Advertisement

10 ಕೋ.ರೂ. ವೆಚ್ಚದಲ್ಲಿ ಮೂಲ್ಕಿ ತಾಲೂಕು ಮಿನಿ ವಿಧಾನಸೌಧ ನಿರ್ಮಾಣ

08:16 PM Aug 15, 2021 | Team Udayavani |

ಮೂಲ್ಕಿ: ಮೂಲ್ಕಿ ತಾಲೂಕಿನಲ್ಲಿ 10 ಕೋ.ರೂ. ವೆಚ್ಚದಲ್ಲಿ ತಾಲೂಕು ಮಿನಿ ವಿಧಾನಸೌಧ ನಿರ್ಮಾಣವಾಗಲಿದೆ. ಈಗಾಗಲೇ ಎರಡು ಕೋ.ರೂ. ಮೊತ್ತ ವನ್ನು ಬಿಡುಗಡೆಗೊಳಿಸಲಾಗಿದೆ. 5 ಕೋ.ರೂ. ವೆಚ್ಚದ ಇನ್‌ಸ್ಪೆಕ್ಷನ್‌ ಬಂಗಲೆ ನಿರ್ಮಾಣವಾಗಲಿದೆ. ಮೂಲ್ಕಿ ತಾಲೂಕಿನ ಸಂಪೂರ್ಣ ಅಭಿವೃದ್ಧಿಗೆ ಪರಿಶ್ರಮಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.

Advertisement

ಮೂಲ್ಕಿ ನ.ಪಂ. ವತಿಯಿಂದ ಮೂಲ್ಕಿ ತಾಲೂಕು ವ್ಯಾಪ್ತಿಯ 75ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾ ರೋಹಣಗೈದು ಅವರು ಮಾತನಾಡಿದರು.

ಮೂಲ್ಕಿ-ಮೂಡುಬಿದಿರೆ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 9 ಸಾವಿರ ಫ‌ಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಯಾವುದೇ ಜಾತಿ, ಮತ ಮತ್ತು ಪಕ್ಷ ಬೇಧವಿಲ್ಲದೆ ನೈಜ ಫ‌ಲಾನುಭವಿಗಳಿಗೆ ಒದಗಿಸಲಾಗಿದೆ ಎಂದರು.

ಆತ್ಮವಿಶ್ವಾಸ, ನಂಬಿಕೆ ಹಾಗೂ ದೃಢ ಸಂಕಲ್ಪದಿಂದ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಸ್ವಾತಂತ್ರ್ಯ ಹೋರಾಟಗಾರರ ನೆನಪಿನಲ್ಲಿ ಈ ಬಾರಿಯ ಸ್ವಾತಂತ್ರ್ಯ ಉತ್ಸವವನ್ನು ಕೊರೊನಾ ಸಂಕಷ್ಟದ ನಡುವೆ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಮೂಲ್ಕಿ ತಹಶಿಲ್ದಾರ್‌ ಕಮಲಮ್ಮ, ಉಪಾಧ್ಯಕ್ಷ ಸತೀಶ್‌ ಅಂಚನ್‌, ಕೆಮ್ರಾಲ್‌ ಗ್ರಾ.ಪಂ. ಅಧ್ಯಕ್ಷೆ ಲೀಲಾ, ಮೂಲ್ಕಿ ಪೊಲೀಸ್‌ ಠಾಣಾಧಿಕಾರಿ ಕುಸುಮಾಧರ್‌, ಸರಕಾರಿ ಆಸ್ಪತ್ರೆಯ ಆಡಳಿತ ಆರೋಗ್ಯಾಧಿಕಾರಿ ಡಾ| ಕೃಷ್ಣ, ಮೂಲ್ಕಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ವಿನಾಯಕ ತೋರಗಲ್‌, ನಗರ ಪಂಚಾಯತ್‌ ಮಾಜಿ ಅಧ್ಯಕ್ಷ ಸುನಿಲ್‌ ಅಳ್ವ, ಮಾಜಿ ಮುಖ್ಯಾಧಿಕಾರಿ ಡಾ| ಹರಿಶ್ಚಂದ್ರ ಪಿ. ಸಾಲ್ಯಾನ್‌ ಉಪಸ್ಥಿತರಿದ್ದರು.

Advertisement

ಮೂಲ್ಕಿ ತಾಲೂಕು ವ್ಯಾಪ್ತಿಯ ಕೆಲವು ಫಲಾನುಭವಿಗಳಿಗೆ ಸಾಂಕೇತಿಕವಾಗಿ 94ಸಿಸಿ ಅನ್ವಯ ಮನೆ ನಿವೇಶನದ ಹಕ್ಕು ಪತ್ರಗಳನ್ನು ಶಾಸಕರು ವಿತರಿಸಿದರು. ಮೂಲ್ಕಿ ಗೃಹರಕ್ಷಕ ದಳದ ಘಟಕಾಧಿಕಾರಿಯಾಗಿ ನಿವೃತ್ತರಾಗಿದ್ದ ಎಚ್‌. ಮನ್ಸೂರ್‌ ಅವರಿಗೆ ಕಾರಣಾಂತರಗಳಿಂದ ವಿತರಣೆಯಾಗದೆ ಬಾಕಿಯಾಗಿದ್ದ ಮುಖ್ಯಮಂತ್ರಿಗಳ ಪದಕ ಈ ಬಾರಿ ನೀಡಲಾಗಿದ್ದು, ಇದಕ್ಕಾಗಿ ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌ ಅವರು ಮನ್ಸೂರ್‌ ಅವರನ್ನು ಗೌರವಿಸಿದರು.

ನ.ಪಂ. ಅಧ್ಯಕ್ಷ ಸುಭಾಷ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಪಿ. ಚಂದ್ರಪೂಜಾರಿ ಸ್ವಾಗತಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಶೈಲೇಶ್‌ ಕುಮಾರ್‌ ವಂದಿಸಿದರು. ಎಂ. ಭಾಸ್ಕರ ಹೆಗ್ಡೆ ನಿರೂಪಿಸಿದರು.

700 ಕೋ.ರೂ. ವೆಚ್ಚದ ವಿವಿಧಯೋಜನೆಗಳು
ತನ್ನ ಆಡಳಿತದಲ್ಲಿ ಕ್ಷೇತ್ರಕ್ಕೆ ಸುಮಾರು 700 ಕೋ.ರೂ. ವೆಚ್ಚದ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರಸ್ತೆ, ನೀರು ಮತ್ತು ಸಮುದ್ರ ತಡೆಗೋಡೆಯಲ್ಲದೆ ಹಲವಾರು ಮೂಲಸೌಕರ್ಯಗಳಿಗೆ ಒತ್ತು ನೀಡಲಾಗಿದೆ ಎಂದು ಶಾಸಕರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next