ವೆಲೆನ್ಸಿಯಾ: ಉಗಾಂಡದ ಓಟಗಾರ ಜೋಶುವ ಚೆಪ್ಟೆಗಿ 10 ಕಿ.ಮೀ. ರಸ್ತೆ ಓಟದಲ್ಲಿ ನೂತನ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ರವಿವಾರದ ಸ್ಪರ್ಧೆಯಲ್ಲಿ ಅವರು ಕೀನ್ಯದ ಲಿಯೋನಾರ್ಡ್ ಕೊಮನ್ ದಾಖಲೆಯನ್ನು 6 ಸೆಕೆಂಡ್‌ಗಳಿಂದ ಉತ್ತಮಪಡಿಸಿದರು.
10 ಸಾವಿರ ಮೀ. ಓಟದ ವಿಶ್ವ ಚಾಂಪಿಯನ್, ಐಎಎಎಫ್ ವರ್ಲ್ಡ್
ಕ್ರಾಸ್ ಚಾಂಪಿಯನ್‌ಶಿಪ್ ವಿಜೇತನೂ ಆಗಿರುವ ಜೋಶುವ, ವೆಲೆನ್ಸಿಯದಲ್ಲಿ ನಡೆದ 10 ಕಿ.ಮೀ. ರಸ್ತೆ ಓಟವನ್ನು 26 ನಿಮಿಷ, 38 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿ ವಿಶ್ವದಾಖಲೆ ಬರೆದರು. ಲಿಯೋ ನಾರ್ಡ್ ಕೊಮನ್ 2010ರಲ್ಲಿ ಸ್ಥಾಪಿಸಿದ 26 ನಿಮಿಷ, 44 ಸೆಕೆಂಡ್‌ಗಳ ದಾಖಲೆ ಪತನ ಗೊಂಡಿತು.
“ನನ್ನ ಪಾಲಿಗೆ ಇದೊಂದು ಸ್ಮರಣೀಯ ವರ್ಷ. ವೆಲೆನ್ಸಿಯ ವಿಶ್ವದ ಅತ್ಯಂತ ಫಾಸ್ಟ್ ಟ್ರ್ಯಾಕ್‌ಗಳಲ್ಲೊಂದು ಎಂಬ ಅರಿವಿತ್ತು. ಹೀಗಾಗಿ ವಿಶ್ವದಾಖಲೆ ಸಾಧ್ಯ ವಾಯಿತು’ ಎಂದು 23ರ ಹರೆ ಯದ ಜೋಶುವ ಸಾಧನೆಯ ಬಳಿಕ ಪ್ರತಿಕ್ರಿಯಿಸಿದ್ದಾರೆ.
ಜೋಶುವ 13 ನಿಮಿಷ, 23 ಸೆಕೆಂಡ್‌ಗಳಲ್ಲಿ ಅರ್ಧ ಹಾದಿ ಕ್ರಮಿಸಿದರು. 8 ಕಿ.ಮೀ. ದೂರ ವನ್ನು 21 ನಿಮಿಷ, 37 ಸೆಕೆಂಡ್‌ಗಳಲ್ಲಿ ಪೂರೈಸಿದರು. ಕೊನೆಯ ಒಂದು ಕಿ.ಮೀ. ದೂರವನ್ನು ಕೇವಲ 2 ನಿಮಿಷ, 45 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿ ವಿಶ್ವದಾಖಲೆಯ ಒಡೆಯನೆನಿಸಿದರು.