Advertisement

AIIMS;9 ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ: ಸಯಾಮಿ ಅವಳಿ ಮಕ್ಕಳನ್ನು ಬೇರ್ಪಡಿಸಿದ ವೈದ್ಯರು

04:55 PM Jul 27, 2023 | Team Udayavani |

ಹೊಸದಿಲ್ಲಿ: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ(AIIMS)  9 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ, ಕಳೆದ ವರ್ಷ ಎದೆ ಮತ್ತು ಹೊಟ್ಟೆಯಿಂದ ಸೇರಿಕೊಂಡೇ ಹುಟ್ಟಿದ್ದ ಸಯಾಮಿ ಅವಳಿಗಳಾದ ರಿದ್ಧಿ ಮತ್ತು ಸಿದ್ಧಿ ಎಂಬ ಮಕ್ಕಳನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದೆ ಎಂದು ಬುಧವಾರ ವೈದ್ಯರು ತಿಳಿಸಿದ್ದಾರೆ.

Advertisement

ಉತ್ತರ ಪ್ರದೇಶದ ಬರೇಲಿಯ ಮಹಿಳೆಯ ಗರ್ಭಧಾರಣೆಯ ನಾಲ್ಕನೇ ತಿಂಗಳಲ್ಲಿ  ‘ಥೋರಾಕೊ-ಆಂಫಾಲೋಪಾಗಸ್ ಸಯಾಮಿ ಅವಳಿಗಳು’ ಎಂದು ಗುರುತಿಸಲಾಯಿತು, ನಂತರ ದಂಪತಿಗಳಿಗೆ AIIMS ನಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯಲು ಸೂಚಿಸಲಾಯಿತು. ಹೆಣ್ಣುಮಕ್ಕಳ ಜನನ ಮತ್ತು ಅಂತಿಮವಾಗಿ ಬೇರ್ಪಡುವಿಕೆಗೆ ಸರಿಯಾದ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದು ಏಮ್ಸ್ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಮಿನು ಬಾಜ್‌ಪೇಯ್ ಹೇಳಿದ್ದಾರೆ.

ಸಯಾಮಿ ಅವಳಿ ಮಕ್ಕಳು ಕಳೆದ ವರ್ಷ ಜುಲೈ 7 ರಂದು ಜನಿಸಿದ್ದರು. ಯಕೃತ್ತು, ಪಕ್ಕೆಲುಬುಗಳನ್ನು ಹಂಚಿಕೊಂಡಿದ್ದರು. ಐದು ತಿಂಗಳ ಕಾಲ ICU ನಲ್ಲಿದ್ದರು. ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಜೂನ್ 8 ರಂದು ಬೇರ್ಪಡಿಸಲಾಯಿತು”ಎಂದು ಆಸ್ಪತ್ರೆಯು ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಶಸ್ತ್ರಚಿಕಿತ್ಸೆಯ ಆಘಾತವನ್ನು ಸಹಿಸಿಕೊಳ್ಳುವ ಸಲುವಾಗಿ11 ತಿಂಗಳ ಮಗುವಾಗಿದ್ದಾಗ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಪ್ರಬುದ್ ಗೋಯೆಲ್ ಹೇಳಿದ್ದಾರೆ.

”ಇಬ್ಬರಲ್ಲೂ ಎರಡೂ ಹೃದಯಗಳು ಒಂದಕ್ಕೊಂದು ಹತ್ತಿರವಾಗಿದ್ದವು, ಬಹುತೇಕ ಸ್ಪರ್ಶ ಮತ್ತು ಸಂಪರ್ಕದಲ್ಲಿ ಬಡಿಯುತ್ತಿದ್ದವು. ಪೆರಿಕಾರ್ಡಿಯಮ್ ಭಾಗಶಃ ಬೆಸೆದಿತ್ತು” ಎಂದು ಗೋಯೆಲ್ ಹೇಳಿದರು.

Advertisement

ಶಸ್ತ್ರಚಿಕಿತ್ಸೆ ಸುಮಾರು ಒಂಬತ್ತು ಗಂಟೆಗಳ ಕಾಲ ನಡೆದರೂ, ಶಸ್ತ್ರಚಿಕಿತ್ಸೆಯ ಪೂರ್ವ ಮತ್ತು ನಂತರದ ಪ್ರಕ್ರಿಯೆಗಳಿಗೆ 3.5 ಗಂಟೆಗಳು ಹೆಚ್ಚುವರಿಯಾಗಿ ಬೇಕಾಯಿತು ಎಂದು ವೈದ್ಯರು ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಯ ನಂತರ, ಅವಳಿಗಳು ತಮ್ಮ ಮೊದಲ ಹುಟ್ಟುಹಬ್ಬವನ್ನು ಆಸ್ಪತ್ರೆಯಲ್ಲೇ ಆಚರಿಸಿಕೊಂಡರು ಎಂದು ವೈದ್ಯರು ತಿಳಿಸಿದ್ದಾರೆ.

ಏಮ್ಸ್ ನಲ್ಲಿ ಇಂತಹ ಯಶಸ್ವಿ ಶಸ್ತ್ರಚಿಕಿತ್ಸೆ ಇದೇ ಮೊದಲಲ್ಲ. 2017 ರಲ್ಲಿ, ಒಡಿಶಾದ ಜಗನ್ನಾಥ್ ಮತ್ತು ಬಲರಾಮ್ ಎನ್ನುವವರನ್ನು ವೈದ್ಯರು ಯಶಸ್ವಿಯಾಗಿ ಬೇರ್ಪಡಿಸಿದ್ದರು, ಅವರು ಕ್ರಾನಿಯೊಪಾಗಸ್ ಅವಳಿಗಳಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next