Advertisement

ಮಾರಣಹೋಮ:ತನ್ನದೇ ಕುಟುಂಬದ 10 ಮಂದಿಯನ್ನು ಕೊಂದು ವ್ಯಕ್ತಿ ಆತ್ಮಹತ್ಯೆ

04:39 PM Jan 04, 2017 | |

ಅಮೇಠಿ : ವ್ಯಕ್ತಿಯೊಬ್ಬ ತನ್ನದೇ ಕುಟುಂಬದ 10 ಮಂದಿ ಸದಸ್ಯರನ್ನು ಬರ್ಬರವಾಗಿ ಹತ್ಯೆಗೈದು ಬಳಿಕ ತಾನೂ ನೇಣಿಗೆ ಶರಣಾದ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

Advertisement

ಮಹ್‌ನೋವಾ ಎಂಬಲ್ಲಿ  45 ವರ್ಷ ಪ್ರಾಯದ ಜಮಾಲು ಎಂಬಾತ ತನ್ನ ಕುಟುಂಬದ 12 ಸದಸ್ಯರಿಗೆ ಆಹಾರದಲ್ಲಿ ಕೀಟ ನಾಶಕ ಬೆರೆಸಿ ನೀಡಿ ಬಳಿಕ ಬರ್ಬರವಾಗಿ ಕೊಚ್ಚಿ ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಕೀಟ ನಾಶಕ ಸೇವಿಸಿದವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. 

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದು, ಭೀಕರ ಕೃತ್ಯ ನಡೆಸಲು ಕಾರಣವೇನೆಂದು ಇನ್ನಷ್ಟೆ  ತಿಳಿದು ಬರಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next