Advertisement

ಆತ್ಮಹತ್ಯಾ ದಾಳಿಗೆ 10 ಮಂದಿ ಸಾವು

06:13 AM May 09, 2019 | mahesh |
ಲಾಹೋರ್‌: ಶ್ರೀಲಂಕಾದಲ್ಲಿನ ಸರಣಿ ಸ್ಫೋಟದ ಕಹಿ ನೆನಪು ಇರುವಂತೆಯೇ ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯದಲ್ಲಿ ಸೂಫಿ ಸಮುದಾಯಕ್ಕೆ ಸೇರಿದ ಧಾರ್ಮಿಕ ಕೇಂದ್ರದ ಮೇಲೆ ಆತ್ಮಹತ್ಯಾ ದಾಳಿ ನಡೆಸಲಾಗಿದೆ. ಈ ದುರ್ಘ‌ಟನೆಯಲ್ಲಿ ಐವರು ಪೊಲೀಸ್‌ ಸಿಬಂದಿ ಸೇರಿ 10 ಮಂದಿ ಅಸುನೀಗಿ, 25 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಕಾಲಮಾನ ಬೆಳಗ್ಗೆ 8.45ಕ್ಕೆ ದಾತಾ ದರ್ಬಾರ್‌ ಎಂಬ ಧಾರ್ಮಿಕ ಕೇಂದ್ರದ ಗೇಟ್ ನಂ.2ರಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ನಾಲ್ವರು ಪೊಲೀಸರ ಸ್ಥಿತಿ ಗಂಭೀರವಾಗಿದೆ. ಪಂಜಾಬ್‌ ಪ್ರಾಂತ್ಯದ ಐಜಿಪಿ ಆರಿಫ್ ನವಾಜ್‌ ಮಾತನಾಡಿ ಆತ್ಮಹತ್ಯಾ ಬಾಂಬರ್‌ 7 ಕೆಜಿ ಸ್ಫೋಟಕಗಳೊಂದಿಗೆ ಕೃತ್ಯವೆಸಗಿದ್ದಾನೆ. ಆತನ ಗುರಿ ಧಾರ್ಮಿಕ ಕೇಂದ್ರ ಹೊರಗೆ ಭದ್ರತೆಗಾಗಿ ನಿಲ್ಲಿಸಿದ್ದ ಪಡೆಯ ವಾಹನವಾಗಿತ್ತು. ವಾಹನದ ಸಮೀಪಕ್ಕೆ ಬಂದ ಕೂಡಲೇ ತನ್ನನ್ನು ಸ್ಫೋಟಿಸಿಕೊಂಡ. ಪರಿಣಾಮವಾಗಿ ಸ್ಥಳದಲ್ಲಿಯೇ ಐವರು ಸಾವನ್ನಪ್ಪಿದರು. ಐವರು ಗಾಯಗೊಂಡರು ಎಂದಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next