Advertisement

ಎನ್‌ಸಿಪಿಯ 10 ಶಾಸಕರು ವಿಬಿಎ ಸಂಪರ್ಕದಲ್ಲಿ: ಅಂಬೇಡ್ಕರ್‌

12:04 PM Jun 05, 2019 | Vishnu Das |

ಅಕೋಲಾ: ಮಹಾರಾಷ್ಟ್ರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ(ಎನ್‌ಸಿಪಿ) ಕನಿಷ್ಠ 10 ಶಾಸಕರು ತನ್ನ ವಂಚಿತ ಬಹುಜನ ಆಘಾಡಿ (ವಿಬಿಎ) ಸಂಘಟನೆಯ ಸಂಪರ್ಕದಲ್ಲಿದ್ದಾರೆ ಎಂದು ದಲಿತ ನಾಯಕ ಪ್ರಕಾಶ್‌ ಅಂಬೇಡ್ಕರ್‌ ಮಂಗಳವಾರ ಹೇಳಿದ್ದಾರೆ.

Advertisement

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರಿಪ ಬಹುಜನ ಮಹಾಸಂಘ ನಾಯಕ ಅಂಬೇಡ್ಕರ್‌ ಅವರು, ವಂಚಿತ ಬಹುಹನ ಆಘಾಡಿಯ ಸಾಮಾಜಿಕ ತಂತ್ರಗಾರಿಕೆಯು ಕೇವಲ ಔರಂಗಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ ಮಾಡಿರು ವುದನ್ನು ಕೂಡ ಒಪ್ಪಿಕೊಂಡರು. ಔರಂಗಾಬಾದ್‌ನಲ್ಲಿ ಎಐಎಂಐಎಂನ ಇಮಿ¤ಯಾಜ್‌ ಜಲೀಲ್‌ ಅವರು ಶಿವಸೇನೆಯ ವರಿಷ್ಠ ನಾಯಕ ಚಂದ್ರಕಾಂತ್‌ ಖೈರೆ ಅವರನ್ನು ಸೋಲಿಸಿದ್ದಾರೆ. ಸಾರ್ವತ್ರಿಕ ಚುನಾವಣೆಗೆ ಮೊದಲು ಸ್ಥಾಪಿಸಲ್ಪಟ್ಟ ವಿಬಿಎ ಅಸಾದುದ್ದೀನ್‌ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷವನ್ನು ಒಳಗೊಂಡಿದೆ.

ವಿಬಿಎ ಮಹಾರಾಷ್ಟ್ರದಲ್ಲಿ ಸಾಮಾಜಿಕ ತಂತ್ರಗಾರಿಕೆಯ ಪ್ರಯೋಗ ಮಾಡಿತ್ತು, ಆದರೆ ಅದು ಔರಂಗಾಬಾದ್‌ನಲ್ಲಿ ಮಾತ್ರ ಕೆಲಸ ಮಾಡಿರುವಂತೆ ಕಾಣುತ್ತಿದೆ ಎಂದು ಅಂಬೇಡ್ಕರ್‌ ನುಡಿದಿದ್ದಾರೆ. ಔರಂಗಾಬಾದ್‌ನ ಚುನಾವಣಾ ಫಲಿತಾಂಶವನ್ನು ಉÇÉೇಖೀಸಿ ಮಾತನಾಡಿದ ಅಂಬೇಡ್ಕರ್‌ ಅವರು, ವಿಬಿಎ ಕಾಂಗ್ರೆಸ್‌ಗೆ ಕಾರ್ಯಸಾಧ್ಯವಾದ ಪರ್ಯಾಯವಾಗಿದ್ದು, ಅದಕ್ಕಾಗಿ ಮುಸ್ಲಿಮರು ವಿಬಿಎ ಕಡೆಗೆ ಮುಖ ಮಾಡಲು ಪ್ರಾರಂಭಿಸಿದ್ದಾರೆ ಎಂದರು. ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಯ ಕನಿಷ್ಠ 10 ಶಾಸಕರು ಮಹಾರಾಷ್ಟ್ರದ ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ವಿಬಿಎಯೊಂದಿಗೆ ಸಂಪರ್ಕ ಹೊಂದಿ¨ªಾರೆ ಎಂದರು. ಈ ಸಂಬಂಧ ವಿವರಣೆ ನೀಡಲು ನಿರಾಕರಿಸಿದ ಅವರು, ಜೂನ್‌ 7 ರಂದು ಆ ಬಗ್ಗೆ ಹೆಚ್ಚುವರಿ ಮಾತುಗಳನ್ನಾಡುವುದಾಗಿ ತಿಳಿಸಿದ್ದಾರೆ. ಈ ವರ್ಷದ ಸೆಪ್ಟಂಬರ್‌-ಅಕ್ಟೋಬರ್‌ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವಿಬಿಎ ಎಲ್ಲ 288 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಲೋಕಸಭಾ ಚುನಾವಣೆಯಂತೆ ವಿಧಾನಸಭೆ ಚುನಾವಣೆಯಲ್ಲೂ ವಿಬಿಎ ಪ್ರಮುಖ ಪಾತ್ರವಹಿಸಲಿದೆ ಎಂದವರು ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವಿಬಿಎ ಮಹಾರಾಷ್ಟ್ರದ ಎಲ್ಲ 48 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next