಲೆಯಾಗಿದ್ದು ಕಳವಳ ಮೂಡಿಸಿದೆ.

ಒಂದೇ ದಿನ ಹತ್ತು ಜನರ ಸಾವಿನಿಂದ ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ 19 ಸೋಂಕಿಗೆ ಬಲಿಯಾದವರ ಸಂಖ್ಯೆ ಇನ್ನೂರರ ಗಡಿ ದಾಟಿದ್ದು ಒಟ್ಟು 206 ಜನರು ಮೃತಪಟ್ಟಿದ್ದಾರೆ.

ಕೋವಿಡ್ 19 ಸೋಂಕಿನ ಜೊತೆಗೆ ಉಸಿರಾಟದ ತೊಂದರೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 72 ವರ್ಷದ ವೃದ್ಧೆ (ರೋಗಿ ನಂಬರ್ 303811), 66 ವರ್ಷದ ವೃದ್ಧ (ರೋಗಿ ನಂಬರ್ 310667), 45 ವರ್ಷದ ವ್ಯಕ್ತಿ (ರೋಗಿ ನಂಬರ್ 311197), 62 ವರ್ಷದ ವೃದ್ಧೆ (ರೋಗಿ ನಂಬರ್ 320533), 43 ವರ್ಷದ ವ್ಯಕ್ತಿ (ರೋಗಿ ನಂಬರ್ 329486), 62 ವರ್ಷದ ವೃದ್ಧ (ರೋಗಿ ನಂಬರ್ 343337), 43 ವರ್ಷದ ಮಹಿಳೆ (ರೋಗಿ ನಂಬರ್ 368020), 70 ವರ್ಷದ ವೃದ್ಧೆ (ರೋಗಿ ನಂಬರ್ 371137),75 ವರ್ಷದ ವೃದ್ಧ (ರೋಗಿ ನಂಬರ್ 371723), 46 ವರ್ಷದ ಮಹಿಳೆ (ರೋಗಿ ನಂಬರ್ 371724) ಮೃತಪಟ್ಟವರು. ಶುಕ್ರವಾರ 263 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಕೋವಿಡ್ 19 ಸೋಂಕಿನಿಂದ ಗುಣಮುಖರಾದ 125 ಜನರು ಬಿಡುಗಡೆ ಆಗಿದ್ದಾರೆ. ‌ಜಿಲ್ಲೆಯಲ್ಲಿ ಒಟ್ಟು 10582 ಪ್ರಕರಣಗಳಲ್ಲಿ 7748 ಜನರು ಬಿಡುಗಡೆಯಾಗಿದ್ದಾರೆ. 2628 ಸಕ್ರಿಯ ಪ್ರಕರಣಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next