Advertisement

ಟ್ರಕ್ ಗಳ ನಡುವೆ ಭೀಕರ ಅಪಘಾತ: 11 ಮಂದಿ ದಾರುಣ ಸಾವು, 17 ಜನರಿಗೆ ಗಂಭೀರ ಗಾಯ

10:17 AM Nov 18, 2020 | Mithun PG |

ಗುಜರಾತ್: ಎರಡು ಟ್ರಕ್ ಗಳ ನಡುವೆ ಮುಖಾಮುಖಿ ಢಿಕ್ಕಿ  ಸಂಭವಿಸಿ, 11 ಮಂದಿ ಮೃತಪಟ್ಟು, 17 ಜನ ಗಾಯಗೊಂಡ ದಾರುಣ ಘಟನೆ ವಡೋದರದಲ್ಲಿ ನಡೆದಿದೆ.

Advertisement

ಟ್ರಕ್ ನಲ್ಲಿದ್ದ ಪ್ರಯಣಿಕರೆಲ್ಲಾ ಸೂರತ್ ನಿಂದ ಪಾವಗಢದ ಕಡೆಗೆ ಪ್ರಯಾಣಿಸುತ್ತಿದ್ದರು. ಗಾಯಗೊಂಡವರನ್ನು ವಡೋದರದ ಎಸ್ ಎಸ್ ಜಿ ಹಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಬುಧವಾರ ಮುಂಜಾನೆ (18-11-2020) ವಡೋದರ ಹೈವೇ ರಸ್ತೆಯ ವಾಘೋಡಿಯಾ ಕ್ರಾಸಿಂಗ್ ಬಳಿ ಎರಡು ಟ್ರಕ್ ಗಳ  ಮುಖಾಮುಖಿ ಢಿಕ್ಕಿಯಾಗಿವೆ. ಈ ಭೀಕರ ಅವಘಡದಲ್ಲಿ 11 ಮಂದಿ ಪ್ರಾಣತ್ಯೆಜಿಸಿದ್ದಾರೆ.

ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ತಡವಾಗಿ ಆಗಮಿಸಿ, ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಸಬ್ ಇನ್ಸ್‌ಪೆಕ್ಟರ್

 

Advertisement

ದುರ್ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಇದೊಂದು ಮನಕಲಕುವ ಘಟನೆ, ರಸ್ತೆ ಅಪಘಾತದಿಂದ ಹಲವು ಜೀವಗಳು ಬಲಿಯಾಗಿದೆ. ಈಗಾಗಲೇ ಅಧಿಕಾರಿಗಳಿಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಲಾಗಿದೆ, ಗಾಯಗೊಂಡವರು ಶೀಘ್ರ ಚೇತರಿಕೆ ಕಾಣಲಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಯಕ್ಷಗಾನ ಕಲಾವಿದ, ಮಂದಾರ್ತಿ ಮೇಳದ ಜನಪ್ರಿಯ ಸ್ತ್ರೀ ವೇಷಧಾರಿ ಕೆರೆಗೆ ಬಿದ್ದು ಸಾವು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next