ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ನಡೆದ ಅತ್ಯಂತ ಕಳವಳಕಾರಿ, ನಿರ್ಲಜ್ಜ ಮತ್ತು ಹೇಯ ಕೃತ್ಯವೊಂದರಲ್ಲಿ 33 ವರ್ಷ ಪ್ರಾಯದ ಕಾಮಾಂಧನೊಬ್ಬ ತನ್ನ ಇಬ್ಬರು ಪುಟ್ಟ ಮಕ್ಕಳೆದುರೇ ಒಂದೂವರೆ ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ತನ್ನ 4 ವರ್ಷ ಪ್ರಾಯದ ಮಗ ಮತ್ತು 2 ವರ್ಷ ಪ್ರಾಯದ ಮಗಳೊಂದಿಗೆ ಆಟವಾಡಲೆಂದು ಬಂದಿದ್ದ ಮಗುವನ್ನು ಕೋಣೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಮನೆಗೆ ಹಿಂತಿರುಗಿದಾಗ ಜನನಾಂಗದ ಬಳಿ ತೀವ್ರ ರಕ್ತಸ್ರಾವವಾಗುತ್ತಿರುವುದು ಕಂಡು ಕಂಗಾಲಾಗಿದ್ದಾರೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದು, ಪೋಕ್‌ಸೋ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೃತ್ಯ ನಡೆದ ವೇಳೆ ಆರೋಪಿಯ ಪತ್ನಿ ಮನೆಯ ಮಹಡಿಯ ಮೇಲಿದ್ದರು ಎಂದು ತಿಳಿದು ಬಂದಿದೆ.
ಸಂತ್ರಸ್ತ ಮಗುವಿನ ತಾಯಿ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾತ್ತಿದೆ.