Advertisement

ಹತ್ತು ದಿನದೊಳಗೆ ಜಿಲ್ಲೆಯ ಮರಳುಗಾರಿಕೆ ಪುನರಾರಂಭಕ್ಕೆ ಕ್ರಮ: ಕೋಟ

10:51 AM Aug 23, 2019 | Team Udayavani |

ಕೋಟ: ಸರಕಾರ ಈಗಾಗಲೇ ಆಗಸ್ಟ್ 1 ರಿಂದ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡಿದೆ. ಇಂದು ಉಡುಪಿಗೆ ಆಗಮಿಸಿದ ಸಂದರ್ಭ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಮುಖ್ಯಸ್ಥರ ಜತೆ ಚರ್ಚಿಸಿ ಮರಳುಗಾರಿಕೆ ಆರಂಭಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ. ಕಾನೂನಿನ ತೊಡಕುಗಳು ಬಾರದಿದ್ದಲ್ಲಿ ಹತ್ತು ದಿನದೊಳಗೆ ಮರಳುಗಾರಿಕೆ ಪುನರಾರಂಭಗೊಳ್ಳುವ ಭರವಸೆ ಇದೆ ಎಂದು ರಾಜ್ಯ ಸರಕಾರದ ಕ್ಯಾಬಿನೇಟ್ ದರ್ಜೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಅವರು ಗುರುವಾರ ಸಂಜೆ ಪ್ರಥಮ ಬಾರಿಗೆ ಹುಟ್ಟೂರಿಗೆ ಆಗಮಿಸಿದ ಪತ್ರಕರ್ತರೊಂದಿಗೆ ಮಾತುನಾಡುತ್ತ ಈ ವಿಚಾರ ತಿಳಿಸಿದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭದ ಕುರಿತು ಕೇಳಿದ ಪ್ರಶ್ನೆಗೆ, ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಹೋರಾಟ ಮಾಡಿದರ್‍ಲಲಿ ನಾನು ಒಬ್ಬ. ಆದರೆ ಪ್ರಸ್ತುತ ಹಲವಾರು ಸಮಸ್ಯೆಗಳಿರುವುದರಿಂದ ರೈತಮುಖಂಡರು ಹಾಗೂ ಹೋರಾಟಗಾರರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪೂರಕ ಕ್ರಮಕೈಗೊಳ್ಳಲಾಗುವುದು ಎಂದರು.

ಕುಂದಾಪುರ ಮಿನಿವಿಧಾನಸೌಧ ಕಟ್ಟದದ ಕಳಫೆ ಕಾಮಗಾರಿ ಕುರಿತು ಪ್ರಶ್ನಿಸಿದಾಗ, ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲಾಧಿಕಾರಿಗಳ ವರದಿ ಆಧಾರದಲ್ಲಿ ಮುಂದಿನ ಕ್ರಮಕೈಗೊಳ್ಳಲಿದ್ದೇನೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಹುಟ್ಟೂರಲ್ಲಿ ಭವ್ಯ ಸ್ವಾಗತ
ಕೋಟ: ರಾಜ್ಯದ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಗುರುವಾರ ಪ್ರಥಮ ಬಾರಿಗೆ ಹುಟ್ಟೂರಿಗೆ ಆಗಮಿಸಿದ ಕೋಟ ಶ್ರೀನಿವಾಸ ಪೂಜಾರಿಯವರನ್ನುಸ್ಥಳೀಯರು ಭವ್ಯವಾಗಿ ಸ್ವಾಗತಿಸಿದರು.

Advertisement

ಐರೋಡಿ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ಅನಂತರ ಸಾಸ್ತಾನದಲ್ಲೂ ಕಾರ್ಯಕರ್ತರು ಶುಭಕೋರಿದರು. ಅಲ್ಲಿಂದ ನೇರವಾಗಿ ಕುಟುಂಬ ಸಮೇತ ಸಾಲಿಗ್ರಾಮ ಗುರುನರಸಿಂಹ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ದೇಗುಲದ ವತಿಯಿಂದ ನೆರಪರಿಹಾರ ನಿಽಗೆ ೨ಲಕ್ಷ ರೂ ಧೇಣಿಗೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಆನಂತಪದ್ಮನಾಭ ಐತಾಳ ಹಸ್ತಾಂತರಿಸಿದರು.

ಕೋಟ ಅಮೃತೇಶ್ವರೀ ದೇಗುದಲ್ಲಿ ನೂರಾರು ಮಂದಿ ಗ್ರಾಮಸ್ಥರು ವಾಧ್ಯಘೋಷ, ಜೈಕಾರದೊಂದಿಗೆ ಬರಮಾಡಿಕೊಂಡರು ಮತ್ತು ದೇವಿಗೆ ಪೂಜೆ ಸಲ್ಲಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್ ಮತ್ತು ಕಾರ್ಯನಿರ್ವಹಣಾಧಿಕಾರಿ ಸುಧಾಕರ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next