Advertisement
ರಾಣಿ ಲಕ್ಷ್ಮೀಬಾಯಿ:
Related Articles
Advertisement
ಬೇಗಂ ಹಝರತ್ ಮಹಲ್:
1857ರ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಬೇಗಂ ಹಝರತ್ ಬೇಗಂ ಮಹಲ್ ಅವರ ಹೋರಾಟ ಪ್ರಮುಖವಾಗಿತ್ತು. ಈಕೆ ನವಾಬ್ ವಾಜಿದ್ ಅಲಿ ಷಾ ಅವರ 2ನೇ ಪತ್ನಿ.ಕೋಲ್ಕತಾದಿಂದ ಷಾನನ್ನು ಗಡಿಪಾರು ಮಾಡಲಾಗಿತ್ತು. ಬಳಿಕ ಹಝರತ್ ಬೇಗಂ ಅವಾಧ್ ಆಡಳಿತ ನೋಡಿಕೊಳ್ಳುವುದರ ಜೊತೆಗೆ ಲಕ್ನೋವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದಳು. ತದನಂತರ ಲಕ್ನೋ ಹಾಗೂ ಔಧ್ ಅನ್ನು ಬ್ರಿಟಿಷರು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಹಝರತ್ ಳನ್ನು ಬಲವಂತದಿಂದ ಅಧಿಕಾರದಿಂದ ಕೆಳಗಿಳಿಸಿದ್ದರು. ಕೊನೆಗೆ ಈಕೆ ನೇಪಾಳದಲ್ಲಿ ಆಶ್ರಯ ಪಡೆದಿದ್ದು, 1879ರಲ್ಲಿ ಕಾಠ್ಮುಂಡುವಿನಲ್ಲಿ ಸಾವನ್ನಪ್ಪಿದ್ದಳು.
ಕಿತ್ತೂರು ರಾಣಿ ಚೆನ್ನಮ್ಮ:
ಸ್ವಾತಂತ್ಯಕ್ಕಾಗಿ ಬ್ರಿಟಿಷರ ಬೃಹತ್ ಸೈನ್ಯದ ವಿರುದ್ಧ ಸೆಟೆದು ನಿಂತು ಹೋರಾಟ ನಡೆಸಿದ್ದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಆಕೆಯ ಧೈರ್ಯ, ಸಾಹಸ, ಕೆಚ್ಚು ಇಂದಿಗೂ ಯುವ ಪೀಳಿಗೆಗೆ ಸ್ಫೂರ್ತಿದಾಯಕ. ದಿಟ್ಟ ಹೋರಾಟದ ನಂತರ 1824ರ ಡಿಸೆಂಬರ್ 5ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಹಾಗೂ ಜಾನಕಿಬಾಯಿಯರ ಜೊತೆ ಕೈದಿಯಾಗುತ್ತಾಳೆ. ಡಿಸೆಂಬರ್ 12ರಂದು ಚೆನ್ನಮ್ಮ ಹಾಗೂ ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ಯಲಾಗುತ್ತದೆ. ಅಲ್ಲಿ 4 ವರ್ಷ ಸೆರೆಮನೆವಾಸ ಅನುಭವಿಸಿ 1829ರ ಫೆಬ್ರುವರಿ 2ರಂದು ನಿಧನ ಹೊಂದಿದ್ದಳು.
ಮೇಡಂ ಭಿಕಾಜಿ ಕಾಮಾ:
ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಧ್ರುವತಾರೆಯಾಗಿರುವ ಮಹಿಳೆಯರಲ್ಲಿ ಮುಂಬೈನ ಮೇಡಂ ಭಿಕಾಜಿ ಕಾಮಾ ಒಬ್ಬರಾಗಿದ್ದಾರೆ. ಓ ಮಹನೀಯರೇ ಏಳಿ, ಈ ಧ್ವಜಕ್ಕೊಂದಿಸಿ. ಈ ಧ್ವಜದ ಪ್ರತಿನಿಧಿಯಾಗಿ ಪ್ರಾರ್ಥಿಸುತ್ತೇನೆ. ಓ ವಿಶ್ವದೆಲ್ಲ ಸ್ವತಂತ್ರ್ಯರಾಧಕರೇ ಈ ಧ್ವಜದೊಡನೆ ಸಹಕರಿಸಿ, ಹೀಗೆಂದು ಜರ್ಮನಿಯ ಸ್ಟುವರ್ಟ್ ನಲ್ಲಿ 1907ರಲ್ಲಿ ನಡೆದಿದ್ದ ಸಮಾಜವಾದಿ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಭಾರತದ ಧ್ವಜಾರೋಹಣ ಮಾಡಿದ್ದರು. ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕಾಮಾ ಅವರು 1935ರಲ್ಲಿ ಬಾಂಬೆಗೆ ಆಗಮಿಸಿದ್ದರು. 1936ರ ಆಗಸ್ಟ್ 13ರಂದು ಪಾರ್ಸಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಸುಚೇತಾ ಕೃಪಾಲಾನಿ:
ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವರು ಸುಚೇತಾ ಕೃಪಾಲಾನಿ. ಭಾರತದ ಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಉತ್ತರಪ್ರದೇಶದ ಸಿಎಂ ಆಗಿ 1963ರಿಂದ 67ರವರೆಗೆ ಕಾರ್ಯನಿರ್ವಹಿಸಿದ್ದರು. ಗಾಂಧಿ ಅನುಯಾಯಿಯಾಗಿದ್ದ ಕೃಪಾಲಾನಿ ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿದ್ದರು. 1971ರಲ್ಲಿ ರಾಜಕೀಯದಿಂದ ದೂರ ಸರಿದಿದ್ದರು. 1974ರಲ್ಲಿ ನಿಧನರಾಗಿದ್ದರು.
ಅರುಣಾ ಅಸಾಫ್ ಅಲಿ:
ಅರುಣಾ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ದಿಟ್ಟ ಮಹಿಳೆ. 1942ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಮುಂಬೈಯ ಗೌವಾಲಿಯಾ ಟ್ಯಾಂಕ್ ಮೈದಾನದಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಫ್ಲ್ಯಾಗ್ ಅನ್ನು ಹಾರಿಸಿದ್ದರು. ಸ್ವಾತಂತ್ರ್ಯ ನಂತರ ರಾಜಕೀಯ ಪ್ರವೇಶಿಸಿದ್ದರು. 1958ರಲ್ಲಿ ದೆಹಲಿಯ ಮೊದಲ ಮೇಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 1960ರಲ್ಲಿ ಮೀಡಿಯಾ ಪಬ್ಲಿಷಿಂಗ್ ಹೌಸ್ ಅನ್ನು ಆರಂಭಿಸಿದ್ದರು. ಭಾರತ ರತ್ನ ಪುರಸ್ಕಾರ ಪಡೆದಿದ್ದ ಅರುಣಾ ಗಂಗೂಲಿ ಅವರು 1996ರ ಜುಲೈ 29ರಂದು ನಿಧನರಾಗಿದ್ದರು.
ದುರ್ಗಾಬಾಯ್ ದೇಶ್ ಮುಖ್:
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದುರ್ಗಾಬಾಯಿ ದೇಶಮುಖ್ ತೊಡಗಿಸಿಕೊಂಡಿದ್ದರು. 12ನೇ ವಯಸ್ಸಿನಲ್ಲಿಯೇ ಇಂಗ್ಲಿಷ್ ಭಾಷೆ ಕಲಿಕೆಯ ವಿರುದ್ಧ ಸೆಟೆದು ವಿದ್ಯಾಭ್ಯಾಸ ಮೊಟಕುಗೊಳಿಸಿ ಹೊರಬಂದಿದ್ದರು. ಬಳಿಕ ರಾಜಮಂಡ್ರಿಯಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಬಾಲಿಕಾ ಹಿಂದಿ ಪಾಠಶಾಲೆಯನ್ನು ರಾಜಮಂಡ್ರಿಯಲ್ಲಿ ಆರಂಭಿಸಿದ್ದರು. ಮಹಾತ್ಮಗಾಂಧಿಯ ಅನುಯಾಯಿಯಾಗಿದ್ದ ದೇಶಮುಖ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಬಾರಿ ಜೈಲುವಾಸ ಅನುಭವಿಸಿದ್ದರು. ಈಕೆ ಯಾವತ್ತೂ ಚಿನ್ನಾಭರಣ ಧರಿಸಿರಲಿಲ್ಲ. 1981ರಲ್ಲಿ ದೇಶ್ ಮುಖ್ ಶ್ರೀಕಾಕುಳಂ ಜಿಲ್ಲೆಯ ನರಸಣ್ಣಾಪೇಟೆಯಲ್ಲಿ ನಿಧನರಾಗಿದ್ದರು.
ಆ್ಯನಿ ಬೆಸೆಂಟ್:
ಮಹಿಳೆಯರ ಹಕ್ಕುಗಳು, ಸ್ವಾತಂತ್ರ್ಯ ಹೋರಾಟ, ಜನನ ನಿಯಂತ್ರಣ, ಫ್ಯಾಬಿಯನ್ ಸಮಾಜವಾದ, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ದಿಟ್ಟೆ ಆ್ಯನಿ ಬೆಸೆಂಟ್. ಹೋಮ್ ರೂಲ್ ಚಳವಳಿಯಲ್ಲಿ ಭಾಗವಹಿಸಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 1933ರಲ್ಲಿ ಆ್ಯನಿ ಬೆಸೆಂಟ್ ನಿಧನರಾದರು.
ಮಾತಂಗಿನಿ ಹಜ್ರಾ:
ಪಶ್ಚಿಮಬಂಗಾಳದ ಮಿಡ್ನಾಪುರ ಜಿಲ್ಲೆಯ ಮಾತಂಗಿನಿ ಸ್ವಾತಂತ್ರ್ಯ ಹೋರಾಟದ ದಿಟ್ಟ ಮಹಿಳೆ. ಕ್ವಿಟ್ ಇಂಡಿಯಾ ಹಾಗೂ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇವರನ್ನು ಮಹಿಳಾ ಗಾಂಧಿ ಎಂದೇ ಕರೆಯುತ್ತಿದ್ದರು. ತನ್ನ 73ನೇ ವಯಸ್ಸಿನಲ್ಲೂ 1942ರ ಸೆಪ್ಟೆಂಬರ್ 29ರಂದು ತಮ್ಲುಕ್ ಪೊಲೀಸ್ ಠಾಣೆ ವಶಪಡಿಸಿಕೊಳ್ಳಲು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಹೋಗುತ್ತಿದ್ದಾಗಲೇ ಗುಂಡೇಟು ಬಿದ್ದಿತ್ತು. ಆದರೂ ವಂದೇ ಮಾತರಂ ಎಂದು ಕೂಗುತ್ತಾ ಹೋರಾಟಗಾರರನ್ನು ಹುರಿದುಂಬಿಸಿ ಪ್ರಾಣ ತ್ಯಾಗ ಮಾಡಿದ ಧೀರ ಮಹಿಳೆ ಮಾತಂಗಿನಿ.