Advertisement

ಕನ್ನಡ ಕಲಿಕೆಗೆ 10 ಕೋ.ರೂ.: ಜೆಎನ್‌ಯು ಕುಲಪತಿ

01:04 AM Dec 13, 2022 | Team Udayavani |

ಹೊಸದಿಲ್ಲಿ: ದೇಶದ ಸಾಂಸ್ಕೃತಿಕ ವೈಭವವನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಇಲ್ಲಿನ ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾನಿಲಯವು ಹೊಸ “ಭಾರತೀಯ ಭಾಷೆಗಳ ಶಾಲೆ’ ಎಂಬ ಕೋರ್ಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಕನ್ನಡ ಸಹಿತ ದೇಶದ ವಿವಿಧ ಭಾಷೆಗಳ ಶಿಕ್ಷಣ ನೀಡಲಾಗುತ್ತದೆ.

Advertisement

ಮುಂದಿನ ವರ್ಷದಿಂದಲೇ ಈ ಕೋರ್ಸ್‌ಗಳು ಆರಂಭವಾಗಲಿದ್ದು, ಈಗಾಗಲೇ ತಮಿಳುನಾಡು ಸರಕಾರ 10 ಕೋಟಿ ರೂ.ಗಳನ್ನು ನೀಡಿದೆ.

ಕರ್ನಾಟಕ, ಒಡಿಶಾ, ಮಹಾರಾಷ್ಟ್ರ, ಅಸ್ಸಾಂ ಸರಕಾರಗಳೂ ತಲಾ 10 ಕೋ.ರೂ. ನೀಡಲು ಮುಂದಾಗಿವೆ. ನಾವು ಕೋರ್ಸ್‌ಗಳ ಆರಂಭಕ್ಕೂ ಮುನ್ನವೇ 50 ಕೋಟಿ ರೂ.ಗಳನ್ನು ಹೊಂದಿದ್ದೇವೆ ಎಂದು ಜೆಎನ್‌ಯು ಕುಲಪತಿ ಶಾಂತಿಶ್ರೀ ಡಿ. ಪಂಡಿತ್‌ ಹೇಳಿದ್ದಾರೆ.

ಈ ಶಾಲೆಯ ಮೂಲಕ ಭಾಷೆಗಳ ಆಳವಾದ ಅಧ್ಯಯನ, ಸಾಹಿತ್ಯದ ಅರಿವು, ಕಲೆ, ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ತಿಳಿಸಿಕೊಡಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next