Advertisement

ನವೆಂಬರ್‌ನಲ್ಲಿ ಬ್ಯಾಂಕುಗಳಿಗೆ 10 ದಿನ ರಜೆ!

08:58 PM Oct 26, 2021 | Team Udayavani |

ಮುಂಬೈ: ಮುಂದಿನ ತಿಂಗಳು ದೀಪಾವಳಿ ಹಾಗೂ ಛಾತ್ರ ಪೂಜೆ ಮುಂತಾದ ಹಬ್ಬ ಅಥವಾ ಧಾರ್ಮಿಕ ವಿಶೇಷಗಳು ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ, ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರ ಸೇರಿದಂತೆ ಒಟ್ಟು 17 ದಿನ ರಜೆ ಇರಲಿವೆ!

Advertisement

ಆದರೆ, ಎಲ್ಲಾ ಹಬ್ಬಗಳು, ಧಾರ್ಮಿಕ ಆಚರಣೆಗಳು ಕೆಲವು ರಾಜ್ಯಗಳಿಗೆ ಅಥವಾ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಅಲ್ಲಿ ಹೊರತುಪಡಿಸಿ ಉಳಿದ ಕಡೆ ಆ ಬ್ಯಾಂಕುಗಳು ಕಾರ್ಯ ನಿರ್ವಹಿಸಲಿವೆ.

ಕರ್ನಾಟಕಲ್ಲಿರುವ ಬ್ಯಾಂಕುಗಳಿಗೆ 10 ದಿನಗಳ ಕಾಲ ರಜೆ ಇರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.

ಇದನ್ನೂ ಓದಿ:ಗಾಂಜಾ ಬೆಳೆದಿದ್ದ ಜಮೀನಿನ ಮೇಲೆ ದಾಳಿ ನಡೆಸಿ 40 ಕೆ.ಜಿ ಹಸಿ ಗಾಂಜಾ ವಶ: ಆರೋಪಿ ಪರಾರಿ

ರಾಜ್ಯದಲ್ಲಿ ಬ್ಯಾಂಕುಗಳಿಗೆ ಯಾವ್ಯಾವಾಗ ರಜೆ?
ನ. 1: ಕನ್ನಡ ರಾಜ್ಯೋತ್ಸವ
ನ. 3: ನರಕ ಚತುರ್ದಶಿ
ನ. 5: ದೀಪಾವಳಿ
ನ. 22: ಕನಕದಾಸ ಜಯಂತಿ
ನ. 7, 14, 21, 28: ಭಾನುವಾರ
ನ. 13, 27: ಎರಡನೇ ಮತ್ತು ನಾಲ್ಕನೇ ಭಾನುವಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next