Advertisement

10.10.2020 ಮದುವೆಗೆ ಭಾರೀ ಡಿಮಾಂಡ್‌!

02:03 AM Oct 10, 2020 | mahesh |

ಸಿಂಗಾಪುರ: ಭಾರತದಲ್ಲಿ ಅಮೃತ ಸಿದ್ಧಿಯೋಗದಂಥ ವಿಶೇಷ ದಿನಗಳಲ್ಲಿ ಹೆಚ್ಚು ಮದುವೆಗಳು, ಗೃಹಪ್ರವೇಶಗಳು ನಡೆಯುವುದು ವಾಡಿಕೆ. ಇಂಥ ಯಾವುದೇ ಧಾರ್ಮಿಕ ಕಾರಣವಿಲ್ಲದಿದ್ದರೂ ಸಿಂಗಾಪುರದಲ್ಲಿ ಅ. 10ರಂದು 876 ಮದುವೆಗಳು ಜರಗಲಿದ್ದು, ಈ ವಿಷಯ ಖುದ್ದು ಅಲ್ಲಿನ ಜನರೇ ಹುಬ್ಬೇರಿಸುವಂತೆ ಮಾಡಿದೆ.

Advertisement

ಸಿಂಗಾಪುರದ ರಿಜಿಸ್ಟ್ರಿ ಆಫ್ ಮ್ಯಾರೇಜಸ್‌ (ಆರ್‌ಒಎಂ) ಹಾಗೂ ರಿಜಿಸ್ಟ್ರಿ ಆಫ್ ಮುಸ್ಲಿಂ ಮ್ಯಾರೇಜಸ್‌ (ಆರ್‌ಒಎಂಎಂ) ಕಚೇರಿಗಳಿಗೆ 876 ವಿವಾಹ ನೋಂದಣಿ ಅರ್ಜಿಗಳು ಬಂದಿದ್ದು, ಅ. 10ರಂದು ಅತೀ ಹೆಚ್ಚು ಮದುವೆಗಳು ಜರಗಲಿರುವುದಕ್ಕೆ ಸಾಕ್ಷಿಯಾಗಿದೆ.

ಇದರ ಹಿಂದಿನ ಕಾರಣವನ್ನು ಸಿಂಗಾಪುರದ ವೆಡ್ಡಿಂಗ್‌ ಪ್ಲಾನರ್ಸ್‌ ಹಾಗೂ ಅಲ್ಲಿನ ಸಂಪ್ರದಾಯದ ಪುರೋಹಿತರು ಬಹಿರಂಗಪಡಿಸಿದ್ದಾರೆ.

ಈ ವರ್ಷದ ಅಕ್ಟೋಬರ್‌ 10ನೇ ದಿನಾಂಕ ವಿಶೇಷವಾಗಿದೆ. ಆ ದಿನವನ್ನು “ಟೆನ್‌-ಟೆನ್‌-ಟ್ವೆಂಟಿ ಟ್ವೆಂಟಿ’ (10-10-2020) ಎಂದು ಸುಲಭವಾಗಿ ನೆನಪಿಟ್ಟುಕೊಳ್ಳಬಹುದು. ಹಾಗಾಗಿ, ಹೆಚ್ಚಿನ ಜೋಡಿಗಳು ಈ ದಿನಾಂಕವನ್ನೇ ಮದುವೆಗೆ ಆಯ್ಕೆ ಮಾಡಿವೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next