ಕೋಟ: ಮೆಸ್ಕಾಂ ಕೋಟ ಉಪವಿಭಾಗ ವ್ಯಾಪ್ತಿಯ ಗ್ರಾಹಕರ ಜನಸಂಪರ್ಕ ಸಭೆ ಶುಕ್ರವಾರದಂದು ಉಪವಿಭಾಗ ಕಚೇರಿಯಲ್ಲಿ ಉಡುಪಿ ಕಾರ್ಯನಿರ್ವಾಹಕ ಎಂಜಿನಿಯರ್‌ದಿನೇಶ್ ಉಪಾಧ್ಯರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭ ಗ್ರಾಹಕರು ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
ಕೋಟದಲ್ಲಿ ಜು.1ರಿಂದ 24ಗಂಟೆಗೆ ಸೇವೆ ಒದಗಿಸುವ ಸರ್ವಿಸ್ ಸೆಂಟರ್ ಕಾರ್ಯನಿರ್ವಹಿಸಲಿದೆ. ಇದುವರೆಗೆ ರಾತ್ರಿ ವೇಳೆ ವಿದ್ಯುತ್ ಅಪಘಾತ, ಲೈನ್‌ನಲ್ಲಿ ಸಮಸ್ಯೆಯಾದಾಗ ತುರ್ತು ದುರಸ್ತಿಗೊಳಿಸುತ್ತಿರಲಿಲ್ಲ. ಇನ್ನು ಮುಂದೆ ಸರ್ವಿಸ್ ಸೆಂಟರ್‌ನಲ್ಲಿ ರಾತ್ರಿ ಪಾಳಿಯಲ್ಲೂ ನಿಯೋಜಿತ ಸಿಬಂದಿ ಕಾರ್ಯನಿರ್ವಹಿಸಲಿದ್ದು, ದೂರುಗಳು ಬಂದಾಗ ತತ್‌ಕ್ಷಣ ಸ್ಥಳಕ್ಕೆ ತೆರಳಿ ದುರಸ್ತಿಗೊಳಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದರು.
ಮಿನಿ ಪವರ್ ಸ್ಟೇಷನ್
ಸಾಸ್ತಾನ ಭಾಗಕ್ಕೆ ಪ್ರತ್ಯೇಕ ಲೈನ್ ವ್ಯವಸ್ಥೆ ಇಲ್ಲದಿರುವುದರಿಂದ ಯಾವುದೇ ಭಾಗದಲ್ಲಿ ಸಮಸ್ಯೆಯಾದರೂ ಸಾಸ್ತಾನದಲ್ಲಿ ಪವರ್ ಆಫ್ ಮಾಡಲಾಗುತ್ತದೆ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಪಾಂಡೇಶ್ವರ ಗ್ರಾ.ಪಂ. ಅಧ್ಯಕ್ಷ ವಿಟuಲ ಪೂಜಾರಿ, ಸ್ಥಳೀಯರಾದ ಪ್ರತಾಪ್ ಶೆಟ್ಟಿ ಸಾಸ್ತಾನ, ವಿಟuಲ ಪೂಜಾರಿ, ಪ್ರಶಾಂತ್ ಶೆಟ್ಟಿ ಮನವಿ ಮಾಡಿದರು. ಈ ಕುರಿತು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಹಾಗೂ ಕೋಟ ಹಳೆ ಉಪವಿಭಾಗ ಕಚೇರಿಯ ಬಳಿ ಮಿನಿ ಪವರ್ ಸ್ಟೇಷನ್ ನಿರ್ಮಾಣವಾಗಲಿದ್ದು, ಸಾಸ್ತಾನಕ್ಕೆ ಪ್ರತ್ಯೇಕ ಲೈನ್ ವ್ಯವಸ್ಥೆ ಮಾಡಲಾಗುವುದು ಎಂದರು.
Advertisement
24ಗಂಟೆ ಸರ್ವಿರ್ಸ್ ಸೆಂಟರ್
Related Articles
Advertisement
ಸಂಘ-ಸಂಸ್ಥೆಗಳು ಕೈಜೋಡಿಸಿ
ಮೆಸ್ಕಾಂನಲ್ಲಿ ಸಿಬಂದಿ ಕೊರತೆ ಇರುವುದರಿಂದ ತುರ್ತಾಗಿ ಮರದ ಕೊಂಬೆಗಳನ್ನು ಕಟ್ ಮಾಡುವುದು ಮುಂತಾದ ಕೆಲಸಗಳಿಗೆ ವಿಳಂಬವಾಗುತ್ತದೆ. ಪ್ರತಿಯೊಂದು ಊರಿನಲ್ಲಿರುವ ಸಂಘ-ಸಂಸ್ಥೆಗಳು ನಮ್ಮೊಂದಿಗೆ ಮರದ ಕೊಂಬೆ ತೆರವು ಮುಂತಾದ ಕೆಲಸಗಳಲ್ಲಿ ಕೈ ಜೋಡಿಸಿದರೆ ಅನುಕೂಲವಾಗುತ್ತದೆ ಎಂದರು.
ಮಧ್ಯವರ್ತಿಗಳಿಗೆ ಕಡಿವಾಣ ಹಾಕಿ
ವಾಹನ ಅಪಘಾತವಾಗಿ ವಿದ್ಯುತ್ ಕಂಬ ತುಂಡಾದಾಗ ಹಾಗೂ ತಾತ್ಕಾಲಿಕ ಸಂಪರ್ಕ ಮುಂತಾದ ಕೆಲಸಗಳನ್ನು ಖಾಸಗಿ ಗುತ್ತಿಗೆದಾರರಿಂದ ಮಾಡಿಸಲಾಗುತ್ತದೆ. ಆದರೆ ಈ ಗುತ್ತಿಗೆದಾರರು ಇಲಾಖೆಗೆ ನೀಡಬೇಕಾದ ಹಣಕ್ಕಿಂತ ಎರಡು-ಮೂರುಪಟ್ಟು ಹೆಚ್ಚು ವಸೂಲಿ ಮಾಡುತ್ತಾರೆ. ಈ ವ್ಯವಸ್ಥೆಯಿಂದ ಗ್ರಾಹಕರ ಶೋಷಣೆಯಾಗುತ್ತಿದೆ. ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ರಾಘವೇಂದ್ರ ಐರೋಡಿ ಆಗ್ರಹಿಸಿದರು. ಹೆಚ್ಚಿನ ಹಣ ವಸೂಲಿ ಮಾಡದಂತೆ ಗುತ್ತಿಗೆದಾರರಿಗೆ ಸೂಚನೆ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಅನಗತ್ಯ ಪವರ್ ಕಟ್ ತಪ್ಪಿಸಿಕೆಲವೊಮ್ಮೆ ಯಾವುದೋ ಲೈನ್ ದುರಸ್ತಿ ಮಾಡುವಾಗ ಅನಗತ್ಯವಾದ ಇನ್ನೊಂದು ಲೈನ್ ಆಫ್ ಮಾಡಲಾಗುತ್ತದೆ. ಈ ಕುರಿತು ಪ್ರಶ್ನಿಸಿದರೆ ಸರಿಯಾದ ಉತ್ತರ ಸಿಗುವುದಿಲ್ಲ. ಗ್ರಾಹಕರ ಸಮಸ್ಯೆಗಳಿಗೆ ಕೆಲವು ಕೆಳಹಂತದ ಸಿಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ. ಇದರಿಂದ ಗ್ರಾಹಕರಿಗೆ ಸಾಕಷ್ಟು ಸಮಸ್ಯೆಯಾಗುತ್ತದೆ ಎಂದು ಗ್ರಾಹಕರು ತಿಳಿಸಿದರು. ಗ್ರಾಹಕರ ಬಳಿ ಸೌಜನ್ಯದಿಂದ ವರ್ತಿಸುವಂತೆ ಕೆಳ ಹಂತದ ಸಿಬಂದಿಗೆ ಸೂಚನೆ ನೀಡುವುದಾಗಿ ಭರವಸೆ ಕೇಳಿ ಬಂತು.
ಕುಂದಾಪುರ ಇ.ಇ. ರಾಕೇಶ್, ಕೋಟ ಎ.ಇ. ಪ್ರತಾಪ್ ಶೆಟ್ಟಿ, ಸಾಸ್ತಾನ ಶಾಖಾಧಿಕಾರಿ ಮಹೇಶ್ ಹಾಗೂ ಸಾಹೇಬ್ರಕಟ್ಟೆ ಪ್ರಭಾರ ಶಾಖಾಧಿಕಾರಿ ಉಮೇಶ್, ಕೋಟದ ಪ್ರಭಾರ ಶಾಖಾಧಿಕಾರಿ ಚಂದ್ರಶೇಖರ್, ತಾಂತ್ರಿಕ ವಿಭಾಗದ ಭಾಗ್ಯಶ್ರೀ ದೊಡ್ಮನೆ ಉಪಸ್ಥಿತರಿದ್ದರು.
ಜನಸಂಪರ್ಕ ಸಭೆ ನಡೆಯುವ ಕುರಿತು ಪತ್ರಿಕಾ ಪ್ರಕಟನೆ ನೀಡಿಲ್ಲ ಹಾಗೂ ಅಧಿಕಾರಿಗಳ ಮೂಲಕ ಗಮನಕ್ಕೆ ತರುವ ಕೆಲಸವಾಗಿಲ್ಲ. ಹೀಗಾಗಿ ಗ್ರಾಹಕರಿಗೆ ಸಭೆ ನಡೆಯುತ್ತಿರುವ ಕುರಿತು ಮಾಹಿತಿ ಇಲ್ಲ. ಗ್ರಾಹಕರೇ ಇಲ್ಲದೆ ಕೇವಲ ಕಾಟಾಚಾರಕ್ಕೆ ಸಭೆ ನಡೆಸಿ ಪ್ರಯೋಜನವೇನು ಎಂದು ರಾಘವೇಂದ್ರ ಐರೋಡಿ ಅಸಮಾಧಾನ ವ್ಯಕ್ತಪಡಿಸಿದರು ಹಾಗೂ ಮುಂದೆ ಕಡ್ಡಾಯವಾಗಿ ಮಾಹಿತಿ ನೀಡುವಂತೆ ಸೂಚಿಸಿದರು.
ಗ್ರಾಹಕರಿಗೆ ಮಾಹಿತಿ ನೀಡದ ಬಗ್ಗೆ ಅಸಮಾಧಾನ
ಜನಸಂಪರ್ಕ ಸಭೆ ನಡೆಯುವ ಕುರಿತು ಪತ್ರಿಕಾ ಪ್ರಕಟನೆ ನೀಡಿಲ್ಲ ಹಾಗೂ ಅಧಿಕಾರಿಗಳ ಮೂಲಕ ಗಮನಕ್ಕೆ ತರುವ ಕೆಲಸವಾಗಿಲ್ಲ. ಹೀಗಾಗಿ ಗ್ರಾಹಕರಿಗೆ ಸಭೆ ನಡೆಯುತ್ತಿರುವ ಕುರಿತು ಮಾಹಿತಿ ಇಲ್ಲ. ಗ್ರಾಹಕರೇ ಇಲ್ಲದೆ ಕೇವಲ ಕಾಟಾಚಾರಕ್ಕೆ ಸಭೆ ನಡೆಸಿ ಪ್ರಯೋಜನವೇನು ಎಂದು ರಾಘವೇಂದ್ರ ಐರೋಡಿ ಅಸಮಾಧಾನ ವ್ಯಕ್ತಪಡಿಸಿದರು ಹಾಗೂ ಮುಂದೆ ಕಡ್ಡಾಯವಾಗಿ ಮಾಹಿತಿ ನೀಡುವಂತೆ ಸೂಚಿಸಿದರು.