Advertisement

Greater Noida: 7 ಮಕ್ಕಳು ಸೇರಿದಂತೆ 10 ಮಂದಿ ಲಿಫ್ಟ್ ನೊಳಗೆ ಲಾಕ್… ಮುಂದೇನಾಯ್ತು…?

11:24 AM Nov 30, 2023 | Team Udayavani |

ನವದೆಹಲಿ: ತಾಂತ್ರಿಕ ಸಮಸ್ಯೆಯಿಂದ ವಸತಿ ಸಮುಚ್ಚಯದಲ್ಲಿದ್ದ ಲಿಫ್ಟ್ ಒಂದು ಕೈ ಕೊಟ್ಟ ಪರಿಣಾಮ ಏಳು ಮಕ್ಕಳು ಸೇರಿದಂತೆ ಒಟ್ಟು ಹತ್ತು ಮಂದಿ ಲಿಫ್ಟ್ ನೊಳಗೆ ಸಿಲುಕಿ ಒದ್ದಾಡಿದ ಘಟನೆ ನಡೆದಿದೆ.

Advertisement

ಗ್ರೇಟರ್​ ನೋಯ್ಡಾದ ಬಹುಮಹಡಿ ಹೌಸಿಂಗ್ ಸೊಸೈಟಿಯಲ್ಲಿನ ಲಿಫ್ಟ್​ನಲ್ಲಿ ತಾಂತ್ರಿಕ ದೋಷ ಕಂಡು ಬಂದು ಇದರೊಳಗಿದ್ದ ಹತ್ತು ಮಂದಿ ಆತಂಕಕ್ಕೊಳಗಾಗಿದ್ದಾರೆ, ಲಿಫ್ಟ್ ಸ್ಥಗಿತಗೊಂಡ ವೇಳೆ ಅದರೊಳಗಿದ್ದ ಜನ ಸಹಾಯಕ್ಕಾಗಿ ಕರೆದಿದ್ದಾರೆ ಆದರೆ ಇವರ ಕರೆ ಯಾರ ಕಿವಿಗೂ ಬೀಳಲಿಲ್ಲ. ಸುಮಾರು ಮೂವತ್ತು ನಿಮಿಷಗಳ ಕಾಲ ಲಿಫ್ಟ್ ನೊಳಗೆ ಬಂಧಿಯಾದ ಮಂದಿಗೆ ಜೀವ ಭಯ ಉಂಟಾಗಿ ಜೋರಾಗಿ ಕಿರುಚಿದ್ದಾರೆ ಈ ವೇಳೆ ಅಲ್ಲಿನ ಕೆಲ ನಿವಾಸಿಗಳು ಬಂದು ನೋಡಿದಾಗ ಲಿಫ್ಟ್ ಸ್ಥಗಿತಗೊಂಡಿರುವುದು ಬೆಳಕಿಗೆ ಬಂದಿದೆ ಕೂಡಲೇ ಲಿಫ್ಟ್ ನಿರ್ವಾಹಕರನ್ನು ಸಂಪರ್ಕಿಸಿದ್ದಾರೆ ಬಳಿಕ ಬಂದ ನಿರ್ವಾಹಕರು ಕೆಲ ಹೊತ್ತಿನ ಕಾರ್ಯಾಚರಣೆ ಬಳಿಕ ಲಿಫ್ಟ್ ಒಳಗೆ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಿದ್ದಾರೆ.

ಈ ವೇಳೆ ಮಾಹಿತಿ ನೀಡಿದ ವಸತಿ ಸಮುಚ್ಚಯದ ಮೇಲ್ವಿಚಾರಕರು ಕಟ್ಟಡದಲ್ಲಿ ಹೆಚ್ಚಿನ ಜನರೇಟರ್ ಇಲ್ಲದೆ ಈ ಸಮಸ್ಯೆ ಎದುರಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Fraud: ಪ್ರತಿಷ್ಠಿತ ವಿಎಸ್‌ಟಿ ಡ್ಯೂಕಾಟಿ ಬೈಕ್‌ ಶೋರೂಂಗೆ ವಂಚನೆ; ಮುಖ್ಯಸ್ಥ ಸೆರೆ

Advertisement

Udayavani is now on Telegram. Click here to join our channel and stay updated with the latest news.

Next