Advertisement

Stamp Duty: 10 ದಾಖಲೆಗಳ ಮುದ್ರಾಂಕ ಶುಲ್ಕ ಹೆಚ್ಚಳ

11:22 PM Feb 09, 2024 | Pranav MS |

ಬೆಂಗಳೂರು: ಕರಾರುಪತ್ರ, ಬ್ಯಾಂಕ್‌ ಗ್ಯಾರಂಟಿ, ಜಿಪಿಎ, ವಿವಿಧ ಪ್ರಮಾಣಪತ್ರಗಳು ಸಹಿತ ಸುಮಾರು 10 ದಾಖಲೆಗಳ ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.
ಡಿಸೆಂಬರ್‌ನಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲೇ ಮುದ್ರಾಂಕ ಶುಲ್ಕ ಹೆಚ್ಚಳ ಸಂಬಂಧ ಕರ್ನಾಟಕ ಮುದ್ರಾಂಕ (ತಿದ್ದುಪಡಿ) ಮಸೂದೆಗೆ ಅನುಮೋದನೆ ನೀಡಿತ್ತು. ಅದರ ಪರಿಣಾಮವಾಗಿ ಈಗ ಸರಕಾರಿ ಆದೇಶ ಹೊರಬಿದ್ದಿದ್ದು, ಫೆ.6ರಿಂದಲೇ ಜಾರಿಗೆ ಬಂದಿದೆ.

Advertisement

200 ರೂ. ಇದ್ದ ಕರಾರು ಪತ್ರ, ನಷ್ಟ ಪರಿಹಾರ (ಇನ್‌ಡೆಮ್ನಿಟಿ) ಬಾಂಡ್‌, ಬ್ಯಾಂಕ್‌ ಗ್ಯಾರಂಟಿಗಳ ಮುದ್ರಾಂಕ ಶುಲ್ಕವನ್ನು 500 ರೂ. ಗೆ ಏರಿಸಲಾಗಿದೆ. ಜಿಪಿಎ ಮಾಡಿಸಲು 1,000 ರೂ. ಮುದ್ರಾಂಕ ಶುಲ್ಕ ನೀಡಬೇಕು. 100 ರೂ. ಇದ್ದ ಎಸ್‌ಪಿಎ (ಸ್ಪೆಷಲ್‌ ಪವರ್‌ ಆಫ್ ಅಟಾರಿ°)ಯ ಮುದ್ರಾಂಕ ಶುಲ್ಕವು 500 ರೂ.ಗೆ ಏರಿಕೆಯಾಗಿದ್ದು, 20 ರೂ. ಇದ್ದ ಪ್ರಮಾಣಪತ್ರ(ಅಫಿದವಿತ್‌) ಶುಲ್ಕ 100 ರೂ. ಆಗಿದೆ.

ಸಾಲವನ್ನು ತೀರಿಸಿದ ಬಳಿಕ ಪಡೆಯುವ ಹೈಪೋಥಿಕೇಶನ್‌ ಅಗ್ರಿಮೆಂಟ್‌ನ ಮುದ್ರಾಂಕ ಶುಲ್ಕದಲ್ಲಿ ಸರಾಸರಿ ಶೇ.0.4ರಷ್ಟು ಏರಿಕೆ ಆಗಿದೆ. 10 ಲಕ್ಷ ರೂ.ವರೆಗಿನ ಸಾಲದ ಮೇಲೆ ಶೇ.0.1ರಷ್ಟಿದ್ದ ಮುದ್ರಾಂಕ ಶುಲ್ಕ ಶೇ.0.5ರಷ್ಟು ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next